Monday, May 11, 2015

Daily Crime Reports As on 11/05/2015 at 19:30 Hrsಹಲ್ಲೆ ನಡೆಸಿ, ಜೀವ ಬೆದರಿಕೆ ನೀಡಿದ ಪ್ರಕರಣಗಳು

  • ಅಮಾಸೆಬೈಲು: ದಿನಾಂಕ 10/05/2015 ರಂದು ಸಂಜೆ 6:45 ಗಂಟೆಗೆ ಆಪಾದಿತ ಪ್ರಭಾಕರ ಆಚಾರಿ ಎಂಬವರು ಹೊಸಂಗಡಿ ಗ್ರಾಮ ಪಂಚಾಯತ್‌ನಿಂದ ಅಳವಡಿಸಿದ್ದ ನಳ್ಳಿಯ ನೀರು ಪಿರ್ಯಾದಿದಾರರಾದ ಸುರೇಶ್ ಆಚಾರಿ  ತಂದೆ: ರಾಮ ಆಚಾರಿ  ವಾಸ; ಕಾರೂರು ಹೊಸಂಗಡಿ ಗ್ರಾಮ ಕುಂದಾಪುರ ತಾಲೂಕು ರವರ ಮನೆಗೆ ಹೋಗುವುದನ್ನು ಬಂದ್ ಮಾಡಿದ್ದನ್ನು ಕೇಳಿದಾಗ ಆಪಾದಿತ ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರಿಗೆ ದೊಣ್ಣೆಯಿಂದ ಬೆನ್ನಿಗೆ ಕಾಲಿಗೆ ತೊಡೆಗೆ ಹೊಡೆದುದ್ದಲ್ಲದೇ ತಪ್ಪಿಸಲು ಬಂದ ರಾಜೇಶನಿಗೆ ಹೊಡೆದು ಆಪಾದಿತನ ಹೆಂಡತಿ ಅಕ್ಕ ಬಾವ ಅಮ್ಮ ಓಡಿ ಬಂದು ಇನ್ನು ಹೊಡೆ ಎಂದು ಪ್ರಚೋದನೆ ಮಾಡಿದ್ದಲ್ಲದೇ ಮುಂದಕ್ಕೆ ನಳ್ಳಿಯ ವಿಚಾರದಲ್ಲಿ ಬಂದರೆ, ನಿಮ್ಮನ್ನು ಕೊಂದು ಮುಗಿಸುತ್ತೇನೆ ಎಂದು  ಜೀವ ಬೆದರಿಕೆ ಹಾಕಿದ್ದು, ಈ ಘಟನೆಗೆ  ಆಸ್ತಿಯ ವಿಚಾರದಲ್ಲಿ ವ್ಯೆಷ್ಯಮ್ಯವಿದ್ದು, ಅದೇ ಉದ್ದೇಶದಿಂದ ಹಲ್ಲೆ ನಡೆಸಿರುವುದಾಗಿದೆ ಎಂಬುದಾಗಿ ಸುರೇಶ್ ಆಚಾರಿ ರವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ 20/15 ಕಲಂ 143, 147, 148, 324, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

  • ಅಮಾಸೆಬೈಲು: ಹೊಸಂಗಡಿ ಗ್ರಾಮ ಪಂಚಾಯತ್‌ನಿಂದ ಅಳವಡಿಸಿದ್ದ ನಳ್ಳಿಯಲ್ಲಿ ನೀರು ಬಾರದ ಕಾರಣ ಪಿರ್ಯಾದಿದಾರರಾದ ಪ್ರಭಾಕರ ಆಚಾರಿ ಕಾರೂರು (33) ತಂದೆ:ಶಂಕರಾ ಆಚಾರಿ ಹೊಸಂಗಡಿ ಗ್ರಾಮ ಕುಂದಾಪುರ ತಾಲೂಕು ರವರು ಪಂಚಾಯತಿನ ಚಿಕ್ಕ ಬೆಳಾರೆ ಸೇರಿಕೊಂಡು ದಿನಾಂಕ 10/05/2015 ರಂದು ಸಂಜೆ 6:30 ಗಂಟೆಯ ಸಮಯಕ್ಕೆ ನಳ್ಳಿ ನೀರಿನ ಪೈಪ್ ಲೈನನ್ನು ರಿಪೇರಿ ಮಾಡುತ್ತಿರುವಾಗ, ಗೋವಿಂದ ಆಚಾರಿ, ಜಯಲಕ್ಷ್ಮೀ, ರಾಘವೇಂದ್ರ, ರಾಜೇಶ, ಸುಮನ, ಪ್ರೇಮ, ಸುರೇಶ, ದಿನೇಶ, ಗಣೇಶ, ಎಂಬವರು ಸಮಾನ ಉದ್ದೇಶದಿಂದ ಸೇರಿಕೊಂಡು ಓಡಿ ಬಂದು ಪಿರ್ಯಾದುದಾರರನ್ನು ಗಟ್ಟಿಯಾಗಿ ಹಿಡಿದುಕೊಂಡು ಬಂದಿದ್ದ ಕಬ್ಬಿಣದ ರಾಡಿನಿಂದ ತಲೆಗೆ ಕಾಲಿಗೆ ಹೊಡೆದು, ಕತ್ತಿಯಿಂದ ಬಲಕೈ ಬೆರಳಿಗೆ ಕಡಿದಿದ್ದು ಆಲ್ಲದೇ ಹೊಡೆಯುತ್ತಿರುವುದನ್ನು ತಪ್ಪಿಸಲು ಬಂದ ಪಿರ್ಯಾದಿಯ ಅಕ್ಕ ಹಾಗೂ ಹೆಂಡತಿಗೂ ಹಲ್ಲೆ ನಡೆಸಿ, ನಳ್ಳಿ ನೀರನ್ನು ನೀನೇ ಹಾಳು ಮಾಡಿದ್ದು, ಎಂದು ಅವಾಚ್ಯ ಶಬ್ದದಿಂದ ಬೈದು ಇನ್ನು ಮುಂದೆ ನಳ್ಳಿಯ ಹತ್ತಿರ ಬಂದರೆ ನಿನ್ನನ್ನು ಕೊಂದು ಮುಗಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ , ಪಿರ್ಯಾಧಿದಾರರಿಗೂ ಆಪಾದಿತರಿಗೂ ಆಸ್ತಿಯ ವಿಚಾರದಲ್ಲಿ ವ್ಯೆಷ್ಯಮ್ಯವಿದ್ದು, ಅದೇ ವಿಷಯಕ್ಕೆ ಹಲ್ಲೆ ನಡೆಸಿರುವುದಾಗಿದೆ ಎಂಬುದಾಗಿ ಪ್ರಭಾಕರ ಆಚಾರಿ ಕಾರೂರು ರವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ 19/15 ಕಲಂ 143, 147, 148, 324, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ  

  • ಕಾರ್ಕಳ: ಪಿರ್ಯಾದಿದಾರರಾದ ಗಿರೀಶ್ ದೇವಾಡಿಗ ತಂದೆ ಸಂಜೀವ ದೇವಾಡಿಗ, ಕಸಬಾ, ಕಾರ್ಕಳ ತಾಲೂಕು ರವರು ದಿನಾಂಕ 10.05.2015 ರಂದು ಸಂಜೆ 10:00 ಗಂಟೆಗೆ ತನ್ನ ಮೋಟಾರ್ ಸೈಕಲ್ಲಿನಲ್ಲಿ ಕೆಲಸದ ನಿಮಿತ್ತ ಪಡುಬಿದ್ರೆ ಕಡೆಯಿಂದ ಬೆಳ್ಮಣ್ ಕಡೆಗೆ ಬರುತ್ತಿರುವಾಗ ಎದುರಿನಿಂದ ಬರುತ್ತಿದ್ದ ಕೆ.ಎ 20 ಪಿ. 6580 ನೇ  ಮಾರುತಿ ಆಲ್ಟೋ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದು   ನಂದಳಿಕೆ ಬೋರ್ಡ್ ಶಾಲೆ ಹತ್ತಿರ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡ ಬದಿಯ ಮೋರಿಗೆ ಡಿಕ್ಕಿಹೊಡೆದು ಕೆಳಗಿನ ಚರಂಡಿಗೆ ಹೋಗಿ ನಿಂತಿದ್ದು, ಪಿರ್ಯಾದಿದಾರರು ತನ್ನ ಮೋಟಾರ್ ಸೈಕಲ್‌ನ್ನು ನಿಲ್ಲಿಸಿ ಹತ್ತಿರ ಹೋಗಿ ನೋಡಲಾಗಿ ಕಾರಿನಲ್ಲಿದ್ದ ಚಾಲಕ ಸುನೀಲ್ ಎಂಬುವನಿಗೆ ಹಣೆಗೆ ರಕ್ತ ಗಾಯವಾಗಿರುತ್ತದೆ. ಹಾಗೂ ಕಾರಿನ ಮುಂದಿನ ಸೀಟಿನಲ್ಲಿದ್ದ ರಶ್ಮಿ ಎಂಬುರಿಗೆ ಎದೆಗೆ ಗುದ್ದಿದ ಗಾಯ, ಹಿಂದಿನ ಸೀಟಿನಲ್ಲಿದ್ದ ಲೀಲಾ ಎಂಬವರಿಗೆ ಮುಖಕ್ಕೆ ರಕ್ತಗಾಯ ಹಾಗೂ ಹಿಂದಿನ ಸೀಟಿನಲ್ಲಿದ್ದ ಮಗು ಸುಶ್ರುತ್ ಗೆ ಮುಖ ಹಾಗೂ ದೇಹದಲ್ಲಿ ರಕ್ತ ಗಾಯವಾಗಿರುತ್ತದೆ.  ಈ ಅಫಘಾತಕ್ಕೆ ಕೆಎ 20 ಪಿ. 6580 ನೇ ನೇ ಮಾರುತಿ ಆಲ್ಟೋ ಕಾರು ಚಾಲಕ ಸುನೀಲ್ ರವರ ಅತೀ ವೇಗ ಹಾಗೂ ನಿರ್ಲಕ್ಷತನದ ಚಾಲನೆ ಕಾರಣವಾಗಿರುತ್ತದೆ ಎಂಬುದಾಗಿ ಗಿರೀಶ್ ದೇವಾಡಿಗ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ 68/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

No comments: