Tuesday, May 12, 2015

Daily Crime Reports As on 12/05/2015 at 19:30 Hrsಅಪಘಾತ ಪ್ರಕರಣ

  • ಹೆಬ್ರಿ: ದಿನಾಂಕ 12-05-2015 ರಂದು ಪಿರ್ಯಾದಿದಾರರಾದ ವೆಂಕಟೇಶ ಶೆಟ್ಟಿ (38) ತಂದೆ: ದಿ ರಾಮಣ್ಣ ಶೆಟ್ಟಿ ವಾಸ: ನಾಡ್ಪಾಲು ಗ್ರಾಮ, ಕಾರ್ಕಳ ತಾಲೂಕು ರವರು ತನ್ನ ಮೋಟಾರ್ ಸೈಕಲ್ ನಲ್ಲಿ ಹಾಗೂ ಅವರ ಸಂಬಂಧಿ ರವಿ ಶೆಟ್ಟಿಯವರು ವಿಜಯ ಕುಲಾಲರವರ ಮೋಟಾರ್ ಸೈಕಲ್ ನಲ್ಲಿ ಸ್ವಂತ ಕೆಲಸದ ನಿಮಿತ್ತ ಹೆಬ್ರಿಗೆ ಬಂದು ವಾಪಾಸು ಹೋಗುತ್ತಿರುವಾಗ ವಿಜಯ ಕುಲಾಲ್ ರವರು ಪಿರ್ಯಾದಿದಾರರ ಮುಂದುಗಡೆ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದು ಸಮಯ ಸುಮಾರು 11:30 ಗಂಟೆ ಸಮಯಕ್ಕೆ ನಾಡ್ಪಾಲು ಗ್ರಾಮದ ಸೀತಾನದಿ ಬಾಳೆಬ್ಬಿ ಎಂಬಲ್ಲಿ ಸೋಮೇಶ್ವರ ಕಡೆಯಿಂದ ಹೆಬ್ರಿ ಕಡೆಗೆ ಕೆ.ಎ. 14-ಪಿ- 1503ನೇ ಕಾರನ್ನು ಅದರ ಚಾಲಕ ಷಣ್ಮುಖ ಟಿ.ಆರ್ ಎಂಬವರು ಅತೀ ವೇಗ ಹಾಗೂ ನಿರ್ಲಕ್ಷ್ಯ ತನದಿಂದ ಚಲಾಯಿಸಿ ರಸ್ತೆಯ ತೀರಾ ಬಲ ಬದಿಗೆ ಬಂದು ವಿಜಯ ಕುಲಾಲರವರು ಚಲಾಯಿಸುತ್ತಿದ್ದ ಕೆ.ಎ.- 20-ವೈ- 6950ನೇ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಮೋಟಾರ್ ಸೈಕಲ್ ಸವಾರ ವಿಜಯ ಕುಲಾಲ್ ರವರ ಎರಡೂ ಕಾಲು ಮತ್ತು ಮುಖಕ್ಕೆ ಹಾಗೂ ಸಹ ಸವಾರ ರವಿಶೆಟ್ಟಿಯವರ ಬಲ ಕಾಲು ಮತ್ತು ಎಡ ಕಣ್ಣಿನ ಬಳಿ ಗುದ್ದಿದ ರಕ್ತಗಾಯ ಹಾಗೂ ಎರಡೂ ವಾಹನ ಜಖಂ ಗೊಂಡಿರುತ್ತದೆ ಎಂಬುದಾಗಿ ವೆಂಕಟೇಶ ಶೆಟ್ಟಿ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 40 /2015 ಕಲಂ: 279 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಹೆಂಗಸು ಕಾಣೆ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಗಣೇಶ (34) ತಂದೆ: ರಂಗ ಪೂಜಾರಿ, ವಾಸ: ಗಣೇಶ ಕೃಪಾ ಶನೀಶ್ವರ ದೇವಸ್ಥಾನದ ಎದುರು, ಪಾರಂಪಳ್ಳಿ ಗ್ರಾಮ ಉಡುಪಿ ತಾಲೂಕು ರವರ ಅಜ್ಜಿ ಮಿಣ್ಣು ಪೂಜಾರ್ತಿ ಪ್ರಾಯ 72 ವರ್ಷ ಎಂಬವರು ದಿನಾಂಕ 11/05/2015 ರಂದು ಸಂಜೆ 6:00 ಗಂಟೆಗೆ ಉಡುಪಿ ತಾಲೂಕು ಪಾರಂಪಳ್ಳಿ ಗ್ರಾಮದ ಗಣೇಶ ಕೃಪಾ ಎಂಬಲ್ಲಿನ ತನ್ನ ಮನೆಯಿಂದ ಸಾಲಿಗ್ರಾಮ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಎಂಬುದಾಗಿ ಗಣೇಶ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 106/2015 ಕಲಂ: ಹೆಂಗಸು ಕಾಣೆಯಂತೆ ಪ್ರಕರಣ ದಾಖಲಿಸಲಾಗಿದೆ.

No comments: