Wednesday, May 20, 2015

Daily Crime Reports As on 20/05/2015 at 17:00 Hrs

ಅಪಘಾತ ಪ್ರಕರಣ
  • ಕೊಲ್ಲೂರು: ದಿನಾಂಕ 19.05.2015 ರಂದು ಪಿರ್ಯಾದಿ ಸತ್ಯನಾರಾಯಣ ಗಾಣಿಗ ಇವರು ತನ್ನ ಬಾಬ್ತು ಕೆಎ 51 ಇಜಿ 3175 ನೇ ಪ್ಯಾಶನ್ ಎಕ್ಸ್ ಪ್ರೊ ಮೋಟಾರು ಸೈಕಲ್ ನಲ್ಲಿ ಹಿಂಬದಿಯಲ್ಲಿ ಪರಿಚಯದ ಬಡಾಕೆರೆಯ ರಂಜಿನಿ ಎಂಬವರನ್ನು ಕುಳ್ಳಿರಿಸಿಕೊಂಡು ಕೊಲ್ಲೂರಿನಲ್ಲಿ ಸ್ನೇಹಿತರ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಪಾಲ್ಗೊಳ್ಳಲು ಮಧ್ಯಾಹ್ನ 12.45 ಗಂಟೆಗೆ ಮನೆಯಿಂದ ಹೊರಟು ಹಾಲ್ಕಲ್ ಜಂಕ್ಷನ್ ದಾಟಿ ಸ್ವಲ್ಪ ಮುಂದೆ ಹೋಗುತ್ತಾ ಮದ್ಯಾಹ್ನ 01.30 ಗಂಟೆ ಸಮಯ ಕೊಲ್ಲೂರು ಕಡೆಯಿಂದ ಕೆಎ 19 ಎಎ 6323 ನೇ ಟೆಂಪೊ ಟ್ರಾವೆಲರ್ ವಾಹನದ ಚಾಲಕನು ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ  ತೀರಾ ಬಲಬದಿಗೆ ಚಲಾಯಿಸಿಕೊಂಡು ಪಿರ್ಯಾದುದಾರರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದು ಬಲಬದಿಯ ರಸ್ತೆಯ ಕಂದಕಕ್ಕೆ ಉರುಳಿ ಬಿದ್ದು ಅಫಘಾತದಲ್ಲಿ ಪಿರ್ಯಾದುದಾರರು ಹಾಗು ಸಹಸವಾರಿಣಿ ಬೈಕ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುಧಾರರಿಗೆ ಎಡಕೈ ಬಲಕೈ ಮತ್ತು ಬಲಕಾಲಿಗೆ ರಕ್ತಗಾಯವಾಗಿ ಹಾಗೂ ಸಹ ಸವಾರಿಣಿ ರಂಜಿನಿ ರವರಿಗೆ ತಲೆಗೆ ಹಾಗೂ ಬಲ ಕಾಲಿಗೆ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 61/15 ಕಲಂ: 279,337  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಉಡುಪಿ: ಪಿರ್ಯಾದಿ ಶಿವಪ್ರಸಾದ್ ಶೆಟ್ಟಿ (45) ರವರು ದಿನಾಂಕ: 20/05/2015 ರಂದು ಬೆಳಿಗ್ಗೆ 11:15 ಗಂಟೆ ಸಮಯದಲ್ಲಿ ಉಡುಪಿ ಶಿರೀಬೀಡು ಜಂಕ್ಚನ್ನಲ್ಲಿ ತಮ್ಮ ಬಾಬ್ತು ಕೆಎ-20 ಇಸಿ-3417 ನೇ ಸ್ಕೂಟರಿನಲ್ಲಿ ಹೋಗುತ್ತಿರುವಾಗ ಕಿದಿಯೂರು ಹೋಟೆಲ್ ಕಡೆಯಿಂದ ಕೆಎ-20 ಪಿ-5857 ನೇ ಕಾರಿನ ಚಾಲಕ ಅಬ್ದುಲ್ ರಾಹಿಲ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯದುದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ತರಚಿದ ಗಾಯಗಳಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 50/15 ಕಲಂ: 279,337  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಕ್ರಮ ಗೋ ಸಾಗಾಟ ಪ್ರಕರಣ
  • ಬೈಂದೂರು: ದಿನಾಂಕ 20-05-2015 ರಂದು ಬೆಳಿಗ್ಗೆ 05:00 ಗಂಟೆಯ ಸಮಯ ಸಂತೋಷ ಎ ಕಾಯ್ಕಿಣಿ ಪೊಲೀಸ್‌ ಉಪನಿರೀಕ್ಷಕರು ಬೈಂದೂರು ಪೊಲೀಸ್‌ ಠಾಣೆ ಇವರಿಗೆ ಭಟ್ಕಳ ಕಡೆಯಿಂದ ಒಂದು ಸ್ಕಾರ್ಪಿಯೋ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡಿಕೊಂಡು ಬರುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪಿನಲ್ಲಿ ಕುಂದಾಪುರ ತಾಲೂಕು ನಂದನವನ ಗ್ರಾಮದ ನಂದನವನ ಕ್ರಾಸ್ಎಂಬಲ್ಲಿ ಹೋಗಿ ಎಎಸ್ ರೋಸಾರಿಯೋ ಡಿಸೋಜರವರೊಂದಿಗೆ ಸೇರಿಕೊಂಡು ವಾಹನ ತಪಾಸಣೆ ನಡೆಸುತ್ತಿರುವ ಸಮಯ 05:30 ಗಂಟೆಯ ಸಮಯಕ್ಕೆ ಭಟ್ಕಳ ಕಡೆಯಿಂದ ಬರುತ್ತಿದ್ದ ಸ್ಕಾರ್ಪಿಯೋ ವಾಹನವೊಂದನ್ನು ನಿಲ್ಲಿಸುವಂತೆ ಸೂಚಿಸಿದಾಗ ಅದರ ಚಾಲಕನು ಸುಮಾರು 150 ಅಡಿ ದೂರಲ್ಲಿ ವಾಹನವನ್ನು ನಿಲ್ಲಿಸಿ ವಾಹನದಲ್ಲಿದ್ದ ಇನ್ನೊಬ್ಬ ವ್ಯಕ್ತಿಯೊಂದಿಗೆ ಓಡಿ ಹೋಗಿರುತ್ತಾರೆ ವಾಹನದ ಹತ್ತಿರ ಹೋಗಿ ಪರಿಶೀಲಿಸಲಾಗಿ ವಾಹನದಲ್ಲಿ ಯಾರು ಇಲ್ಲದೇ ಇದ್ದು , ವಾಹನದ ನಂಬ್ರ ಕೆ. 19 ಎಂ 2399 ಆಗಿರುತ್ತದೆ. ವಾಹನದ ಒಳಗಡೆ ನಸು ಕಂದು ಬಣ್ಣದ ಗಂಡು ಗುಡ್ಡ -01, ಕಪ್ಪು ಬಣ್ಣದ ಗುಡ್ಡ -01 ನಸು ಕಂದು ಬಣ್ಣದ ಸಣ್ಣ ದನ -01 ಇದ್ದು ವಾಹನದಿಂದ ಇಳಿಸುವಾಗ 1 ದನ ಓಡಿ ಹೋಗಿರುತ್ತದೆ. ಸದ್ರಿ ದನಗಳ ಅಂದಾಜು ಮೌಲ್ಯ 1,500/- ರೂಪಾಯಿ ಆಗಬಹುದು.  ಜಾನುವಾರುಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಕಾರಿನಲ್ಲಿ ತುಂಬಿಸಿ ಅವುಗಳಿಗೆ ಮೇವು ನೀರು ನೀಡದೇ ಹಿಂಸೆಯಿಂದ ಉಸಿರುಕಟ್ಟುವ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದ್ದು ಸದ್ರಿ ದನಗಳನ್ನು ಎಲ್ಲಿಯೋ ಕಳವು ಮಾಡಿಕೊಂಡು ವಧೆ ಮಾಡುವ ಉದ್ದೇಶದಿಂದ ಕಸಾಯಿಖಾನೆಗೆ ಮಾಡುತ್ತಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 143/2015 ಕಲಂ 8,9,11  KARNATAKA PREVENTION OF COW SLAUGHTER & CATTLE PREVENTION ACT-1964, 11(1) PREVENTION OF CRUELTY TO ANIMALS ACT, 1960 & 379 IPC ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕಾರ್ಕಳ: ಪಿರ್ಯಾದಿ ರವಿ ಶೆಟ್ಟಿ ಇವರು ತನ್ನ ಹೆಂಡತಿ ಮಕ್ಕಳೊಂದಿಗೆ ಬೊಂಬೆಯಲ್ಲಿ ವಾಸಮಾಡಿಕೊಂಡಿದ್ದು, ಪ್ರಸ್ತುತ ಊರಿಗೆ ಬಂದಿದ್ದು ಅವರ ಹೆಂಡತಿ ಶ್ರೀಮತಿ ನೀತಾ ಶೆಟ್ಟಿ (43) ಎಂಬವರು ಲೋ ಬಿಪಿ ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಬೊಂಬೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಈ ದಿನ ದಿನಾಂಕ: 20/05/2015 ರಂದು ಬೆಳಿಗ್ಗೆ 06:15 ಗಂಟೆ ಸಮಯಕ್ಕೆ ನೀತಾ ಶೆಟ್ಟಿ ರವರು ತನ್ನ ಮನೆಯ ಬಚ್ಚಲು ಮನೆಯಲ್ಲಿ ತನಗಿದ್ದ ಲೋ ಬಿಪಿ ಖಾಯಿಲೆ ಅಥವಾ ಇನ್ಯಾವುದೋ ಕಾರಣದಿಂದ ಪ್ರಜ್ಞೆ ತಪ್ಪಿ ಬಿದ್ದು ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ ನಾರಾವಿ ಸರಕಾರಿ ಆಸ್ಪತ್ರೆಗೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೆಳಿಗ್ಗೆ 08:15 ಗಂಟೆ ಸಮಯಕ್ಕೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ನೀತಾ ಶೆಟ್ಟಿ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್‌ ಕ್ರಮಾಂಕ : 12/15 ಕಲಂ. 174 ಸಿಆರ್‌ಪಿಸಿಯಂತೆ ದಾಖಲಿಸಿಕೊಳ್ಳಲಾಗಿದೆ.       

No comments: