Sunday, May 03, 2015

Daily Crime Reports As on 03/05/2015 at 19:30 Hrs

ಅಪರಿಚಿತ ವ್ಯಕ್ತಿಯ ಮರಣ ಪ್ರಕರಣ

  • ಉಡುಪಿ: ದಿನಾಂಕ 03/05/2015 ರಂದು ಮದ್ಯಾಹ್ನ ಸುಮಾರು 12:30 ಗಂಟೆಗೆ ಪಿರ್ಯಾದಿದಾರರಾದ ನಿತ್ಯಾನಂದ ಒಳಕಾಡು (54), ತಂದೆ: ದಿ. ರಾಮ ವಾಸ: ಸರಳಾಯ ಕಂಪೌಂಡ್ ಒಳಕಾಡು ಉಡುಪಿ ರವರಿಗೆ ಸಾರ್ವಜನಿಕರೊಬ್ಬರು ಫೋನ್ ಮಾಡಿ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಓರ್ವ ವ್ಯಕ್ತಿ ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಸದ್ರಿ ಸ್ಥಳಕ್ಕೆ ಹೋಗಿ ನೋಡುವಾಗ ಸುಮಾರು 40 ರಿಂದ 45 ವರ್ಷ ಪ್ರಾಯದ ಗಂಡಸು ಮಲಗಿದ್ದಲ್ಲಿಯೇ ಮೃತಪಟ್ಟಿರುವುದು ಕಂಡು ಬಂತು ಸದ್ರಿ ವ್ಯಕ್ತಿಯು ಬಿಳಿ ಬಣ್ಣದ ಅಂಗಿ ಹಾಗೂ ಚೌಕುಳಿ ಲುಂಗಿ ಧರಿಸಿದ್ದು ಸದ್ರಿ ಮೃತ ವ್ಯಕ್ತಿಯು ಯಾವುದೋ ಕಾಯಿಲೆಯಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದಾಗಿದೆ ಎಂಬುದಾಗಿ ನಿತ್ಯಾನಂದ ಒಳಕಾಡು ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 17/2015 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 

No comments: