Thursday, May 21, 2015

Daily Crime Reports As on 21/05/2015 at 07:00 Hrs

ಮಟ್ಕಾ ಜುಗಾರಿ ಪ್ರಕರಣ
  • ಪಡುಬಿದ್ರಿ : ದಿನಾಂಕ 20.05.2015 ರಂದು 14:20 ಗಂಟೆಗೆ ಬಡಾ ಗ್ರಾಮದ ಉಚ್ಚಿಲ ಬಸ್ಸು ನಿಲ್ದಾಣದ ಬಳಿ, ಸಂಜಯ್ ಬಾರ್ ನ ಹಿಂಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ದೊರೆತ ಖಚಿತ ವರ್ತಮಾನದ ಮೇರೆಗೆ ಅಝಮತ್ ಆಲಿ ಜಿ, ಪೊಲೀಸ್ ಉಪನಿರೀಕ್ಷಕರು, ಪಡುಬಿದ್ರಿ ಠಾಣೆ ಇವರು ಠಾಣಾ ಸಿಬ್ಬಂದಿಯರೊಂದಿಗೆ ಇಲಾಖಾ ವಾಹನದಲ್ಲಿ ಮೇಲಿನ ಸ್ಥಳಕ್ಕೆ ಹೋಗಿ ಜೀಪನ್ನು ದೂರದಲ್ಲಿ ನಿಲ್ಲಿಸಿ ಇಬ್ಬರು ಸಿಬ್ಬಂದಿಯವರನ್ನು ಮುಂದಾಗಿ ಕಳಿಸಿ ಓರ್ವ ವ್ಯಕ್ತಿಯು 1 ರೂಪಾಯಿಗೆ 70 ರೂಪಾಯಿ ಎಂಬುದಾಗಿ ಮಟ್ಕಾ ಜೂಜಾಟಕ್ಕೆ ಜನರನ್ನು ಕರೆದು ಜೂಜಾಟ ನಡೆಸುತ್ತಿರುವುದನ್ನು ಖಚಿತಪಡಿಸಿಕೊಂಡು ಇತರ ಸಿಬ್ಬಂದಿಯವರೊಂದಿಗೆ ಸುತ್ತುವರಿದು ದಾಳಿ ನಡೆಸಿ ಮಟ್ಕಾ ಜೂಜಾಟಕ್ಕೆ ಹಣ ಸಂಗ್ರಹಿಸುತ್ತಿದ್ದ ಕೃಷ್ಣ ಪೂಜಾರಿ 35 ವರ್ಷ ತಂದೆ:- ದಿ. ರಾಜು ಪೂಜಾರಿ, ವಾಸ:-ರಾಜ ಲಕ್ಷ್ಮಿ ನಿವಾಸ, ಕೊರ್ದಬ್ಬು ಸಾನದ ಬಳಿ, ಪಾದೇಬೆಟ್ಟು ಗ್ರಾಮ, ಉಡುಪಿ ತಾಲೂಕು ಎಂಬವನನ್ನು ದಸ್ತಗಿರಿ ಮಾಡಿ ಮಟ್ಕಾ ಜುಗಾರಿ ಆಟ ನಡೆಸಲು ಉಪಯೋಗಿಸಿದ ಹಣವನ್ನು ಉಚ್ಚಿಲದ ಮಹೇಶನಿಗೆ ನೀಡಿ ಅದರ ಪ್ರತಿಪಲವಾಗಿ 100 ರೂ ಗೆ 20 ರೂ ನ್ನು ಪಡೆಯುತ್ತಿದ್ದು, ಮಟ್ಕಾ ಜೂಜಾಟದಲ್ಲಿ ಸಂಗ್ರಹಿಸಿದ ಹಣ ನಗದು ರೂ. 4,215/-, ಮಟ್ಕಾ ನಂಬ್ರ ಬರೆದ ಚೀಟಿ-1, ಬಾಲ್‌ ಪೆನ್‌ -1, ಮೊಬೈಲ್ ಪೋನ್-1 ನ್ನು  ಸ್ವಾಧೀನಪಡಿಸಿಕೊಂಡಿದ್ದಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 74/15 ಕಲಂ: ಕಲಂ: 78 (1) (111) ಕೆ.ಪಿ.ಆಕ್ಟ್ ಮತ್ತು 420 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಮಣಿಪಾಲ:  ದಿನಾಂಕ 20.05.15ರಂದು ಪೊಲೀಸ್ ನಿರೀಕ್ಷಕರು, ಡಿಸಿಐಬಿ ಉಡುಪಿರವರು ತಮ್ಮ ಸಿಬ್ಬಂದಿಯವರೊಂದಿಗೆ ಪರ್ಕಳ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಬಗ್ಗೆ ಹಣ ಸಂಗ್ರಹಿಸುತ್ತಿದ್ದ ಆಪಾದಿತ ನಾಗರಾಜ ಎಂಬವನನ್ನು ದಸ್ತಗಿರಿ ಮಾಡಿ ಆತನು ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ 1550/-ನಗದು, ಮಟ್ಕಾ ಚೀಟಿ-1, ಬಾಲ್‌ಪೆನ್ನು-1 ಸ್ವಾಧೀನಪಡಿಸಿಕೊಂಡಿದ್ದಾಗಿರುತ್ತದೆ. ಅಲ್ಲದೆ ತಾನು ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಕಟಪಾಡಿಯ ಸುಧಾಕರ ಎಂಬವರಿಗೆ ಕೊಡುತ್ತಿದ್ದು, ಆತನು ತನಗೆ ದಿನಕ್ಕೆ 500/-ರೂ ಸಂಬಳವಾಗಿ ಕೊಡುವುದಾಗಿ ಅಪಾದಿತ ನಾಗರಾಜ ತಿಳಿಸಿದ್ದಾಗಿರುತ್ತದೆ. ಈ ಬಗ್ಗೆ ಮಣಿಪಾಲ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 88/15 ಕಲಂ: ಕಲಂ: 78 (1) (111) ಕೆ.ಪಿ.ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣ
  • ಉಡುಪಿ ಸಂಚಾರ : ರಮ್ಯಾ(31) ಗಂಡ:ವಿಜಯಕೃಷ್ಣ ವಾಸ:ಶ್ರೀ ನಿಧಿ ನಿಲಯ ಲಾಕಾಲೇಜ್ ಹತ್ತಿರ ಕುಂಜಿಬೆಟ್ಟು ಉಡುಪಿ ಇವರು ಈ ದಿನ ದಿನಾಂಕ 20/05/2015 ರಂದು ಅಜ್ಜರಕಾಡುವಿನಲ್ಲಿರುವ ತಾಯಿ ಮನೆಗೆ ಹೋಗುವರೇ ತನ್ನ ಬಾಬ್ತು ಕೆಎ-20 ಯು-1880 ನೇ ಹೋಂಡಾ ಆ್ಯಕ್ಟಿವಾದಲ್ಲಿ ತನ್ನ ಮಗ ಪ್ರಣವನನ್ನು ಕುಳ್ಳರಿಸಿಕೊಂಡು ಉಡುಪಿ ಕಡೆಗೆ ಹೋಗುತ್ತಿರುವಾಗ ಮದ್ಯಾಹ್ನ 3.30 ಗಂಟೆಗೆ ಶಾರದಾ ಕಲ್ಯಾಣ ಮಂಟಪ ಜಂಕ್ಷನ್ ಬಳಿ ತಲುಪಿದಾಗ ಕೆಎ-20 ಝಡ್-8408ನೇ ನಂಬ್ರದ ಕಾರು ಚಾಲಕನು ಶಾರದಾ ಕಲ್ಯಾಣ ಮಂಟಪ ಕಡೆಯಿಂದ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಮ್ಯಾರವರು ಚಲಾಯಿಸುತ್ತಿದ್ದ ಹೋಂಡಾ ಆ್ಯಕ್ಟಿವಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಮ್ಯಾ ಹಾಗೂ ಮಗ ಪ್ರಣವ್ ರಸ್ತೆಗೆ ಬಿದ್ದು, ರಮ್ಯಾರಿಗೆ ಎಡಕಾಲು ಮೂಳೆ  ಮುರಿತದ ಗಾಯವಾಗಿದ್ದು ಪ್ರಣವ್‌ನಿಗೆ ತರಚಿದ ಸಾಧಾರಣ ಗಾಯವಾಗಿರುತ್ತದೆ. ಅಪಘಾತ ಮಾಡಿದ ಕಾರು ಚಾಲಕನ ಹೆಸರು ಕೇಳಲಾಗಿ ಜಗದೀಶ್ ಟಿ,ಎ ಎಂದು ತಿಳಿದುಬಂದಿರುತ್ತದೆ. ಸದ್ರಿ ಅಪಘಾತಕ್ಕೆ ಕೆಎ-20 ಝಡ್-8408 ನೇ ಕಾರು ಚಾಲಕ ಜಗದೀಶ್ ಟಿ,ಎ ರವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೇಯೇ ಕಾರಣವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 51/2015 ಕಲಂ279,337,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಮಣಿಪಾಲ:  ದಿನಾಂಕ 12.05.15ರಂದು ಪಿರ್ಯಾದಿ ಸಂತೋಷ ಇವರು ತನ್ನ ಸ್ನೇಹಿತ ವೀರಪ್ಪರವರೊಂದಿಗೆ ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಉಡುಪಿ ಮಣಿಪಾಲ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ್ಗೆ ಕೆಎ21ಎಲ್‌5660ನೇದರ ಮೋಟಾರ್ ಸೈಕಲ್ ಸವಾರನು ತಾನು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್‌ನ್ನು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಸವಾರಿಕೊಂಡು ಬಂದು ಪಿರ್ಯಾದಿದಾರರೊಂದಿಗೆ ನಡೆದುಕೊಂಡು ಬರುತ್ತಿದ್ದ ವೀರಪ್ಪರವರಿಗೆ ಢಿಕ್ಕಿ ಹೊಡೆದನು ಪರಿಣಾಮ ವೀರಪ್ಪ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ.  ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 89/2015 ಕಲಂ279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಕಳವು ಪ್ರಕರಣ

  • ಉಡುಪಿ:  ಫಿರ್ಯಾದಿ ರಾಘವೇಂದ್ರ ಪ್ರಸಾದ್‌ ಇವರು ದಿನಾಂಕ 19-04-2015 ರಂದು ಬೆಳಿಗ್ಗೆ 09-30 ಗಂಟೆಗೆ  ತನ್ನ ವಿಪ್ರೋ ಕಂಪೆನಿಯ ಲ್ಯಾಪ್‌ಟಾಪ್  ಸೀರಿಯಲ್ ನಂಬ್ರ GWH00100167 ಮತ್ತು ಮೊಬೈಲ್ ಫೋನ್ ಅನ್ನು ಇಂದ್ರಪ್ರಸ್ಧ ಗೆಸ್ಟ್‌ ಹೌಸ್‌‌ ರಥ ಬೀದಿ ಶಿವಳ್ಳಿ ಗ್ರಾಮ ಉಡುಪಿ ಇಲ್ಲಿಂದ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತುಗಳ ಅಂದಾಜು ಮೌಲ್ಯ ರೂ 25,000/ - ಆಗಿರುತ್ತದೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 127/2015 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಇತರೇ ಪ್ರಕರಣ

  • ಕಾರ್ಕಳ:  ದಿನಾಂಕ: 19/05/2015 ರಂದು ಶ್ರೀ ಬಿ,ವಿ ಸುರೇಶ್ ಪೊಲೀಸ್ ಉಪಾಧೀಕ್ಷಕರು,ಆಂತರಿಕ ಭದ್ರತೆಯ ವಿಭಾಗ, ವಲಯ ಮಂಗಳೂರು, ಮೊಕ್ಕಂ: ಕಾರ್ಕಳ ಇವರು  ತನ್ನ ಸಿಬ್ಬಂದಿಯವರ ಜೊತೆ ಕರ್ತವ್ಯದಲ್ಲಿರುವಾಗ ಕಾರ್ಕಳ ಗ್ರಾಮಾಂತರ ಠಾಣಾ ಸರಹದ್ದಿನ ಸೂಡಾ ಗ್ರಾಮದ ಕಲ್ಲು ಗಣಿಗಾರಿಕೆ ನಡೆಸುವ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸುಮಾರು 15 ದಿನಗಳಿಂದ ಕೆಲಸ ಮಾಡುತ್ತಿರುವುದಾಗಿ ದೊರೆತ ಮಾಹಿತ ಮೇರೆಗೆ  ತನ್ನ ತನ್ನ ಸಿಬ್ಬಂದಿಯವರೊಂದಿಗೆ  ದಿನಾಂಕ: 19/05/2015 ರಂದು ರಾತ್ರಿ 10:00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಭೇಟಿ ನೀಡಿ ಜೊಯ್ ಕ್ರಶರ್ ಎಂಬ ಸ್ಥಳದಲ್ಲಿ ಇರುವ ಶೆಡ್ ನಲ್ಲಿ ಮಲಗಿದ್ದ ಆರೋಪಿತ ರಾಮ್ ಗೋಪಾಲ್ @ ಅಶೋಕ ಕುಮಾರ್ ಪ್ರಾಯ: 40 ವರ್ಷ, ತಂದೆ: ಗಣೇಶ ಪ್ರಸಾದ್, ವಾಸ: ಗುಮ್ನಾಬರ್ಗದಾ ಜಮುನಾ ಬಜಾರ್, ಮಲ್ಲಿಪುರ ಪೋಲೀಸ್  ಶ್ರವಸ್ತಿ ಜಿಲ್ಲೆ, ಉತ್ತರ ಪ್ರದೇಶ ರಾಜ್ಯ. ಈತನನ್ನು ವಿಚಾರಣೆಗೊಳಪಡಿಸಿದ್ದು ಆತನು ವಿಚಾರಣೆ ಸಮಯದಲ್ಲಿ ಸಮರ್ಪಕ ಉತ್ತರ ನಿಡದೇ ಇದ್ದು ಸದ್ರಿ ವ್ಯಕ್ತಿಯು ಯಾವುದೋ ಬೇವಾರಂಟು ಮಾಡು ಉದ್ದೇಶದಿಂದ ಸದ್ರಿ ಸ್ಥಳದಲ್ಲಿ ಅಡಗಿ ಕೊಳಿತುಕೊಂಡಿರುವುದಾಗಿ  ತಿಳಿದು ಬಂದ ಮೇರೆಗೆ ಅನುಮಾನಿತ ವ್ಯಕ್ತಿ ರಾಮ್ ಗೋಪಾಲ್ ಯಾನೆ ಅಶೋಕ ಕುಮಾರ್ ನನ್ನು ವಶಕ್ಕೆ ಪಡೆದುಕೊಂಡು  ದಿನಾಂಕ: 20/05/2015 ರಂದು 15:30 ಗಂಟೆಗೆ ಮುಂದಿನ ಕ್ರಮದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ಯವರ ಮುಂದೆ ಹಾಜರುಪಡಿಸಿದ್ದು ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 82/15 ಕಲಂ 96 ಕೆಪಿ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: