Thursday, May 14, 2015

Daily Crime Reports As on 14/05/2015 at 19:30 Hrsಅಪಘಾತ ಪ್ರಕರಣ

  • ಪಡುಬಿದ್ರಿ: ದಿನಾಂಕ 13.05.2015 ರಂದು ರಾತ್ರಿ 9:30 ಗಂಟೆಗೆ ಲಾರಿ ನಂಬ್ರ ಕೆಎ 23 ಎ 7916 ನೇದನ್ನು ಅದರ ಚಾಲಕನು ರಾ.ಹೆ. 66 ರಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತೆಂಕ ಗ್ರಾಮದ ಎರ್ಮಾಳು ಮಸೀದಿ ಬಳಿ ಒಂದು ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ತೀರಾ ಬಲ ಭಾಗಕ್ಕೆ ಬಂದು ಎದುರಿನಿಂದ ಅಂದರೆ ಮಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಟಿ ಎನ್ 52 ಎಕ್ಸ್ 8499 ನೇ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಲಾರಿಗಳ ಮುಂಭಾಗ ಪೂರ್ತಿ ಜಖಂಗೊಂಡಿದ್ದು, ಟಿ ಎನ್ 52 ಎಕ್ಸ್ 8499 ನೇದರ ಚಾಲಕ ಅಲುಕ್ಕು ಸ್ವಾಮಿಯವರ ಪಾದಕ್ಕೆ ರಕ್ತಗಾಯವಾಗಿರುತ್ತದೆ ಹಾಗೂ ಆರೋಪಿ ಲಾರಿ ಚಾಲಕನಿಗೂ ಗಾಯಗಳಾಗಿರುತ್ತದೆ. ಈ ಅಪಘಾತಕ್ಕೆ ಲಾರಿ ನಂಬ್ರ  ಕೆಎ 23 ಎ 7916 ನೇದರ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೊಂಡಿರುವ ನವಯುಗ ಕಂಪೆನಿಯ ಅಧಿಕಾರಿಗಳು ರಸ್ತೆಗಳಲ್ಲಿ ಸೂಕ್ತ ಸೂಚನಾ ಫಲಕ ಅಳವಡಿಸದೇ ಅಸಮರ್ಪಕ ರೀತಿಯಲ್ಲಿ ಕಾಮಗಾರಿ ನಡೆಸುತ್ತಿರುವುದು ಕಾರಣವಾಗಿರುತ್ತದೆ ಎಂಬುದಾಗಿ ಕುಂಜರ್ ಮೂರ್ತಿ 32 ವರ್ಷ ವಾಸ: ತಮ್ಮನ್ ಗುತ್ತು ಅಂಚೆ, ಟಿ.ಕೆ. ಪುದೂರ್ ಗ್ರಾಮ, ಪೊಲ್ಲಾಡಿ ತಾಲೂಕು, ಕೂಯಮುತ್ತೂರು ಜಿಲ್ಲೆ, ತಮಿಳುನಾಡು ರಾಜ್ಯ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 70/15 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

No comments: