Thursday, May 14, 2015

Daily Crime Reports As on 14/05/2015 at 17:00 Hrsಅಪಘಾತ ಪ್ರಕರಣ

  • ಹಿರಿಯಡ್ಕ: ದಿನಾಂಕ: 14/05/15 ರಂದು ಬೆಳಿಗ್ಗೆ 08-00  ಗಂಟೆಗೆ ಉಡುಪಿ ತಾಲೂಕು 41 ನೇ ಶೀರೂರು  ಗ್ರಾಮದ ದೇವದಾರ ಕಟ್ಟೆ  ಬಳಿ ಪಿರ್ಯಾದಿ ವಿಠಲ ಪಾಣಾರ ಇವರು ಕೆಎ 20 ಬಿ 5936 ನೇ ಮಾರುತಿ ಒಮಿನಿಯಲ್ಲಿ ಕುಳಿತು ಹಿರಿಯಡ್ಕ ಕಡೆಯಿಂದ ದೊಂಡೆರಂಗಡಿ ಕಡೆಗೆ ಪ್ರಯಾಣಿಸುವಾಗ ಆರೋಪಿಯು ತನ್ನ ಬಾಬ್ತು ಕೆಎ 20 ಎಮ್ 2801 ನೇ ಸ್ಕೋರ್ಪಿಯೋ ವಾಹನವನ್ನು ಎದುರುಬದಿಯಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಬಂದು ಒಮಿನಿಯ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ರಸ್ತೆಯಲ್ಲಿ ಬದಿಗೆ ತಳ್ಳಲ್ಪಟ್ಟು ವಾಹನದ ಒಳಗೆ ಪ್ರಯಾಣಿಸುತ್ತಿದ್ದ ಕರುಣಾಕರ ಎಂಬವರಿಗೆ ಬಲ ಕೈಗೆ ಹಾಗೂ ಮಮತಾ ನಾಯ್ಕ ಎಂಬವರಿಗೆ ತಲೆಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 51/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವಂಚನೆ ಪ್ರಕರಣ

  • ಶಂಕರನಾರಾಯಣ: ದಿನಾಂಕ 13/05/2015 ರಂದು ಮದ್ಯಾಹ್ನ 15.30 ಗಂಟೆಗೆ ಆರೋಪಿಯು ಶಿವಪ್ರಸಾದ ಈತನು ಪಿರ್ಯಾದಿ ನರೇಶ ಕುಮಾರ್ ಶೆಟ್ಟಿ ಇವರಿಗೆ ಸೇರಿದ ವನಶ್ರೀ ಕ್ಯಾಶ್ಯೂ ಫ್ಯಾಕ್ಟರಿಯಿಂದ ಕೆಎ 20 ಬಿ 7587 ನಂಬರಿನ ಪಿಕ್ ಅಪ್ ವಾಹನದಲ್ಲಿ ಸುಮಾರು ರೂ 50,000- ಮೌಲ್ಯದ ಕಚ್ಚಾ ಗೇರು ಬೀಜ ಹಾಗೂ ನಗದು ಹಣ ರೂ 11,400/- ಹಣವನ್ನು ಜಡ್ಡಿನಗದ್ದೆ ಬ್ರ್ಯಾಂಚ್ ಗೆ ತೆಗದು ಕೊಂಡು ಹೋಗಿದ್ದು ಸದ್ರಿ ಗೇರು ಬೀಜ ಹಾಗೂ ನಗದು ಹಣವನ್ನು ಜಡ್ಡಿನಗದ್ದೆ ಬ್ರ್ಯಾಂಚ್ ಗೆ ತಲುಪಿಸಿದೇ ಪಿರ್ಯಾಧಿದಾರರಿಗೆ ಮೋಸ ಮಾಡಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 108/15 ಕಲಂ: 420 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: