Tuesday, May 05, 2015

Daily Crime Reports As on 05/05/2015 at 07:00 Hrsಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 04/05/2015 ರಂದು ಸಮಯ ಸುಮಾರು ಸಂಜೆ 5:00 ಗಂಟೆಗೆ ಕುಂದಾಪುರ ತಾಲೂಕು  ಹಟ್ಟಿಯಂಗಡಿ ಗ್ರಾಮದ  ಶ್ರೀ ಶಿವಶಂಕರ ಭಜನ ಮಂದಿರದ  ಬಳಿ  ರಸ್ತೆಯಲ್ಲಿ,   KA20-C-5554 ನೇ  ಟಾಟಾ ಏಸ್ ಗೂಡ್ಸ್  ವಾಹನದ ಚಾಲಕ ಸದ್ರಿ ವಾಹನವನ್ನು  ನೇರಳಕಟ್ಟೆ  ಕಡೆಯಿಂದ  ತಲ್ಲೂರು  ಕಡೆಗೆ  ಅತೀವೇಗ ಹಾಗೂ ಅಜಾಗರುಕತೆಯಿಂದ ಚಾಲನೆ ಮಾಡಿ ಕೊಂಡು  ರಸ್ತೆಯ  ಬಲ ಬದಿಗೆ ಹೋಗಿ ತಲ್ಲೂರು ಕಡೆಯಿಂದ ನೇರಳಕಟ್ಟೆ ಕಡೆಗೆ ಪೈರೋಜ್ ಖಾನ್  ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ  KA20-L-4271ನೇ ಎಂ 80 ದ್ವಿ  ಚಕ್ರ ವಾಹನಕ್ಕೆ  ಎದುರುಗಡೆಯಿಂದ ಡಿಕ್ಕಿ  ಹೊಡೆದ ಪರಿಣಾಮ ಪೈರೋಜ್ ಖಾನ್  ರವರು ಗಾಯಗೊಂಡು ಚಿಕಿತ್ಸೆ ಬಗ್ಗೆ ಮಣಿಪಾಲ  ಕೆ.ಎಂ.ಸಿ ಆಸ್ಪತ್ರೆಗೆ  ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 49/15 ಕಲಂ. 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  • ಕೊಲ್ಲೂರು: ದಿನಾಂಕ: 04.05.2015 ರಂದು ಮಧ್ಯಾಹ್ನ ಸುಮಾರು 03.00 ಗಂಟೆಗೆ ಪಿರ್ಯಾದಿ ಅಬ್ರಾಹಂ.ಜಿ ಇವರು ತನ್ನ ಮನೆಯಲ್ಲಿ ರಬ್ಬರ್ ಶೀಟ್ ಒಣಗಿಸಿ ರಸ್ತೆ ಕಡೆ ನೋಡುತ್ತಾ ನಿಂತಿರುವಾಗ ಹಳ್ಳಿಹೊಳೆ ಕಡೆಯಿಂದ ಮೂದೂರು ಕಡೆಗೆ ಪಿರ್ಯಾದಿದಾರರ ಪರಿಚಯದವರಾದ ಸುರೇಶ್ ಮತ್ತು ಆತನ ಅಣ್ಣ ನಾದ ಸಂತೋಷ ರವರು KA20X 6144 ನೇ ಪಲ್ಸರ ಬೈಕಿನಲ್ಲಿ ಹೋಗುತ್ತಿರುವ ಸಮಯ ಪಿರ್ಯಾದಿದಾರರು ನೋಡುತ್ತಿದಂತೆ ಒಂದು ಜಿಂಕೆಯು ರಬ್ಬರ್ ಪ್ಲಾಂಟೇಶನ್ ನಿಂದ ಹಾರಿ ಬಲಬದಿಯಿಂದ ಎಡಕ್ಕೆ ಜಿಗಿದ ಪರಿಣಾಮ ಬೈಕ್ ಸವಾರ ಸುರೇಶನು ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದ್ದು, ಹಿಂದೆ ಕುಳಿತಿದ್ದ ಸಂತೋಷ ರಸ್ತೆಗೆ ಬಿದ್ದು, ತಲೆಗೆ ತೀವೃ ತರದ ಜಖಂ ಆಗಿದ್ದು, ಅಲ್ಲದೇ ಬೈಕ್ ಸುರೇಶನಿಗೂ ತರಚಿದ ಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರದ ಸರಕಾರಿ ಆಸ್ಪತ್ತೆಗೆ ಪಿರ್ಯಾದಿದಾರರ ಪರಿಚಯದವರಾದ ಸೂಲ್ಯ ಕೊರಗ ರವರ ಓಮ್ನಿ ಕಾರಿನಲ್ಲಿ ಕರೆದುಕೊಂಡು ಹೋಗಿ ವೈಧ್ಯಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದಲ್ಲಿ. ವೈಧ್ಯಾಧಿಕಾರಿಯವರು ತೀವೃ ಜಖಂ ಗೊಂಡ ಸಂತೋಷನನ್ನು ಪರೀಕ್ಷಿಸಿ ಆತನು ಮೃತ ಪಟ್ಟಿರುವುದಾಗಿ  ವೈದ್ಯರು ತಿಳಿಸಿರುತ್ತಾರೆ. ಅಲ್ಲದೇ ಗಾಯಳು ಬೈಕ್ ಸವಾರ ಸುರೇಶನಿಗೂ ಚಿಕಿತ್ಸೆ ನೀಡಿರುತ್ತಾರೆ ಅಪಘತಕ್ಕೆ KA20X 6144 ನೇ ಪಲ್ಸರ್ ಬೈಕ್ ಸವಾರ ಸುರೇಶ ರವರ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 43/15 ಕಲಂ. 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪೊಸ್ಗೆ ಅಲ್ಪೌಜಾನ್ಪ್ರಾಯ:17 ವರ್ಷ ಎಂಬುವವನು ದಿನಾಂಕ 04-05-2015 ರಂದು ಸಮಾರು ಮದ್ಯಾಹ್ನ 02:15 ಗಂಟೆಯ ಸಮಯಕ್ಕೆ ಕೇಸರಕೋಡಿಯ ರೈಲ್ವೇ ಟ್ರ್ಯಾಕ್ಬಳಿ ಇರುವ ಸಂಬಂದಿಕರ ಮನೆಗೆ ಹೋಗಿ ವಾಪಾಸ್ಸು ಮನೆಯ ಕಡೆಗೆ ಕುಂದಾಪುರ ತಾಲೂಕು ಶಿರೂರು ಗ್ರಾಮದ ಕೋಟೆಮನೆ ರೈಲ್ವೇ ಗೇಟ್ಬಳಿಯ ರೈಲ್ವೇ ಟ್ರ್ಯಾಕ್ ಬಳಿ ನಡೆದುಕೊಂಡು ಬರುತ್ತಿರುವಾಗ ರೈಲು ಬರುತ್ತಿರುವುದನ್ನು ಕಂಡು ಹೆದರಿ ಓಡಿ ಬರುತ್ತಿರುವಾಗ ಕಾಲು ಜ್ಯಾರಿ ರೈಲ್ವೇ ಟ್ರ್ಯಾಕ್ ಕೆಳಗಡೆಯ ಇಳಿಜಾರು ಪ್ರದೇಶಕ್ಕೆ ಬಿದ್ದ ಪರಿಣಾಮ ಜಲ್ಲಿಕಲ್ಲು ಹಾಗೂ ಗಿಡ ಪೊದೆಗಳ ಗೆಲ್ಲು ತಾಗಿ ತೀವೃ ರೀತಿಯ ಪೆಟ್ಟಿನಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಯುಡಿಆರ್ ನಂಬ್ರ 14/15 ಕಲಂ 174 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಅಜೆಕಾರು: ನಿಸ್ಮಿತಾ ಶೆಟ್ಟಿ  (22 ವರ್ಷ) ಇವರು ತಮ್ಮ ಮನೆಯ ಕೋಣೆಯಲ್ಲಿ ಮರದ ಮಂಚದ ಮೇಲೆ ಕುಳಿತು ಗೇರು ಬೀಜ ಸುಲಿದು ಕೊಂಡಿರುವಾಗ ಪ್ರಕೃತಿ ವಿಕೋಪದಿಂದ ಉಂಟಾದ ಸಿಡಿಲಿನ ಹೊಡೆತ ನಿಸ್ಮಿತಾನ ಮೈಗೆ ತಾಗಿದ್ದು ಆದರಿಂದ ಸ್ಮತೆ ತಪ್ಪಿ ಬಿದಿದ್ದ  ಅವಳನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕಾರ್ಕಳದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ  ಪರೀಕ್ಷಿಸಿದ ವೈದ್ಯರು ನಿಸ್ಮಿತಾಳು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಯುಡಿಆರ್ ನಂಬ್ರ 06/15 ಕಲಂ 174 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಕುಂದಾಪುರ: ಪಿರ್ಯಾದಿ ಸುರೇಶ್ ಪೂಜಾರಿ ಹಾಗೂ ಪಿರ್ಯಾದಿದಾರರ ತಂಗಿಯ ಮಗಳು ಸುಬ್ರತಾಳ ಮದ್ಯೆ ಜಾಗದ ವಿಷಯದಲ್ಲಿ ತಕರಾರು ಇದ್ದು, ಪಿರ್ಯಾದಿದಾರರ ಜಾಗದಲ್ಲಿ ಸುಬ್ರತಾಳು ಮಣ್ಣನ್ನು ಹಾಕಿದ್ದು, ದಿನಾಂಕ 04/05/2015 ರಂದು 13:30 ಸದ್ರಿ ಮಣ್ಣನ್ನು ತೆಗೆಯಲು ಸುಬ್ರತಾಳಿಗೆ ಹೇಳಿದಾಗ ಸುಬ್ರತಾಳು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದಿದ್ದು, ಬಳಿಕ 14:35 ಗಂಟೆ ಸುಮಾರಿಗೆ ಸುಬ್ರತಾಳು ಮೊಬೈಲ್ನಲ್ಲಿ 'ಕಮಲಾಕ್ಷಣ್ಣ ಸುರೇಶ ಈಗ ಮನೆಯಿಂದ ಹೊರಡುತ್ತಾನೆ, ಅವನನ್ನು ಬಿಡಬೇಡ' ಎಂದು ಹೇಳಿದ್ದು, ಪಿರ್ಯಾದಿದಾರರು ಕುಂದಾಪುರ ಪುರಸಭೆ ಕಡೆಗೆ ಹೋಗಲು ಸೈಕಲ್‌‌‌ನಲ್ಲಿ ಹೋಗುತ್ತಾ 15:20  ಗಂಟೆಗೆ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಭಂಡಾರ್ಕರ್ಸ್‌‌ ಕಾಲೇಜಿನ ಹಿಂಭಾಗ 4 ರಸ್ತೆ ಕೂಡುವಲ್ಲಿ ತಲುಪಿದಾಗ ಶಾಸ್ತ್ರಿ ಸರ್ಕಲ್ ಕಡೆಯಿಂದ ಕೆ. 20 8893 ನೇ ನಂಬ್ರದ ಸ್ವಿಪ್ಟ್ ಕಾರಿನಲ್ಲಿ ಆರೋಪಿ ಕಮಲಾಕ್ಷನು ಬಂದು ಪಿರ್ಯಾದಿದಾರರ ಸೈಕಲ್‌‌ಗೆ ಕಾರನ್ನು ಅಡ್ಡ ಇಟ್ಟು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಕೈಯಲ್ಲಿದ್ದ ಜಾಕ್ಲಿವರ್ನಿಂದ ಪಿರ್ಯಾದಿದಾರರಿಗೆ ಹಲ್ಲೆ ನಡೆಸಿ, ಬಳಿಕ ಪಂಚ್ನಿಂದ ಹೊಡೆದಿದ್ದು, ಪಿರ್ಯಾದಿದಾರರು ನೆಲದ ಮೇಲೆ ಬಿದ್ದಾಗ ಕಾಲಿನಿಂದ ತುಳಿದು ಬಳಿಕ ಪಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ಬಗ್ಗೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ 127/2015  ಕಲಂ: 341, 504, 324, 323, 506, 109 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕುಂದಾಪುರ: ದಿನಾಂಕ: 04/05/2015 ರಂದು ಪಿರ್ಯಾದಿ ಕಮಲಾಕ್ಷ ಇವರು ತನ್ನ ಬಾಬ್ತು ಕಾರು  ಚಲಾಯಿಸಿಕೊಂಡು ಕುಂದಾಪುರಕ್ಕೆ ಬಂದು ಕೆಲಸ ಮುಗಿಸಿ ವಾಪಾಸು ಮನೆಗೆ ಹೋಗುವರೇ ಹೊರಟು ಮದ್ಯಾಹ್ನ 2:30 ಗಂಟೆಗೆ ಕಾಲೇಜ್ ರೋಡ್, ಯಡ್ತಾರೆ ಸರ್ಕಲ್ ಬಳಿ ಹೋಗುತ್ತಿರುವಾಗ ಆಪಾದಿತ ಸುರೇಶ್ ಪೂಜಾರಿ ಎಂಬವರು ಕಾರಿನ ಎದುರಿಗೆ ಬಂದು ಕಾರನ್ನು ಮುಂದಕ್ಕೆ ಹೋಗದಂತೆ ತಡೆದು ಕಾರಿನಿಂದ ಕೆಳಗೆ ಇಳಿ ಎಂದು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರು ಕಾರಿನಿಂದ ಕೆಳಗೆ ಇಳಿದಾಗ ಏಕಾಏಕಿ ಕೈಯಿಂದ ತಲೆಗೆ, ಬೆನ್ನಿಗೆ, ಎದೆಗೆ  ಗುದ್ದಿ ಕೆಳಗೆ ದೂಡಿ ಹಾಕಿ ಕಾಲಿನಿಂದ ತುಳಿದಿದ್ದಲ್ಲದೇ ಇನ್ನೊಮ್ಮೆ ಮನೆಯ ಜಾಗದ ವಿಚಾರದಲ್ಲಿ ನೀನು ಬಂದರೆ ನಿನ್ನ ಕೈಕಾಲು ಮುರಿದು ಹಾಕುತ್ತೇಣೇ ಏಮಧೂ ದು ಬೆದರಿಕೆ ಹಾಕಿ ಹೋಗಿರುತ್ತಾರೆ. ಬಗ್ಗೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/2015  ಕಲಂ: 341, 504, 506, 323 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: