Wednesday, May 20, 2015

Daily Crime Reports As on 20/05/2015 at 19:30 Hrs

ಅಸ್ವಾಭಾವಿಕ ಮರಣ ಪ್ರಕರಣ : 
  • ಉಡುಪಿ ನಗರ : ದಿನಾಂಕ: 20/05/2015 ರಂದು ಬೆಳಿಗ್ಗೆ 9:00 15 ಗಂಟೆಗೆ ಉಬೆದುಲ್ಲಾ (46) ತಂದೆ ಅಬ್ದುಲ್‌ ರಹಿಮಾನ್‌, ರಮೀಜ್‌‌ ಮಂಜಿಲ್‌‌, ಕರಂಬಳ್ಳಿ ಸಂತೋಷ ನಗರ, ಉಡುಪಿ ಅವರ ಬಾಬ್ತು ಅಂಗಡಿಗೆ ಬಂದಾಗ ಅಂಗಡಿಯ ಹೊರಗೆ ಬಾಗಿಲ ಬಳಿ ಸಿಮೆಂಟಿನ ಸೀಟಿನ ಕೆಳಗೆ ಅಂಗಡಿಗೆ ಅಗಾಗಾ ಸಣ್ಣ ಪುಟ್ಟ ಗುಜರಿ ಸಾಮಾನು ತಂದು ಕೊಡುತ್ತಿದ್ದ ಸುಮಾರು 55 ರಿಂದ 60 ವರ್ಷ ಪ್ರಾಯದ ಅಪರಿಚಿತ ಗಂಡಸು ರಾತ್ರಿ ಅಂಗಡಿಯ ಎದುರು ಮಲಗಿದ್ದಲಿಯೇ ಮೃತ ಪಟ್ಟಿದ್ದು ಸದ್ರಿಯವರು ಯಾವುದೋ ಕಾಯಿಲೆಯಿಂದ ಅಥವಾ ವಿಪರೀತ್ಯಾ ಮದ್ಯಪಾನ ಸೇವಿಸಿ ಅನ್ನ ನೀರು ಸೇವಿಸಿದೇ ಗಂಟಲು ಒಣಗಿ ಮೃತ ಪಟ್ಟಿರಬಹುದು ಎಂಬಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ 25/2015 ಕಲಂ. 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣ :
  • ಹಿರಿಯಡ್ಕ : ದಿನಾಂಕ: 19/05/15 ರಂದು ರಾತ್ರಿ 10-30  ಗಂಟೆಗೆ ಉಡುಪಿ ತಾಲೂಕು ಆತ್ರಾಡಿ ಗ್ರಾಮದ ಶೇಡಿಗುಡ್ಡೆ ಎಂಬಲ್ಲಿ ಶ್ರೀನಾಥ ಎಸ್ ನಾಯ್ಕ್ ಪ್ರಾಯ 27 ವರ್ಷ ತಂದೆ:ಶ್ರೀನಿವಾಸ ನಾಯ್ಕ್, ವಾಸ: ಶ್ರೀಮಾತ, ಓಂತಿಬೆಟ್ಟು ಶಾಲೆಯ ಹಿಂಬದಿ ಅಂಜಾರು ಗ್ರಾಮ, ಉಡುಪಿ ತಾಲೂಕು ಇವರ ತಂದೆ ಶ್ರೀನಿವಾಸ ನಾಯ್ಕ್ ರವರು ತನ್ನ ಬಾಬ್ತು ಕೆಎ 20-ಇಇ 0794ನೇದರಲ್ಲಿ ಮಣಿಪಾಲದಿಂದ ಮನೆಗೆ ಬರುವಾಗ ಆರೋಪಿ ರಾಜೇಶ ತನ್ನ ಬಾಬ್ತು ಕೆ. ಎ 20 ವೈ 2073ನೇ ಮೋಟಾರು ಬೈಕ್ ನ್ನು ಎದುರು ಬದಿಯಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀನಿವಾಸ ನಾಯ್ಕ್ ರವರ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಮುಖಕ್ಕೆ ರಕ್ತಗಾಯವಾಗಿ ಮೂಗಿನ ಮೂಳೆ ಮುರಿತವಾಗಿರುತ್ತದೆ ಎಂಬುದಾಗಿ ಶ್ರೀನಾಥ್‌ ರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 57/2015 ಕಲಂ. 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಇತರ ಪ್ರಕರಣ :
  • ಕೋಟ : ದಿನಾಂಕ:16-05-2015 ರಂದು ಮಧ್ಯಾಹ್ನ 2.30 ಗಂಟೆ ಸಮಯಕ್ಕೆ ಗಿರಿಜಾ(63),ಗಂಡ: ಸೋಮ,ಸಾಸ್ತಾನ ಪೋಸ್ಟ್‌,ಉಡುಪಿ ತಾಲೂಕು ಇವರ ಬಲಬದಿಯ ಜಾಗದವರಾದ ಚಂದ್ರಪ್ಪ, ಜಲಜ, ಮಿಣಕ, ಸಂಜಯ, ಸತೀಶ, ಅಶ್ರಫ್, ಗಣೇಶ್ ಶೆಟ್ಟಿಗಾರ್ ಹಾಗೂ ಅವರ ಇಬ್ಬರು ಸಹ ಕೆಲಸಗಾರರು ಸೇರಿ ಗಿರಿಜಾರಿಗೆ ಹೊಡೆದು ಕತ್ತಿಯಿಂದ ಎಡಕಾಲಿಗೆ ಕಡಿದಿರುತ್ತಾರೆ ಮತ್ತು ಸತೀಶನು ಗಿರಿಜಾರ ಮಾಂಗಲ್ಯ ಸರವನ್ನು ಕೈಯಿಂದ ಹರಿದು ತುಂಡರಿಸಿ ದೈಹಿಕ ಹಲ್ಲೆ ಮಾಡಿದ್ದು, ಅಲ್ಲದೆ ಗಿರಿಜಾರವರ ಗಂಡ ಸೋಮ ಇವರಿಗೆ ಹೊಡೆದು ಕೈಗೆ ಗಾಯ ಮಾಡಿರುತ್ತಾರೆ ಮತ್ತು ಇವರ ಮಾನಸಿಕ ಅಸ್ವಸ್ಥೆಯಾದ 2ನೇ ಮಗಳಾದ ಜಯ ಇವಳಿಗೆ ಸತೀಶನು ಎಡ ಕಪಾಲಿಗೆ ಎರಡೆರಡು ಬಾರಿ ಹೊಡೆದು ದೈಹಿಕ ಹಲ್ಲೆ ಮಾಡಿರುತ್ತಾನೆ. ಗಿರಿಜಾ ಹಾಗೂ ಅವರ ಗಂಡ ಮತ್ತು ಮಗಳು ಬ್ರಹ್ಮಾವರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಳರೊಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಗಣೇಶ್ ಶೆಟ್ಟಿಗಾರನು ಗಲಾಟೆಯ ಸಮಯ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುತ್ತಾನೆ. ಈ ಗಲಾಟೆಯು ಗಿರಿಜಾರವರ ಜಾಗದ ಗಡಿಯಲ್ಲಿರುವ ಗಾಳಿ ಮರವನ್ನು ಕಡಿಯುವುದನ್ನು ಆಕ್ಷೇಪಿಸಿದ್ದಕ್ಕೆ ಉಂಟಾಗಿದ್ದು, ಸದ್ರಿ ಗಲಾಟೆಯ ವಿಚಾರದಲ್ಲಿ ರಾಜಿ ಸಂಧಾನ ಮಾಡಲು ಬಂದ ಸಾಸ್ತಾನ ದಲಿತ ಸಂಘರ್ಷ ಸಮಿತಿಯ ಮಾಜಿ ಸಂಚಾಲಕರಾದ ಚಂದ್ರ.ಎಸ್.ಪಿ.ರವರಿಗೆ ಸತೀಶ ಹಾಗೂ ಸಂಜಯ ಇಬ್ಬರೂ ಸೇರಿ ಬಡಿಗೆ ತಂದು ಇದರಿಂದಲೇ ನಿನ್ನನ್ನು ಬಡಿದು ಹಾಕುತ್ತೇವೆ. ನೀನು ಈ ಜಾಗಕ್ಕೆ ಯಾಕೆ ಬಂದಿದೀಯ? ಎಂದು ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಗಿರಿಜಾರವರು ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 124/2015 ಕಲಂ: 143, 147, 323, 324, 504, 506 ಜೊತೆ 149 ಐಪಿಸಿ ಮತ್ತು 3(I)(X) SC/ST ACTಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕೋಟ : ಜಲಜಾ(47), ಗಂಡ: ದಿ.ಕರಿಯಾ, ವಾಸ:ಸೌಪರ್ಣೆಕಾ, ಸಾಸ್ತಾನ ಅಂಚೆ, ಗುಂಡ್ಮಿ ಗ್ರಾಮ, ಉಡುಪಿ ಇವರು ದಿನಾಂಕ:16/05/2015 ರಂದು ಮಧ್ಯಾಹ್ನ 2:30 ಗಂಟೆಗೆ ಅವರ ಬಾಬ್ತು ಜಾಗದಲ್ಲಿ  ಅವರ ಮಗ ಸತೀಶ.ಕೆ, ಸಂಜಯ ಹಾಗೂ ಕೆಲಸಗಾರರೊಂದಿಗೆ ಕೆಲಸಮಾಡುತ್ತಿರುವಾಗ ಅವರ ಸಂಬಂಧಿಕರಾದ ಗಿರಿಜಾ, ಸೋಮ, ಕಮಲಾ, ಜಯ, ಶಾರದ, ನಾರಾಯಣ, ಶುಭ, ಸ್ವಾತಿ, ಸುಪ್ರೀಯಾ ಹಾಗೂ ಪಾಂಡೇಶ್ವರ ನಿವಾಸಿ ಚಂದ್ರ.ಪಿ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುತ್ತಾರೆ ಎಂಬುದಾಗಿ ಜಲಜಾರವರು ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 125/2015 ಕಲಂ:143, 147, 323, 504 ಜೊತೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: