Wednesday, May 20, 2015

Daily Crime Reports As on 20/05/2015 at 07:00 Hrsಅಪಘಾತ ಪ್ರಕರಣ

  • ಶಂಕರನಾರಾಯಣ:  ದಿನಾಂಕ: 19/05/20145 ರಂದು 10-45 ಗಂಟೆಗೆ ಕುಂದಾಪುರ  ತಾಲೂಕಿನ ಸಿದ್ದಾಪುರ ಗ್ರಾಮದ ಅಮ್ಮನ  ಮನೆ ಎಂಬಲ್ಲಿ   ಸಿದ್ದು ಕುಲಾಲ್‌ರವರು   KA S 5782 Bajaj platina   ಮೋಟಾರ್ ಸೈಕಲ್‌ನಲ್ಲಿ  ಹೋಗುತ್ತಿರುವಾಗ ಆರೋಪಿ ಕೆಎ.20 ಝಡ್‌7381  ನೇ   ಕಾರನ್ನು   ಅಂಪಾರು ಕಡೆಯಿಂದ ಸಿದ್ದಾಪುರ ಕಡೆಗೆ  ಅತೀ ವೇಗ  ಹಾಗೂ ನಿರ್ಲಕ್ಷತನದಿಂದ  ಚಲಾಯಿಸಿಕೊಂಡು ಬಂದು  ಮೋಟಾರ್ ಸೈಕಲ್‌ಗೆ  ಡಿಕ್ಕಿ ಹೊಡೆದಿದ್ದು ಇದರ ಪರಿಣಾಮ  ಮೋಟಾರ್‌ ಸೈಕಲ್ ಸವಾರನ ತಲೆಗೆ  ಗಂಭೀರ   ಸ್ವರೂಪದ  ಗಾಯವಾಗಿರುತ್ತದೆ.  ಘಟನೆಯ ಸಮಯ ಆರೋಪಿ ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 117/15 ಕಲಂ: 279,337,338 ಐಪಿಸಿ   & 134 (A)(B) ಐಎಮ್‌ವಿ ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಶಂಕರನಾರಾಯಣ:  ದಿನಾಂಕ 19.05.15 ರಂದು 15:30 ಘಂಟೆಗೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಮತ್ತಿಬೇರು ಎಂಬಲ್ಲಿ ಕೆಎ.16 .3776 ನೇ ನಂಬ್ರದ ಲಾರಿಯನ್ನು ಆರೋಪಿಯು ಅತೀ ವೇಗ  ಹಾಗೂ ನಿರ್ಲಕ್ಷತನದಿಂದ  ಸಿದ್ದಾಫುರ ಕಡೆಯಿಂದ ಹೊಸಂಗಡಿ ಕಡೆಗೆ  ಚಲಾಯಿಸಿ ವಿರುದ್ದ ದಿಕ್ಕಿನಿಂದ ಬರುತ್ತಿದ್ದ  ಕೆಎ.15 ಕೆ.1502 ನೇ ನಂಬ್ರದ   ಮೋಟಾರ್  ಸೈಕಲ್‌‌ಗೆ  ಡಿಕ್ಕಿ ಹೊಡೆದಿದ್ದು ಇದರ ಪರಿಣಾಮ ಮೋಟಾರ್  ಸೈಕಲ್ ಸವಾರ ಸುಕುಮಾರ ಶೆಟ್ಟಿ ಇವರು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 118/15 ಕಲಂ: 279,304(A)  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಮಟ್ಕಾ ಜುಗಾರಿ ಪ್ರಕರಣ  
  • ಶಂಕರನಾರಾಯಣ:  ದಿನಾಂಕ 19.05.15 ರಂದು 19:45 ಘಂಟೆಗೆ ಕುಂದಾಪುರ  ತಾಲೂಕಿನ  ಅಂಪಾರು ಗ್ರಾಮದ ಮುಳ್ಳುಗುಡ್ಡೆ ಗುಡಿಬೆಟ್ಟು ಎಂಬಲ್ಲಿ  ಆರೋಪಿ ಸಂತೋಷ ಮೊಗವೀರ  ಮಟ್ಕಾ ಜುಗಾರಿ ಆಟದ ಬಗ್ಗೆ  ಹಣ ಸಂಗ್ರಹ ಮಾಡುತ್ತಿರುವಾಗ  ದೇಜಪ್ಪ, ಪಿಎಸ್‌ಐ ಶಂಕರನಾರಾಯಣ ಪೊಲೀಸ್‌ ಠಾಣೆ ಇವರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಯಿಸಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹ ಮಾಡಿದ ನಗದು ಹಣ 300/- ಮಟ್ಕಾಚೀಟಿ -1 ಹಾಗೂ ಬಾಲ್‌ಪೆನ್ನು-1 ಇವುಗಳನ್ನು  ವಶಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 119/15 ಕಲಂ: ಕಲಂ: 78(1) (111) ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮನುಷ್ಯ ಕಾಣೆ ಪ್ರಕರಣ

  • ಶಂಕರನಾರಾಯಣ:  ಉದಯ್‌ಕುಮಾರ್‌ ಬಿ (43)  ರವರು ದಿನಾಂಕ 19-05-2015 ರಂದು ರಾತ್ರಿ 7:30 ಗಂಟೆಗೆ ಉಡುಪಿ ತಾಲೂಕು ಹಿಲಿಯಾಣ ಗ್ರಾಮದ ಕಾಸಾಡಿ ಎಂಬಲ್ಲಿರುವ ತನ್ನ ಚಿಕ್ಕಪ್ಪನ ಮನೆಯಿಂದ ಬೈಕ್‌ನಲ್ಲಿ ಹೋದವರು ಈ ವರೆಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 120/15 ಕಲಂ: ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: