Saturday, May 09, 2015

Daily Crime Reports As on 09/05/2015 at 19:30 Hrsಅಪಘಾತ ಪ್ರಕರಣಗಳು

  • ಪಡುಬಿದ್ರಿ: ದಿನಾಂಕ 8.5.2015 ರಂದು ರಾತ್ರಿ 8.45 ಗಂಟೆಗೆ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಅಣ್ಣಾಜಿಗೋಳಿ ಎಂಬಲ್ಲಿ ರಾಜ್ಯ ರಸ್ತೆ 01 ರಲ್ಲಿ ಪಿರ್ಯಾಧಿದಾರರಾದ ಂದ್ರಶೇಖರ ಶೆಟ್ಟಿ, 58 ವರ್ಷ, ತಂದೆ ಧರ್ಮಪಾಲ ಶೆಟ್ಟಿ  ವಾಸ:- ಉಪಾಸನ, ಕದ್ರಿ ದೇವಸ್ಥಾನ ರಸ್ತೆ, ಮಂಗಳೂರು ರವರು ಕಾರು ನಂಬ್ರ ಕೆಎ 19 ಎಂಸಿ- 4747 ನ್ನು ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಆರೋಪಿ ಆಶ್ರಫ್ ಎಂಬವರು ತನ್ನ ಶಿಫ್ಟ್ ಕಾರು ನಂಬ್ರ ಕೆಎ 19 ಝೆಡ್‌‌- 8015 ನ್ನು ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಯಾವುದೇ ಸೂಚನೆ ನೀಡದೇ ಇಂಡಿಕೇಟರ್ ಹಾಕದೇ ಬಲಬದಿಗೆ ತಿರುಗಿಸಿ ಪಿರ್ಯಾಧಿದಾರರ ಕಾರಿಗೆ ಡಿಕ್ಕಿ ಹೊಡೆದು ಅಪಘಾತವೆಸಗಿಪರಿಣಾಮ ಎರಡೂ ವಾಹನಗಳ ಮುಂಭಾಗ ಜಖಂಗೊಂಡಿದ್ದು ಯಾರಿಗೂ ಗಾಯಗಳಾಗಿರುವುದಿಲ್ಲ ಎಂಬುದಾಗಿ ಂದ್ರಶೇಖರ ಶೆಟ್ಟಿ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2015 ಕಲಂ 279 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

  • ಹಿರಿಯಡ್ಕ: ದಿನಾಂಕ 08/05/2015 ರಂದು ರ್ರಾತ್ರಿ 07-45 ಗಂಟೆಗೆ ಫಿರ್ಯಾದಿದಾರರಾದ ಗಣೇಶ ಕುಲಾಲ್‌ ಪ್ರಾಯ: 28  ವರ್ಷ ತಂದೆ: ಗೋವಿಂದ ಕುಲಾಲ್‌  ವಾಸ: ಪಕ್ಕಾಲು ಪೆರ್ಡೂರು ಗ್ರಾಮ ಉಡುಪಿ ತಾಲೂಕು ರವರು ತನ್ನ ಮಿತ್ರ ರಾದ ಕೃಷ್ಣ ಕುಲಾಲ್‌ ಎಂಬವರೊಂದಿಗೆ ಉಡುಪಿ ತಾಲೂಕು ಬೊಮ್ಮರಬೆಟ್ಟು ಗ್ರಾಮದ ಹಿರಿಯಡ್ಕ ದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ಮಾತನಾಡುತ್ತಾ ನಿಂತಿರುವಾಗ ಹಿರಿಯಡ್ಕ ಕಡೆಯಿಂದ ಪೆರ್ಡೂರು ಕಡೆಗೆ KA 20-V- 1592 ನೇ ಬೈಕನ್ನು ಅದರ ಸವಾರ ಮಿಥುನ್‌ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ತಿಪ್ಪೇರುದ್ರ ಎಂಬವರಿಗೆ  ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ  ರಸ್ತೆಗೆ ಬಿದ್ದು ರಕ್ತಗಾಯಗೊಂಡಿದ್ದು ಇಬ್ಬರನ್ನೂ ಮಣಿಪಾಲದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಗಣೇಶ ಕುಲಾಲ್‌ ರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 41/2015 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

No comments: