Monday, May 18, 2015

Daily Crime Reports As on 18/05/2015 at 19:30 Hrsಅಪಘಾತ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ರೋಹಿತ್ ವಾಸ: ಹರಪನಕೆರೆ, ಕುಂಭಾಶಿ ಪೋಸ್ಟ್‌, ಕುಂದಾಪುರ ತಾಲೂಕು ರವರು ದಿನಾಂಕ 18.05.15 ರಂದು 12:40 ಗಂಟೆಗೆ ತನ್ನ ದ್ವಿಚಕ್ರ ವಾಹನ ನಂಬ್ರ ಕೆಎ 20 ಈಎಫ್‌ ‌3004ನೇದರಲ್ಲಿ ತನ್ನ ಹೆಂಡತಿ ಕಲಾವತಿಯನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ತೆಕ್ಕಟ್ಟೆಯಿಂದ ಮಣಿಪಾಲಕ್ಕೆ ಬಂದು ಮಣಿಪಾಲದಲ್ಲಿ ಕೆಲಸ ಪೂರೈಸಿ ಉಡುಪಿ ಕಡೆಗೆ ಹೋಗುತ್ತಿದ್ದಾಗ ಲಕ್ಷ್ಮೀಂದ್ರನಗರ ಬಳಿ ಇರುವ ಬೆಕಸಿನ್‌ ಬಾರ್ ಬಳಿ ಬರುವಾಗ ಪುನಃ ಮಣಿಪಾಲ ಕಡೆಗೆ ಹೋಗುವರೇ ದ್ವಿಚಕ್ರ ವಾಹನವನ್ನು ಬಲಗಡೆಗೆ ನಿಲ್ಲಿಸಿ ಇಂಡಿಕೇಟರ್ ಹಾಕಿಕೊಂಡಿರುವಾಗ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಕೆಎ 20ಬಿ 8526ನೇದರ ಆಟೋರಿಕ್ಷಾ ಚಾಲಕನು ಆಟೋ ರಿಕ್ಷಾವನ್ನು ನಿರ್ಲಕ್ಷ್ಯತನ ಹಾಗೂ ಅತೀ ವೇಗದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದ್ವಿಚಕ್ರ ವಾಹನದ ಬಲಬದಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ವಾಹನ ಸಮೇತ ರಸ್ತೆಗೆ ಬಿದ್ದಿದ್ದು, ಢಿಕ್ಕಿ ಹೊಡೆದ ಆಟೋರಿಕ್ಷಾ ಪಲ್ಟಿಯಾಗಿ ಬಿದ್ದಿರುತ್ತದೆ. ಈ ಅಪಘಾತದಿಂದ ಪಿರ್ಯಾದಿದಾರರಿಗೆ ಹಾಗೂ ಅವರ ಹೆಂಡತಿಗೆ ಬಲಕೈಗೆ ಹಾಗೂ ತೋಳಿಗೆ ಪೆಟ್ಟು ಬಿದ್ದಿರುತ್ತದೆ. ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೂ ಪೆಟ್ಟಾಗಿರುತ್ತದೆ. ಪಿರ್ಯಾದಿದಾರರು ಗಾಂಧಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಎಂಬುದಾಗಿ ರೋಹಿತ್ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 86/2015 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಮಟ್ಕಾ ದಾಳಿ ಪ್ರಕರಣ

  • ಉಡುಪಿ: ದಿನಾಂಕ: 18/05/2015 ರಂದು ಶ್ರೀ ಟಿ.ಆರ್‌ ಜಯಶಂಕರ ಪೊಲೀಸ್‌ ನಿರೀಕ್ಷಕರು ಡಿಸಿಐಬಿ ಉಡುಪಿರವರಿಗೆ ದೊರತ ಖಚಿತ ಮಾಹಿತಿಯಂತೆ ಅವರು ಸಿಬ್ಬಂದಿಯವರೊಂದಿಗೆ ಮಧ್ಯಾಹ್ನ 13:00 ಗಂಟೆಗೆ ಉಡುಪಿ ಅಂಬಲಪಾಡಿ ಜಂಕ್ಷನ್‌ ರಿಕ್ಷಾ ನಿಲ್ದಾಣದ ಬಳಿ ದಾಳಿ ನಡೆಸಿ  ಮಟ್ಕಾ ಜುಗಾರಿ ಆಟದಲ್ಲಿ ನಿರತನಾಗಿದ್ದು ನಿತಿನ್‌‌ (20) ತಂದೆ  ಶಂಕರ ವಾಸ: ಕಮಲ ನಿವಾಸ ಕಕ್ಕುಂಜೆ ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಎಂಬವನನ್ನು ವಶಕ್ಕೆ ಪಡೆದು ಅತನಿಂದ ಮಟ್ಕಾ ಜುಗಾರಿಗೆ ಸಂಗ್ರಹಿಸಿದ ನಗದು ರೂಪಾಯಿ 3020/-, ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬರೆಯಲು ಬಳಸಿದ ಬಾಲ್‌ ಪೆನ್‌-1 ನ್ನು ಮಹಜರು ಮುಖಾಂತರ ಸ್ವಾಧೀನಪಡಿಸಿಕೊಂಡಿದ್ದಾಗಿದೆ ಆರೋಪಿಯಿಂದ ಮಟ್ಕಾ ಜುಗಾರಿಯಿಂದ ಸಂಗ್ರಹಿಸಿದ ಹಣವನ್ನು ಪಡೆಯುತ್ತಿದ್ದ ಮಧು ಕರಂಬಳ್ಳಿ ಎಂಬವರು ಸ್ಧಳದಿಂದ ಓಡಿ ಹೋಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 117/2015 ಕಲಂ 78(1)(111) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಪ್ರಮೋದ ಶೆಟ್ಟಿ (23) ತಂದೆ: ಗಣಪಯ್ಯ ಶೆಟ್ಟಿ ವಾಸ: ಗೆಂತ್ರಾಡಿ ಮೂಡುಬಗೆ ಅಂಪಾರು ಗ್ರಾಮ ಕುಂದಾಪುರ ತಾಲೂಕು ಎಂಬವರ ಅಣ್ಣ 32 ವರ್ಷ ಪ್ರಾಯದ ಪ್ರಶಾಂತ ಶೆಟ್ಟಿ (32) ರವರಿಗೆ ಹಣಕಾಸಿನ ತೊಂದರೆ ಇದ್ದು, ಇದರಿಂದ ಜಿವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 17/05/2015 ರಂದು ರಾತ್ರಿ 21:30 ಗಂಟೆಯಿಂದ ದಿನಾಂಕ 18/05/2015 ರ ಬೆಳಿಗ್ಗೆ 6:30 ಗಂಟೆ ಮಧ್ಯಾವಧಿಯಲ್ಲಿ ಅಂಪಾರು ಗ್ರಾಮದ  ಮುಡುಬಗೆಯ ಗೆಂಟ್ರಾಡಿ ಎಂಬಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಪ್ರಮೋದ ಶೆಟ್ಟಿ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 07/2015 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: