Monday, May 04, 2015

Daily Crime Reports As on 04/05/2015 at 17:00 Hrs


ಅಪಘಾತ ಪ್ರಕರಣ

  • ಪಡುಬಿದ್ರಿ: ದಿನಾಂಕ 4.5.2015 ರಂದು ಬೆಳಿಗ್ಗೆ 07.30 ಗಂಟೆಗೆ ಉಡುಪಿ ತಾಲೂಕು ತೆಂಕ ಎರ್ಮಾಳ್ ಗ್ರಾಮದ ಅದಮಾರ್ ಕ್ರಾಸ್ ಬಳಿ ರಾಹೆ 66 ರಲ್ಲಿ ಆರೋಪಿ ಕಾರು ಚಾಲಕ ತನ್ನ ಕಾರು ನಂಬ್ರ ಕೆಎ 20 ಎನ್ 8216 ನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಮಧ್ಯದಲ್ಲಿರುವ ಡಿವೈಡರ್‌ಗೆ ಡಿಕ್ಕಿ ಹೊಡೆದು ನಂತರ ವಾಹನ ಹತೋಟಿ ತಪ್ಪಿ ರಸ್ತೆಯ ಪೂರ್ವಕ್ಕೆ ಚಲಾಯಿಸಿಕೊಂಡು ಬಂದು ಮಣ್ಣು ರಸ್ತೆಯಲ್ಲಿ ಸೈಕಲ್‌ ನಲ್ಲಿ ಹೋಗುತ್ತಿದ್ದ ಶೇಖರ ಶೆಟ್ಟಿ (45) ರವರಿಗೆ ಡಿಕ್ಕಿ ಹೊಡೆದು ನಂತರ ಮುಂದಕ್ಕೆ ಹೋಗಿ ಮರಕ್ಕೆ ಹೋಗಿ ಡಿಕ್ಕಿ ಹೊಡೆದಿರುತ್ತಾರೆ. ಪರಿಣಾಮ ಕಾರಿನಲ್ಲಿದ್ದ ಒಬ್ಬರು ಹೆಂಗಸಿಗೆ ಗಂಭೀರ ಗಾಯ ಹಾಗೂ 2 ಜನ ಗಂಡಸಿಗೆ ರಕ್ತಗಾಯವಾಗಿದ್ದು, ಶೇಖರ ಶೆಟ್ಟಿ ರವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಆಸ್ವತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 59/15 ಕಲಂ: ಕಲಂ: 279, 337, 338, 304 (ಎ) ಐ.ಪಿ.ಸಿ.ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾರ್ಕಳ ಗ್ರಾಮಾಂತರ: ಪಿರ್ಯಾದಿ ಮಹೇಶ ಎಮ್ ಡಿ (48) ತಂದೆ: ದೊರೆ, ವಾಸ: ಎಮ್ ಸಿ ಹಳ್ಳಿ ತರಿಕೆರೆ ತಾಲೂಕು, ಚಿಕ್ಕಮಂಗಳೂರು ಜಿಲ್ಲೆ. ಇವರು ಚಿಕ್ಕಮಂಗಳೂರು ಜಿಲ್ಲೆ ತರಿಕೆರೆ ತಾಲೂಕು ಎಮ್ ಸಿ ಹಳ್ಳಿಯ ವಾಸಿಯಾಗಿದ್ದು ಕೆ.ಎ ೦5 ಸಿ 7359  ನೇ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 01.05.2015 ರಂದು  ತನ್ನ ಲಾರಿಯಲ್ಲಿ ಗುರುಪುರದಿಂಧ  ಮರಳು ತೆಗೆದುಕೊಂಡು ಹೋಗುವರೇ ಕಾರ್ಕಳ ಮೂಡಬಿದ್ರೆ ಮಾರ್ಗವಾಗಿ ಹೋಗುತ್ತಿರುವಾಗ ಮಾಳಾ ಗ್ರಾಮದ ನೆಲ್ಲಿಕಟ್ಟೆ ಎನ್ ಹೆಚ್ 13 ರಸ್ತೆಯಲ್ಲಿ ಲಾರಿ ಕೆಟ್ಟು ನಿಂತಿದ್ದು, ದಿನಾಂಕ 02.05.2015 ರಂದು ರಾತ್ರಿಸುಮಾರು 10.30 ಗಂಟೆ ಸಮಯಕ್ಕೆ ಲಾರಿಯ ಹಿಂಬದಿನಿಂದ ಯಾವುದೋ ವಾಹನ ಲಾರಿಗೆ ಡಿಕ್ಕಿ ಹೊಡೆದಿದ್ದು ಫಿರ್ಯಾದುದಾರರು ಇಳಿದು ನೋಡಲಾಗಿ ಡಿಕ್ಕಿ ಹೊಡೆದ ವಾಹನ ಕೆ ಎ 20 ಪಿ 1183 ನೇ ನಂಬರ್ ನ ಜೀಪ್ ಆಗಿರುತ್ತದೆ. ಡಿಕ್ಕಿ`ಹೊಡೆದ ಪರಿಣಾಮ ಜೀಪಿನ ಮುಂಬಾಗ ಸಂಪೂರ್ಣ ಜಖಂ ಗೊಂಡು ಅದರ ಚಾಲಕ ವಿಬಿನ್ ಟಾಮಿ ಎಂಬುವವರಿಗೆ ತಲೆ ಗಲ್ಲ ಬಲ ಕೈಗೆ ರಕ್ತ ಗಾಯವಾಗಿರುತ್ತದೆ. ಈ  ಅಫಘಾತಕ್ಕೆ ಕೆ.ಎ 20 ಪಿ 1183 ನೇ  ನಂಬ್ರದ ಜೀಪ್  ಚಾಲಕ ವಿಬಿನ್ ಟಾಮಿ ಇವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆ ಕಾರಣವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 64/2015 ಕಲಂ 279,337  ಐ ಪಿ ಸಿರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾರ್ಕಳ ಗ್ರಾಮಾಂತರ:ಪಿರ್ಯಾದಿ ರಾಜೇಂದ್ರ (33) ತಂದೆ: ಮನೋಹರ, ವಾಸ: ನಂದಳಿಕೆ, ಬೆಳ್ಮಣ್ ಗ್ರಾಮ,ಕಾರ್ಕಳ . ಇವರು ದಿನಾಂಕ: 02.05.2015 ರಂದು ಸಂಜೆ 5:30 ಗಂಟೆ ಸುಮಾರಿಗೆ ತನ್ನ ಮೋಟಾರ್ ಸೈಕಲ್ಲಿನಲ್ಲಿ ಕೆಲಸದ ನಿಮಿತ್ತ ನಿಟ್ಟೆ ಕಡೆಯಿಂದ ದೂಪದಕಟ್ಟೆ ಕಡೆಗೆ ಹೋಗುತ್ತಿರುವಾಗ ಎದುರಿನಿಂದ ಹೋಗುತ್ತಿದ್ದ ಎಮ್ ಹೆಚ್ 02 ಬಿ.ಜಿ 315 ನೇ ಮಾರುತಿ ಆಲ್ಟೋ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದು ನಂದಳಿಕೆ ಬೋರ್ಡ್ ಶಾಲೆ ಹತ್ತಿರ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕಾರುಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡ ಬದಿಯ ಮೋರಿಗೆ ಡಿಕ್ಕಿಹೊಡೆದು ಪಲ್ಟಿ ಯಾಗಿ ಬಿದ್ದಿದ್ದು, ಪಿರ್ಯಾದಿದಾರರು ತನ್ನ ಮೋಟಾರ್ ಸೈಕಲ್‌ನ್ನು ನಿಲ್ಲಿಸಿ ಹತ್ತಿರ ಹೋಗಿ ನೋಡಲಾಗಿ ಕಾರಿನಲ್ಲಿ ಪಿರ್ಯಾಧಿದಾರರಿಗೆ ಪರಿಚಯಸ್ಥರಾದ ಭರತ್ ಹಾಗೂ ಸುದೀರ್ ಶೆಟ್ಟಿ ಎಂಬುವರಿದ್ದು ಸುದೀರ್ ಶೆಟ್ಟಿ ಇವರು ಕಾರನ್ನುಚಲಾಯಿಸುತ್ತಿದ್ದು, ಭರತ್ ಎಂಬುರಿಗೆ ಬಲಕಾಲಿನ ಮಣಿಗಂಟಿಗೆ ಮತ್ತು ಗಲ್ಲಕ್ಕೆ ಹಣೆಗೆ ರಕ್ತ ಗಾಯವಾಗಿರುತ್ತದೆ. ಮತ್ತು ಕಾರು ಚಾಲಕ ಸುದೀರ್ ಶೆಟ್ಟಿ ಇವರಿಗೆ ಹೊಟ್ಟೆ ಮತ್ತು ಎದೆಗೆ ಗುದ್ದಿದ ಗಾಯವಾಗಿರುತ್ತದೆ. ಈ ಅಫಘಾತಕ್ಕೆ ಎಮ್.ಹೆಚ್ 02 ಬಿಜಿ315 ನೇ ಕಾರು  ಚಾಲಕ ಸುದೀರ್ ಶೆಟ್ಟಿ ಇವರ  ಅತೀ ವೇಗ ಹಾಗೂ ನಿರ್ಲಕ್ಷತನದ ಚಾಲನೆ ಕಾರಣವಾಗಿರುವುದಾಗಿ ರಾಜೇಂದ್ರರವರು ದೂರು ನೀಡಿದ್ದು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 65/2015 ಕಲಂ 279,337  ಐ ಪಿ ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬ್ರಹ್ಮಾವರ: ದಿನಾಂಕ: 03/05/2015 ರಂದು ಸಮಯ ಬೆಳಿಗ್ಗೆ 05:00 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು , ಉಪ್ಪೂರು ಗ್ರಾಮದ, ಲಕ್ಷ್ಮೀ ಬಾರ್‌ನ ಸ್ವಲ್ಪ ಮುಂದೆ ರಾಹೆ. 66 ರಲ್ಲಿ  ಆರೋಪಿ ಆಶಿಶ್ ಶೆಟ್ಟಿಯು ತನ್ನ ಬಾಬ್ತು ಕೆಎ-20-ಇಸಿ-543 ನೇ ಮೊಟಾರ್ ಸೈಕಲ್‌ನಲ್ಲಿ ಸಹಸವಾರ ಸೂರಜ್‌ ರವರನ್ನು ಕುಳ್ಳಿರಿಸಿಕೊಂಡು ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ತಿರುವಿನಲ್ಲಿ ಸ್ಕೀಡ್ ಆಗಿ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಆರೋಪಿ ಮೋಟಾರ್ ಸೈಕಲ್ ಸವಾರ ಆಶಿಶ್ ಶೆಟ್ಟಿ ರವರಿಗೆ ಎಡ ಕೈ ಭುಜದ ಮೂಳೆ ಮುರಿತವಾಗಿದ್ದು, ಎಡ ಬದಿಯ ತಲೆಗೂ ಪೆಟ್ಟಾಗಿದ್ದು ಸಹ ಸವಾರ ಸೂರಜ್‌ ರವರಿಗೆ ತಲೆಎಡಕೈ ಮೂಳೆ ಮತ್ತು ಎಡಕಾಲಿಗೆ ತೀವ್ರ ಜಖಂ ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 69/15 ಕಲಂ: 279,337, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:  

  • ಉಡುಪಿ ನಗರ: ಪಿರ್ಯಾದಿ ವಿಠಲ ಪೂಜಾರಿ(48), ತಂದೆ ಪಾಂಚ ಫೂಜಾರಿ ವಾಸ: ದೇವಿ ನಿಲಯ, ಕಕ್ಕುಂಜೆ, ಶಿವಳ್ಳಿ ಉಡುಪಿ ಇವರ ಹೆಂಡತಿ ನಳಿನಿ(40) ದಿನಾಂಕ 03/05/2015 ರಂದು ಬೆಳಗ್ಗೆ 08:00 ಗಂಟೆಗೆ ಕೆಲಸಕ್ಕೆಂದು ಪಕ್ಕದ ಮನೆಯ ಲಿಯೋಕರ್ನೆಲಿಯೋರವರ ತೋಟಕ್ಕೆ ಕೃಷಿ ಕೆಲಸ ಮಾಡುವರೇ ಹೋಗಿದ್ದು ತೋಟದಲ್ಲಿ ಹುಲ್ಲು ತೆಗೆಯುತ್ತಿರುವಾಗ ಸಂಜೆ ಸುಮಾರು 6:30 ಗಂಟೆಗೆ ಯಾವುದೋ ವಿಷಜಂತು ಹಾವು ಬಲಕಾಲಿನ ಮೊಣಗಂಟಿಗೆ ಕಚ್ಚಿದ್ದು ಚಿಕಿತ್ಸೆಯ ಬಗ್ಗೆ ಹೈಟೆಕ್ ಆಸ್ಪತ್ರೆಗೆ ಕರೆತಂದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದು ಸರಕಾರಿ ಆಸ್ಪತ್ರೆಗೆ ಬಂದಲ್ಲಿ ಸ್ವಲ್ಪ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಗೆ ಹೋಗುಲು ತಿಳಿಸಿದಂತೆ ಕೆಎಮ್‌ಸಿ ಆಸ್ಪತ್ರೆಗೆ ಹೋದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದು, ದಿನಾಂಕ 03/05/2015 ರಂದು ರಾತ್ರಿ ಸಮಯ ಸುಮಾರು 8:50 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸಿದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಯು.ಡಿ.ಆರ್‌ ನಂ. 18/2015  ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಳವು ಪ್ರಕರಣ:

  • ಉಡುಪಿ ನಗರ: ಪಿರ್ಯಾದಿ ಪದ್ಮಾನಂದ (40) ತಂದೆ ಸದಾಶಿವ ಶೆಟ್ಟಿ ವಾಸ: ಕಾಮಾಕ್ಷಿ ನಿಲಯ ಗೋಪಾಲಪುರ 4ನೇ ಅಡ್ಡ ರಸ್ತೆ  ಪುತ್ತೂರು ಗ್ರಾಮ ಸಂತೆಕಟ್ಟೆ ಉಡುಪಿ ಇವರು ದಿನಾಂಕ: 02/05/2015 ರಂದು ರಾತ್ರಿ 20:45 ಗಂಟೆಗೆ ನಿಸಾರ್‌ ನೊಂದಿಗೆ ಊಟಕ್ಕೆ ಸರ್ವಿಸ್‌ ಬಸ್ಸ್‌‌ ನಿಲ್ದಾಣದ ಹತ್ತಿರ ಇರುವ ದೇವತಾ ಹೋಟೇಲ್‌ಗೆ ಹೋಗಲು ಸಿಟಿ ಬಸ್ಸ್‌  ನಿಲ್ದಾಣದ ಹತ್ತಿರ ಇರುವ ರಾಧ ಮೆಡಿಕಲ್ಸ್‌‌ ಎದುರು ಕೆಎ19 ಇಜೆ 0250 Suzuki Access 125 ಮೋಟಾರ ಸೈಕಲ್‌ನ್ನು  ನಿಲ್ಲಿಸಿ ಹೋಗಿದ್ದು ಊಟ ಮುಗಿಸಿ  21:30ಗಂಟೆಗೆ ಬಂದು ನೋಡಿದಾಗ ನಿಲ್ಲಿಸಿದ ಜಾಗದಿಂದ ಮೋಟಾರ್ ಸೈಕಲ್‌ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಅಂದಾಜು ಮೌಲ್ಯ 35,000/- ಆಗಬಹುದು, ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 102/2015  ಕಲಂ:379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

No comments: