Saturday, May 16, 2015

Daily Crime Reports As on 16/05/2015 at 19:30 Hrs

ಅಪಘಾತ ಪ್ರಕರಣಗಳು
  • ಉಡುಪಿ: ದಿನಾಂಕ 16/05/2015 ರಂದು ಪಿರ್ಯಾದಿದಾರರಾದ ಶ್ರೀಮತಿ ವಿಮಲಾ ಮಾಬಿನ್ (64) ಗಂಡ ಜಾರ್ಜ್ ಮಾಬಿನ ವಾಸ:ಕಡವಿನ ಬಾಗಿಲಿನ ಹತ್ತಿರ ಪಿತ್ರೋಡಿ ಉದ್ಯಾವರ, ಉಡುಪಿ ತಾಲೂಕು ರವರು ಕೆಎ 51 ಬಿ 8503 ನೇ ಮ್ಯಾಕ್ಸಿ ಕ್ಯಾಬ್ ನಲ್ಲಿ ಒಟ್ಟು 13 ಜನರೊಂದಿಗೆ ತನ್ನ ಸಂಬಂಧಿಕರ ಔತಣಕೂಟಕ್ಕೆಂದು ಕಟಪಾಡಿ ಚರ್ಚ್ ನಿಂದ ಉಡುಪಿ ಶ್ಯಾಮಿಲಿ ಹಾಲ್ ಗೆ ಹೊರಟಿದ್ದು, ರಾ ಹೆ 66 ರಲ್ಲಿ ಹೋಗುತ್ತಿರುವಾಗ ಮಧ್ಯಾಹ್ನ ಸುಮಾರು 12.30 ಗಂಟೆಗೆ ಉಡುಪಿ ಅಬ್ಕೋ ಸ್ಟೀಲ್ ಸ್ವಲ್ಪ ಮುಂದಕ್ಕೆ ತಲುಪುವಾಗ ಉಡುಪಿ ಕಡೆಯಿಂದ ಕಟಪಾಡಿ ಕಡೆಗೆ ಕೆಎ 47 3491ನೇ ಲಾರಿ ಚಾಲಕ ಸಲ್ಮಾನ್ ಎಂಬಾತನು ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ಮ್ಯಾಕ್ಸಿ ಕ್ಯಾಬ್ ಗೆ ಡಿಕ್ಕಿ ಹೊಡೆದ ಪರಿಣಾಮ ಮ್ಯಾಕ್ಸಿ ಕ್ಯಾಬ್ ನ ಎದುರಿನ ಗ್ಲಾಸ್ ಹಾಗೂ ಬಲಬದಿಯ ಮೂರು ಕಿಟಕಿಯ ಗ್ಲಾಸ್ ಪುಡಿಯಾಗಿದ್ದು, ಮ್ಯಾಕ್ಸಿ ಕ್ಯಾಬ್ ನ ಮುಂದೆ ಕಿಟಕಿ ಬದಿಯಲ್ಲಿ ಕುಳಿತಿದ್ದ ಪಿರ್ಯಾದಿದಾರರ ಬಲಕೈ ಮೊಣಗಂಟಿನ ಮೂಳೆ ಮುರಿತವಾಗಿದ್ದು, ಕೈಯ ಮೊಣಗಂಟಿನ ಬಳಿ ರಕ್ತಗಾಯವಾಗಿರುತ್ತದೆ. ಹಿಂಬದಿ ಸೀಟಿನಲ್ಲಿದ್ದ ಶರ್ವಿನ್ ಸೋನ್ಸ್ ಎಂಬ ಹುಡುಗನಿಗೆ ಬಲಕೈ ಮೊಣಗಂಟಲಿನ ಬಳಿ ರಕ್ತಗಾಯವಾಗಿರುತ್ತದೆ. ಗಾಯಾಳುಗಳನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಶ್ರೀಮತಿ ವಿಮಲಾ ಮಾಬಿನ್ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 46/2015 ಕಲಂ 279, 337, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

No comments: