Sunday, May 17, 2015

Daily Crime Reports As on 17/05/2015 at 07:00 Hrs


ಅಪಘಾತ ಪ್ರಕರಣಗಳು
  • ಮಣಿಪಾಲ:ಪಿರ್ಯಾದಿದಾರರಾದ ಅಪೀಪಾ (19), ತಂದೆ:ಯು. ಮಹಮ್ಮದ್‌, ವಾಸ:ಸ್ಟೇಟ್ಹೋಮ್‌, ದೇಜಾಡಿ, ಉಚ್ಚಿಲ, ಬಡಾ ಗ್ರಾಮ, ಉಡುಪಿರವರು ದಿನಾಂಕ:16/05/15 ರಂದು ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಮಣಿಪಾಲ ಉಡುಪಿ ರಸ್ತೆಯಲ್ಲಿ ಹೊಂಡಾ ಆಕ್ಟಿವಾ ನಂಬ್ರ ಕೆ.ಎ 20 ಇ.ಡಿ 8583 ನೇದನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಬೆಳಿಗ್ಗೆ 11:30 ಗಂಟೆಗೆ ಇಂದ್ರಾಳಿ ಪೆಟ್ರೋಲ್ ಬಂಕ್ಬಳಿ ತಲುಪುವಾಗ ಹಿಂದಿನಿಂದ ಕೆಎ 20 ಬಿ 7209ನೇ ಬಸ್ಸನ್ನು ಅದರ ಚಾಲಕನು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಇನ್ನೊಂದು ವಾಹನವನ್ನು ಓವರ್ಟೇಕ್ಮಾಡಲು ಹೋಗಿ ಅಪೀಪಾರವರ ವಾಹನದ ಎಡಬದಿಗೆ ಢಿಕ್ಕಿ ಹೊಡೆದ ಪರಿಣಾಮ ಅಪೀಪಾರವರು ವಾಹನ ಸಮೇತ ರಸ್ತೆಗೆ ಬಿದ್ದು, ಅವರ ಎಡಭುಜ ಹಾಗೂ ಎಡಕಾಲಿನ ಪಾದದಲ್ಲಿ ಮೂಳೆ ಮುರಿತ, ಬಲಕಾಲಿನ ಪಾದದ ಮೇಲ್ಭಾಗದಲ್ಲಿ ತರಚಿದ ಗಾಯ ಮತ್ತು ತಲೆಯ ಎಡಬದಿಯಲ್ಲಿ ರಕ್ತಗಾಯವಾಗಿರುತ್ತದೆ. ಅಪಘಾತದಿಂದ ಅಪೀಪಾರವರ ವಾಹನ ಕೂಡ ಜಖಂಗೊಂಡಿರುತ್ತದೆ. ಅಪೀಪಾರವರನ್ನು ಅಲ್ಲಿ ಸೇರಿದವರು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿದ್ದಾಗಿದೆ. ಈ ಬಗ್ಗೆ ಅಪೀಪಾರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 84/15 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಪಡುಬಿದ್ರಿ:ದಿನಾಂಕ:16/05/2015 ರಂದು 10:45 ಗಂಟೆಗೆ ಎರ್ಮಾಳ್ ತೆಂಕ ಗ್ರಾಮದ ಎರ್ಮಾಳ್ ಮಸೀದಿಯ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಿರ್ಯಾದಿದಾರರಾದ ವಿವೇಕ್ (47), ತಂದೆ:ಯೇಸುದಾಸ್ ವಾಸ:ಅಂಬಲಪಾಡಿ, ಕೇರ್‌ಆಫ್‌ ಶೇಕರ್, ಆದಿ ಉಡುಪಿ ರಸ್ತೆ, ಉಡುಪಿರವರು ಕೆಎ 20 ಸಿ 6116 ನೇ ಡಿಸೈರ್ ಕಾರನ್ನು ಉಡುಪಿಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಹಿಂದಿನಿಂದ ಅಂದರೇ ಉಡುಪಿ ಕಡೆಯಿಂದ ಕೆಎ 18 1193 ನೇ ಟಿಪ್ಪರ್ ಚಾಲಕನಾದ ಹೆಚ್.ಪರ್ವತ್ ರೆಡ್ಡಿ ಎಂಬವರು ಟಿಪ್ಪರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಿವೇಕ್‌ರವರು ಚಲಾಯಿಸುತ್ತಿದ್ದ ಕಾರನ್ನು ಓವರ್‌ಟೇಕ್ ಮಾಡಿ ಯಾವುದೇ ಸೂಚನೆ ನೀಡದೇ ಬಲ ಭಾಗಕ್ಕೆ ತಿರುಗಿಸಿದ ಪರಿಣಾಮ ಟಿಪ್ಪರ್ ಕಾರಿಗೆ ತಾಗಿ ಕಾರಿನ ಮುಂಭಾಗ ಜಖಂಗೊಂಡಿರುತ್ತದೆ. ಈ ಬಗ್ಗೆ ವಿವೇಕ್‌ರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 71/15 ಕಲಂ:279 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬೈಂದೂರು:ದಿನಾಂಕ:16/05/2015 ರಂದು ಅಪರಾಹ್ನ 03:30 ಗಂಟೆಗೆ ಕುಂದಾಪುರ ತಾಲೂಕು ಗೋಳಿಹೊಳೆ ಗ್ರಾಮದ ಅರೆ ಶಿರೂರು ಎಂಬಲ್ಲಿ ಕೆ.ಎ 20 ಇಇ 3908 ನೇ ಮೋಟಾರ್‌ ಸೈಕಲ್‌ನ ಸವಾರನು ಆತನ ಮೋಟಾರ್‌ ಸೈಕಲಿನಲ್ಲಿ ಹಿಂಬದಿಯಲ್ಲಿ ಸಹ ಸವಾರನನ್ನು ಕುಳ್ಳಿರಿಸಿಕೊಂಡು ಕೊಲ್ಲೂರು ಕಡೆಯಿಂದ ಬೈಂದೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿ ಕೊಲ್ಲೂರು ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದ ಜೀಪೊಂದನ್ನು ಓವರ್‌ ಟೇಕ್‌ ಮಾಡಿ ಬೈಂದೂರು ಕಡೆಯಿಂದ ಕೊಲ್ಲೂರು ಕಡೆ ಬರುತ್ತಿದ್ದ ಕೆ ಎ 14 ಬಿ 3487 ನೆ ಬೊಲೆರೋ ಜೀಪಿಗೆ ಚಾಲಕನ ಬಲ ಬದಿಯ ಟಯರಿನ ಮುಂಬಾಗದ ಹೆಡ್‌ ಲೈಟ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ನಲ್ಲಿದ್ದ ನಾಗೇಂದ್ರ ಮತ್ತು ಹರೀಶ್‌ ರವರ ತಲೆ, ಕೈಕಾಲುಗಳಿಗೆ ತೀವೃ ರೀತಿಯ ರಕ್ತ ಗಾಯವಾಗಿರುತ್ತದೆ ಎಂಬುದಾಗಿ ವಸಂತ ಹೆಗ್ಡೆ [49] ತಂದೆ:ಸುಬ್ಬಣ್ಣ ಹೆಗ್ಡೆ, ವಾಸ:ವರ್ಷಲಾ ನಿಲಯ, ಅರೆಶೀರೂರು, ಗೋಳಿಹೊಳೆ ಗ್ರಾಮ, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 126/2015 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಉಡುಪಿ ಸಂಚಾರ:ಪಿರ್ಯಾದಿದಾರರಾದ ತಿಪ್ಪಣ್ಣ (52), ತಂದೆ:ಶಿವನಗೌಡ ವಾಸ:ಬನ್ನಂಜೆ ನಾಗ ದೇವಸ್ಥಾನದ ಹತ್ತಿರ, ಉಡುಪಿರವರು ದಿನಾಂಕ:16/05/2015 ರಂದು ತನ್ನೊಂದಿಗೆ ಕೂಲಿ ಕೆಲಸ ಮಾಡಿಕೊಂಡಿರುವ ಮಲ್ಲೇಶ್‌ನೊಂದಿಗೆ ಕೆಲಸ ಮುಗಿಸಿ ಉಡುಪಿ ಕರಾವಳಿ ಜಂಕ್ಷನ್‌ ಕಡೆಯಿಂದ ಶಾರದಾ ಇಂಟರ್‌ನ್ಯಾಷನಲ್ ಹೊಟೆಲ್ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವರ ಹಿಂದಿನಿಂದ ಕೆಎ 20 ಪಿ 6962 ನೇ ಇಕೊ ಕಾರಿನ ಚಾಲಕಿ ನಜೀಮಾ ಬಾನುರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ತಿಪ್ಪಣ್ಣರವರೊಂದಿಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ, ಮಲ್ಲೇಶ್ನಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ, ಆತನು ರಸ್ತೆಗೆ ಬಿದ್ದಿದ್ದು ಕೂಡಲೇ ಆತನನ್ನು ಮೇಲಕ್ಕೆತ್ತಿ ಉಪಚರಿಸಿ ನೋಡಲಾಗಿ ಆತನ ತಲೆ ಮತ್ತು ಹಣೆಗೆ ತೀವ್ರ ತರಹದ ರಕ್ತ ಗಾಯವಾಗಿದ್ದು ಮಾತನಾಡುತ್ತಿರಲಿಲ್ಲ, ಕೂಡಲೇ ಅದೇ ಡಿಕ್ಕಿ ಹೊಡೆದ ಕಾರಿನಲ್ಲಿ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಅಪಘಾತಕ್ಕೆ ಇಕೊ ಕಾರಿನ ಚಾಲಕಿ ನಜೀಮಾ ಬಾನುರವರ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದೆ ಎಂಬುದಾಗಿ ತಿಪ್ಪಣ್ಣರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 47/2015 ಕಲಂ:279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
  • ಬ್ರಹ್ಮಾವರ:ದಿನಾಂಕ:15/05/2015 ರಂದು  18:00 ಗಂಟೆಯಿಂದ 19:30 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು, ಚಾಂತಾರು ಗ್ರಾಮದ, ಬ್ರಹ್ಮಾವರದ ಲಕ್ಷ್ಮೀ ಪ್ಲಾಜಾ ಕಟ್ಟಡದ ಕೆಳ ಅಂತಸ್ತಿನ ಅಂಗಡಿಯ ಎದುರು ನಿಲ್ಲಿಸಿದ ಪಿರ್ಯಾದಿದಾರರಾದ ರೋಕಿ ಲೂವಿಸ್ (48) ತಂದೆ:ದಿವಂಗತ ಪೀಟರ್ ಲೂವಿಸ್, ವಾಸ:ಮಟಪಾಡಿ ರೋಡ್, ಚೇತನ್ ನಗರ, ಚಾಂತಾರು ಗ್ರಾಮ, ಉಡುಪಿರವರ ಟಿ.ವಿ.ಎಸ್ ಸ್ಟ್ರೀಕ್ ಸ್ಕೂಟರ್ ನಂಬ್ರ ಕೆಎ 20 ಇಡಿ 5762 ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತಿನ ಮೌಲ್ಯ  30,000 ರೂಪಾಯಿ ಆಗಿರುತ್ತದೆ.ಈ ಬಗ್ಗೆ ರೋಕಿ ಲೂವಿಸ್‌ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 84/15 ಕಲಂ:379 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
ಅಸ್ವಾಭಾವಿಕ ಮರಣ ಪ್ರಕರಣ
  • ಪಡುಬಿದ್ರಿ:ದಿನಾಂಕ:16/05/2015 ರಂದು ಮಧ್ಯಾಹ್ನ 2:00 ಗಂಟೆಯಿಂದ ಸಂಜೆ 6:00 ಗಂಟೆಯ ಮಧ್ಯದ ಅವಧಿಯಲ್ಲಿ ಪಲಿಮಾರು ಗ್ರಾಮದ ಪಲಿಮಾರು ಹೊಯ್ಗೆ ಎಂಬಲ್ಲಿರುವ ರೈಲ್ವೆ ಹಳ್ಳಿಯಲ್ಲಿ ಪಿರ್ಯಾದಿದಾರರಾದ ವಿಜಯ.ಎಂ.ಕೋಟ್ಯಾನ್ (34), ತಂದೆ:ಮೋನಪ್ಪ ಆರ್. ಕೋಟ್ಯಾನ್, ವಾಸ:ನಡಿಕೊಪ್ಪಲ, ಚಿಟ್ಟೆಮನೆ, ಪಲಿಮಾರು ಅಂಚೆ, ಅತಿಕಾರಿ ಬೆಟ್ಟು ಗ್ರಾಮ, ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆರವರ ತಂದೆ ಮೋನಪ್ಪ.ಆರ್. ಕೋಟ್ಯಾನ್ (75) ಎಂಬವರು ವಿಪರೀತ ಶರಾಬು ಕುಡಿದು ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ, ಮೈ ಮೇಲಿನ ಸ್ವಾಧೀನ ತಪ್ಪಿ ಹೋಗಿ, ಬರುವ ಯಾವುದೋ ರೈಲಿಗೆ ಆಕಸ್ಮಿಕವಾಗಿ ಸಿಕ್ಕಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವಿಜಯ.ಎಂ.ಕೋಟ್ಯಾನ್‌ರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 12/15 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: