Monday, May 04, 2015

Daily Crime Reports As on 04/05/2015 at 19:30 Hrsಅಪಘಾತ ಪ್ರಕರಣಗಳು  

  • ಹೆಬ್ರಿ: ಪಿರ್ಯಾದಿದಾರರಾದ ಕುಮಾರ್‌ ಎಮ್‌ (21)ತಂದೆ ಮಂಜಪ್ಪ ವಾಸ ವಾಲ್ಮೀಕಿ ಬಡಾವಣೆ 4 ನೇ ಕ್ರಾಸ್‌ ಮಲೆಬೆನ್ನೂರು ಗ್ರಾಮ ಹರಿಹರ ತಾಲೂಕು ಎಂಬವರು ದಿನಾಂಕ 03/05/15 ರಂದು ತನ್ನ ದೊಡ್ಡಪ್ಪನ ಮಗನ ಕೆಎ 17 ಪಿ 02 56 ನೇ ಮಾರುತಿ ಓಮ್ನಿ ಕಾರ್‌ನಲ್ಲಿ ಗೌರಮ್ಮ ಎಂಬವರನ್ನು ಮಲೆ ಬೆನ್ನೂರಿನಿಂದ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಆಗುಂಬೆ ಹೆಬ್ರಿ ಮಾರ್ಗವಾಗಿ ಕರೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 06:45 ಗಂಟೆಗೆ ಹೆಬ್ರಿಯ ಅಡಾಲ್‌ ಬೆಟ್ಟು ಎಂಬಲ್ಲಿ ತಲುಪುವಾಗ ಹೆಬ್ರಿ ಕಡೆಯಿಂದ ಸೋಮೇಶ್ವರ ಕಡೆಗೆ ಕೆಎ 20 ಇಬಿ 7707ನೇ ಮೋಟಾರ್‌ ಸೈಕಲ್‌ ಸವಾರ ಗಂಗಾಧರ ಎಂಬವರು ಸಹ ಸವಾರ ಉದಯನನ್ನು ಕುಳ್ಳಿರಿಸಿಕೊಂಡು ಸದ್ರಿ ಮೋಟಾರ್‌ ಸೈಕಲನ್ನು ರಸ್ತೆಯ ತೀರಾ ಬಲ ಬದಿಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಮಾರುತಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರಿಬ್ಬರಿಗೂ  ತೀವ್ರ ತರದ ಹಾಗೂ ಫಿರ್ಯಾದಿದಾರರಿಗೆ ಸಾದಾರಣ ಸ್ವರೂಪದದ ಗಾಯವಾಗಿದ್ದು ಈ ಬಗ್ಗೆ ಗಾಯಗೊಂಡವರನ್ನು 108 ಅಂಬ್ಯುಲೆನ್ಸ್‌ನಲ್ಲಿ ಚಿಕಿತ್ಸೆ ಬಗ್ಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಕುಮಾರ್‌ ಎಮ್‌ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 35/15 ಕಲಂ: ಕಲಂ: 279, 337, 338 ಐ.ಪಿ.ಸಿ.ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಹಿರಿಯಡ್ಕ: ದಿನಾಂಕ 04/05/2015 ರಂದು ಫಿರ್ಯಾದುದಾರರಾದ ಪ್ರಶಾಂತ ಪ್ರಭು ಪ್ರಾಯ: 32 ವರ್ಷ ತಂದೆ: ಸದಾನಂದ ಪ್ರಭು ವಾಸ: ಶ್ರೀ ರಾಮ್‌ ಬಜಗೋಳಿ  ಮುಡಾರು ಗ್ರಾಮ ಕಾರ್ಕಳ ತಾಲೂಕು ರವರು ತನ್ನ ಸೋದರ ಮಾವನೊಂದಿಗೆ ಕೆಎ 04  ಜಡ್‌ 3843 ನೇ ಕಾರಿನಲ್ಲಿ ಗುಡ್ಡೆ ಯಂಗಡಿಯಿಂದ ಉಡುಪಿ ಕಡೆಗೆ ಹೋಗುವಾಗ, ಬೆಳಿಗ್ಗೆ 06:00 ಗಂಟೆಗೆ ಉಡುಪಿ ತಾಲೂಕು ಬೊಮ್ಮರ ಬೆಟ್ಟು ಗ್ರಾಮದ ಹಿರಿಯಡ್ಕ ಜೋಡುಕಟ್ಟೆ ಎಂಬಲ್ಲಿ ತಲುಪುವಾಗ ಅವರ ಎದುರು ಬದಿಯಿಂದ ಅಂದರೆ ಉಡುಪಿ ಕಡೆಯಿಂದ TS- 07/ UA 1279  ನೇ ಟ್ರಕ್‌ನ್ನು ಅದರ ಚಾಲಕ ವಿಜಯ ಕುಮಾರ್ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಬಂದು ಓವರ್‌ ಟೇಕ್‌ ಮಾಡಲು ಯತ್ನಿಸುವ ವೇಳೆ ಫಿರ್ಯಾದುದಾರರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂ ಗೊಂಡಿರುವುದಲ್ಲದೆ ಕಾರು ಚಲಾಯಿಸುತ್ತಿದ್ದ ಫಿರ್ಯಾದುದಾರರ ಮಾವ ಹರಿದಾಸ್ ನಾಯಕ್ ರವರ ಎಡ ಕಣ್ಣಿನ ಬಳಿ, ಬಲ ಕಿವಿಗೆ ರಕ್ತಗಾಯವಾಗಿದ್ದು ಹಾಗೂ ಎದೆಯ ಬಲಬದಿಯ ಪಕ್ಕೆಲುಬು ಮುರಿದು ತೀವೃ ಜಖಂ ಗೊಂಡವರನ್ನು ಮಣಿಪಾಲದ ಕಸ್ತೂರ್‌ ಬಾ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಪ್ರಶಾಂತ ಪ್ರಭು ರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/15 ಕಲಂ: ಕಲಂ: 279, 338 ಐ.ಪಿ.ಸಿ.ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: