Friday, May 01, 2015

Daily Crimes Reported as On 01/05/2015 at 07:00 Hrsಹಲ್ಲೆ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಸುಧಾಕರ ಶೆಟ್ಟಿ (52) ಎಂಬುವವರು ದಿನಾಂಕ 30-04-2015 ರಂದು ತನ್ನ ಬಾಬ್ತು ಕೆಎ.20.ವೈ.2189 ನೇ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಹಿಂಬದಿಯಲ್ಲಿ ತನ್ನ ಭಾವ ಶಂಭು ಶೆಟ್ಟಿಯವರನ್ನು ಕೂರಿಸಿಕೊಂಡು ಬಡಾ ತಿಂಗಳೆಯಿಂದ ಹೆಬ್ರಿ ಕಡೆಗೆ ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 8:30 ಗಂಟೆಗೆ ನಾಡ್ಪಾಲು ಗ್ರಾಮದ ಗೌಡ್ರಜೆಡ್ಡು ಎಂಬಲ್ಲಿಯ ಮಣ್ಣು ರಸ್ತೆಯಲ್ಲಿ ಬರುತ್ತಿರುವಾಗ ಭುಜಂಗ ಶೆಟ್ಟಿಯವರು ರಸ್ತೆಯ ಎಡ ಬದಿಯಲ್ಲಿ ನಿಂತು ಒಂದು ಬಿದಿರು ಕೋಲನ್ನು ರಸ್ತೆಗೆ ಅಡ್ಡವಾಗಿ ಹಿಡಿದು ಪಿರ್ಯಾದಿದಾರರ ಮೋಟಾರ್ ಸೈಕಲನ್ನು ನಿಲ್ಲಿಸಿ, ತನ್ನ ಬಲ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದಿದಾರರ ಮೋಟಾರ್ ಸೈಕಲ್‌ ಹಿಂಬದಿಯಲ್ಲಿ ಕುಳಿತಿದ್ದ ಶಂಭು ಶೆಟ್ಟಿಯವರ ಎಡ ಕೈಗೆ ಬಲವಾಗಿ ಕಡಿದು ನಂತರ ಪಿರ್ಯಾದಿದಾರರ ತಲೆಗೆ ಬಲವಾಗಿ ಕಡಿದ ಪರಿಣಾಮ ಶಂಭು ಶೆಟ್ಟಿ ಹಾಗೂ ಪಿರ್ಯಾದಿದಾರರು ಕೆಳಗೆ ಬಿದ್ದಿದ್ದು, ಬಿದ್ದ ಸಂದರ್ಭದಲ್ಲಿ ಭುಜಂಗ ಶೆಟ್ಟಿಯವರು ಪುನಃ ಶಂಭು ಶೆಟ್ಟಿಯವರ ತಲೆಗೆ ಕಡಿದಿದ್ದು, ಭುಜಂಗ ಶೆಟ್ಟಿ ಮತ್ತು ಶಂಭು ಶೆಟ್ಟಿಯವರ ನಡುವೆ ಜಾಗದ ತಕರಾರು ಇದ್ದು, ಸದ್ರಿ ವಿಚಾರದಲ್ಲಿ ಭುಜಂಗ ಶೆಟ್ಟಿಯವರು ಪಿರ್ಯಾದಿ ಮತ್ತು ಶಂಭು ಶೆಟ್ಟಿಯವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದಾಗಿದ್ದು, ಇಬ್ಬರೂ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/15 ಕಲಂ 341, 326, 307 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಉಡುಪಿ: ಪಿರ್ಯಾದಿ ಶ್ರೀಮತಿ ಮೀರಾ ಅಮಿನ್‌ ಇವರು ದಿನಾಂಕ:21-04-2015 ರಂದು ಮುಂಜಾನೆ 3.15 ಗಂಟೆಗೆ ಮನೆಯಲ್ಲಿ ಮಲಗಿರುವಾಗ ತರಕಾರಿ ಇಡುವ ಬುಟ್ಟಿಯ ವಿಚಾರದಲ್ಲಿ ತಮ್ಮ ಶಂಕರ ಪೂಜಾರಿಯವರೊಂದಿಗೆ ತಕರಾರು ಆಗಿದ್ದು ಮಾತಿಗೆ ಮಾತು ಬೆಳೆದು ಜಗಳವಾಗಿ ಅಲ್ಲಿಗೆ ಶಂಕರಪೂಜಾರಿ ಹೆಂಡತಿ ಜಯಂತಿ, ಅಣ್ಣ ರಮೇಶ ,ಅಕ್ಕ ವನಜಾಕ್ಷಿ ಹಾಗೂ ವನಜಾಕ್ಷಿ ಗಂಡ ಮತ್ತು ತಂಗಿ ಜ್ಯೋತಿ ಬಂದು ಅವರೆಲ್ಲರೂ ಒಟ್ಟಾಗಿ ಹಲ್ಲೆ ನಡೆಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 97/2015 ಕಲಂ 147, 143, 323 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಉಡುಪಿ: ಪಿರ್ಯಾದಿ ಶ್ರೀಮತಿ ಜಯಂತಿ ಇವರು ಹಾಗೂ ಅವರ ಗಂಡ ಮಕ್ಕಳು ಮನೆಯಲ್ಲಿರುವಾಗ ಮನೆಯ ಹೊರಗೆ ಜೋರಾದ ಶಬ್ದ ಬರುವುದನ್ನು ಕೇಳಿ ಬಾಗಿಲು ಬಳಿ ಬಂದಾಗ ಮೀರಾ, ಜ್ಯೋತಿ, ಚಂದ್ರಹಾಸ ಹಾಗೂ ಸರೋಜ ಎಂಬವರು ಅಲ್ಲಿ ಇದ್ದು ಪಿರ್ಯಾದಿದಾರರನ್ನುದ್ದೇಶಿಸಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದಲ್ಲದೇ ಕೈಯಿಂದ ಹಲ್ಲೆ ಮಾಡಿ ಕೆಳಗೆ ದೂಡಿದ ಪರಿಣಾಮ ಎಡಕೈಗೆ ಹಾಗೂ ಬಲಕೈಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 98/2015  ಕಲಂ 504, 506, 323 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ

  • ಪಡುಬಿದ್ರಿ: ದಿನಾಂಕ. 30.04.2015 ರಂದು 12:15 ಗಂಟೆಗೆ ಕಾರ್ಕಳ ತಾಲೂಕಿನ ಇನ್ನಾ ಗ್ರಾಮ ಇನ್ನಾದಿಂದ ಕಾಂಜರಕಟ್ಟೆಯಿಂದ ಹೋಗುವ ದಾರಿಯಲ್ಲಿ ಕಡೆಕುಂಜ ಎಂಬಲ್ಲಿ ಕೆಎ-20-ಇಸಿ-3457 ನೇ ಪಲ್ಸರ್ ಮೋಟಾರು ಸೈಕಲ್ ನ್ನು  ಸವಾರರಾದ ರಾಘು ಶೆಟ್ಟಿಗಾರ್ ಎಂಬವರು ಮೋಟಾರು ಸೈಕಲ್ ನ್ನು  ಕಾಂಜರಕಟ್ಟೆಯಿಂದ ಇನ್ನಾ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಇನ್ನಾ ಕಡೆಯಿಂದ ಕಾಂಜರಕಟ್ಟೆ ಕಡೆಗೆ ಕೆಎ-20-ಇಎ-5145 ನೇ ಮೋಟಾರು ಸೈಕಲ್ ನ್ನು  ಚಲಾಯಿಸಿಕೊಂಡು ಬರುತ್ತಿದ್ದ ಗಿರೀಶ್ 25 ವರ್ಷ ಎಂಬವರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಗಿರೀಶ್ ಹಾಗೂ ಅರೋಪಿ ರಾಘು ಶೆಟ್ಟಿಗಾರ್ ಇಬ್ಬರಿಗೂ ತಲೆಗೆ ಗಾಯವಾಗಿ ಆದರ್ಶ ಆಸ್ಪತ್ರೆ ಉಡುಪಿಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 57/15ಕಲಂ: 279, 337ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments: