Monday, May 04, 2015

Daily Crime Reports As on 04/05/2015 at 07:00 Hrs



ಅಪಘಾತ ಪ್ರಕರಣ

  • ಪಡುಬಿದ್ರಿ :ದಿನಾಂಕ 02.05.2015 ರಂದು ಹಗಲು 09.30 ಗಂಟೆಗೆ ಉಡುಪಿ ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಪೇಟೆಯ ರಸ್ತೆಯ ಪಶ್ಚಿಮ ಬದಿಯಲ್ಲಿರುವ ಕುಸುಮಾಧರ ಕಟ್ಟಡದ ಕೆಳಭಾಗ ಕೋಣೆಯ ಒಳಗೆ ಕಟ್ಟಡ ಕಾಮಗಾರಿಕೆ ನಡೆಯುತ್ತಿರುವ ಜಾಗಕ್ಕೆ  ಆರೋಪಿತ ಜಗದೀಶ್ ಆಚಾರ್ಯ ಟೆಂಪೋ ನಂಬ್ರ ಕೆಎ 13 ಎಂ 2280 ರ ಚಾಲಕ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ನಿಲ್ಲಿಸಿ ಚಾಲಕನ ಸೀಟಿನಿಂದ ಕೆಳಗೆ ಇಳಿದು ಬಂದಿದ್ದು, ಆರೋಪಿಯು ವಾಹನ ನಿಲ್ಲಿಸಲು ಯಾವುದೇ ಮುಂಜಾಗ್ರತೆ ವಹಿಸದೇ ಇದ್ದುದರಿಂದ, ಅಲ್ಲದೇ ನಿರ್ಲಕ್ಷತನ ಮಾಡಿರುವುದರಿಂದ ವಾಹನವು ತನ್ನಷ್ಟಕ್ಕೆ ಮುಂದಕ್ಕೆ ಬರುವುದನ್ನು ನೋಡಿ ಆರೋಪಿಯು ಅದನ್ನು ನಿಲ್ಲಿಸಲು ಹೋದಾಗ ವಾಹನ ಹಾಗೂ ಗೋಡೆಯ ಮಧ್ಯೆ ಸಿಲುಕಿ ಗಂಭೀರ ಒಳಜಖಂಗೊಂಡಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ವತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/2015 ಕಲಂ:279,  338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ:

  • ಕುಂದಾಪುರ: ಪಿರ್ಯಾದಿ ರಾಘು ಪುಜಾರಿ (36) ತಂದೆ: ದಿ:ಕೋಟಿ ಪೂಜಾರಿ ವಾಸ: ಯಾಲಾಡಿ ಬೆಟ್ಟು, ಕೊಮೆ ರಸ್ತೆ, ತೆಕ್ಕಟ್ಟೆ ಗ್ರಾಮ, ಕುಂದಾಪುರ ತಾಲೂಕು ಇವರ ಅಣ್ಣ ಮಂಜುನಾಥ ಪೂಜಾರಿ(39) ಎಂಬುವರು ದಿನಾಂಕ 02.05.2015 ರಂದು ಹೆಮ್ಮಾಡಿಯ ಗಣೇಶ ಆಚಾರಿ ಎಂಬುವರ ಜೊತೆ ಗಾರೆ ಕೆಲಸಕ್ಕೆ ಹೋಗಿದ್ದು ಪಿರ್ಯಾದಿದಾರರು ಅವರ ಹೆಂಡತಿ ಮನೆಯಾದ ಮೂಡ್ಲಕಟ್ಟೆಯಲ್ಲಿ ಇರುವಾಗ ಸಂಜೆ 06.15 ಗಂಟೆ ಸುಮಾರಿಗೆ ಹೆಮ್ಮಾಡಿ ದಿವಾಕರ ಎಂಬುವರು ಪಿರ್ಯಾದಿದಾರರ ಹೆಂಡತಿಯ ಮಾವನ ಮೊಬೈಲೆ ನಂಬರಿಗೆ ಕರೆ ಮಾಡಿ ಅಣ್ಣ ಮಂಜುನಾಥ ಪುಜಾರಿಯು ಕುಂದಾಪುರದ  ಗಾಂದಿ ಪಾರ್ಕ್ ಎದುರು ಶ್ರೀ ದೇವಿ ಆಸ್ಪತ್ರೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಬಿದ್ದು ಮೃತ ಪಟ್ಟಿರುವ ವಿಷಯವನ್ನು ತಿಳಿಸಿದ್ದು ಪಿರ್ಯಾದಿದಾರರು ಸಂಜೆ 06.45 ಗಂಟೆಗೆ ಬಂದು ನೋಡಲಾಗಿ ಪಿರ್ಯಾದಿದಾರರ ಅಣ್ಣ ಮಂಜುನಾಥ ಪುಜಾರಿ ಗಾಂದಿ ಪಾಕ್ ಬಳಿ ರಸ್ತೆ ಪಕ್ಕದಲ್ಲಿ ಬಿದ್ದು ಕೊಂಡಿದ್ದು ಮೊಣಗಂಟಿನ ಬಳಿ  ರಕ್ತ ಗಾಯವಿದ್ದು ಹಾಗು ಬೆನ್ನಿನ ಎಡಭಾಗ ಹಾಗೂ ತಲೆಯ ಎಡಭಾಗ ತರಚಿದ ಗಾಯವಿದ್ದು ಮೃತ ಪಟ್ಟಿರುವ ವಿಚಾರ ತಿಳಿದು ಬಂದಿರುತ್ತದೆ. ಪಿರ್ಯಾದಿದಾರರ ಅಣ್ಣ ಈ ದಿನ ರಜೆ ಮಾಡಿ ವಿಪರೀತ ಮದ್ಯಪಾನ ಸೇವಿಸಿ ರಸ್ತೆಯ ಬದಿಯಲ್ಲಿ ಕಲ್ಲಿನ ಮೇಲೆ ಬಿದ್ದಂತೆ ಕಂಡು ಬಂದಿರುತ್ತದೆ ಅಲ್ಲದೇ ಅಣ್ಣನ ಬಲಕೈ ಬಳಿ ಇರುವ ಗಾಯದ ಬಗ್ಗೆ ಸಂಶಯ ಇರುವುದಾಗಿ ರಾಘು ಪೂಜಾರಿ ರವರು ಕುಂದಾಪುರ ಠಾಣೆಗೆ ದೂರು ನೀಡಿದ್ದು ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 17/2015 ಕಲಂ: 174 ಸಿ ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ:

  • ಕಾಪು: ದಿನಾಂಕ 02-03-2015 ರಂದು ಪಿರ್ಯಾದಿ ಅಭಿಜಿತ್‌ (21) ತಂದೆ: ಕೃಷ್ಣಪ್ಪ ವಾಸ: ನಿತ್ಯಾನಂದ ರಾಮ ಬಜನಾ ಮಂದಿರದ ಬಳಿ ಮಟ್ಟು ಇವರು ರಾತ್ರಿ ಸುಮಾರು 10:50 ಗಂಟೆಯ ಸಮಯಕ್ಕೆ ಕೋಟೆ ಗ್ರಾಮದ ಕೋಟೆ ಪಂಚಾಯತ್‌ ಎದುರುಗಡೆ ನಡೆದುಕೊಂಡು ಹೋಗುತ್ತಿರುವಾಗ , ಪಿರ್ಯಾದುದಾರರ  ಪರಿಚಯದ ಅಭಿ ಎಂಬವನು ಪಿರ್ಯಾದುದಾರರನ್ನು ತಡೆದು ಆರೋಪಿಯ ಕೈಯಲ್ಲಿದ್ದ ಕೋಳಿ ಬಾಳನ್ನು ಹಿಡಿದು ಇವರ ಮುಖಕ್ಕೆ ತಿವಿದ ಪರಿಣಾಮ ಎಡ ಕಣ್ಣಿನ ಕೆಳಗಡೆ ಮುಖದಲ್ಲಿ ರಕ್ತಗಾಯವಾಗಿದ್ದು , ಪಿರ್ಯಾದುದಾರರು ಬೊಬ್ಬೆ ಹಾಕಿದ ಪರಿಣಾಮ ಇವರ ಸ್ನೇಹಿತರಾದ ಅಭಿಶೇಕ್‌ ಮತ್ತು ಕೇಶವರವರು ಕೂಡಲೇ ಸ್ಥಳಕ್ಕೆ ಬಂದಾಗ ಆರೋಪಿಯು ಓಡಿ ಹೋಗಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2015 ಕಲಂ 341, 324 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: