Sunday, May 03, 2015

Daily Crime Reports As on 03/05/2015 at 17:00 Hrs

ಕಳವು ಪ್ರಕರಣ
ಅಮಾಸೆಬೈಲುದಿನಾಂಕ 28/04/2015 ರಂದು ರಾತ್ರಿ 08:30 ಗಂಟೆಗೆ ಪಿರ್ಯಾದಿದಾರರಾದ ಬಸವರಾಜ್ ಎಂ ಗುರೇಮಟ್ಟಿ (54) ತಂದೆ: ಮಹಾದೇವಪ್ಪ ವಾಸ: ಟಿ 3/8-1 ಕೆಪಿಸಿ  ಕಾಲೊನಿ ಹೊಸಂಗಡಿ ಕುಂದಾಪುರ ತಾಲೂಕು ರವರು ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದು ಕೆಲಸ ಮುಗಿಸಿ ದಿನಾಂಕ 03/05/2015 ರಂದು ಬೆಳಿಗ್ಗ 06.30 ಗಂಟೆಗೆ ಬೆಂಗಳೂರಿನಿಂದ ವಸತಿ ಗೃಹಕ್ಕೆ ಬಂದು ಬಾಗಿಲು ತೆಗೆದು ಒಳ ಪ್ರವೇಶ ಮಾಡಿ ಬೆಡ್ ರೂಮ್ ನೋಡಿದಾಗ ಅಲ್ಲಿ ಇದ್ದ ಗ್ರೋದೆಜ್ ಮತ್ತು ಸೂಟ್ ಕೇಸ್ ನ ಬಾಗಿಲು ತೆಗೆದು ಬಟ್ಟೆಗಳನ್ನು ಚಲ್ಲಾಪಿಲ್ಲಿಯಾಗಿ ಬೀಸಾಡಿ ಗ್ರೋದೆಜ್ ನಲ್ಲಿದ್ದ 10 ಗ್ರಾಂ ಚಿನ್ನದ ಉಂಗುರವನ್ನು ಯಾರೋ ಕಳ್ಳರು ಮಾಡಿನ ಹಂಚನ್ನು ಕಿತ್ತು ಒಳ ಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿದ್ದು,ಕಳವಾದ ಚಿನ್ನದ ಮೌಲ್ಯ ರೂಪಾಯಿ 20.000/- ಆಗಿರುತ್ತದೆ ಎಂಬುದಾಗಿ ಬಸವರಾಜ್ ಎಂ ಗುರೇಮಟ್ಟಿ ರವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 18/2015 ಕಲಂ 457380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ
ಶಿರ್ವಾ:ಪಿರ್ಯಾದಿದಾರರಾದ ಅಣ್ಣು ಮುಗೇರ ತಂದೆ ಗುಳ್ಳ ಮುಗೇರ ವಾಸ ನಿಂಜೂರು ಹಂಪನಕಟ್ಟೆ ನಿಂಜೂರು ಗ್ರಾಮಕಾರ್ಕಳ ತಾಲೂಕು ಎಂಬವರ ಅಕ್ಕನ ಗಂಡ  ದೇವುದಾಸ ಮುಗೇರ ಪ್ರಾಯ (53) ತಂದೆ ಶಿವ ಮುಗೇರ ಎಂಬವರು ದಿನಾಂಕ 24/04/2015 ರಂದು ಶಿರ್ವ ಗ್ರಾಮದ ಮಟ್ಟಾರು ಗುಂಡ್ರಾಯಿ ಎಂಬಲ್ಲಿ ಪುಷ್ಪ ಪೂಜಾರ್ತಿ ಎಂಬವರ ನಿರ್ಮಾಣ ಹಂತದ ಮನೆಯಲ್ಲಿ ರಾಡರ್‌ ಮೇಲೆ ನಿಂತು ಗಾರೆ ಕೆಲಸ ಮಾಡುತ್ತಿದ್ದ ಸಮಯ ಮೈ ಮಾಲಿದಾಗ ಒಮ್ಮೇಲೆ ರಾಡರ್‌ ಮೇಲೆ ಅಲ್ಲಿಯೇ ಕುಳಿತಾಗ ಆಕಸ್ಮಿಕವಾಗಿ ಕಬ್ಬಿಣದ ಪೈಪು ವೃಷಣಕ್ಕೆ ತಾಗಿದ್ದು, ನಂತರ  ಸದ್ರಿಯವರು  ಅದೇ ದಿನ  ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದು ದಿನಾಂಕ 02/05/2015 ರಂದು ಮನೆಯಲ್ಲಿರುವಾಗ ತೀವೃ ಆಸ್ವಸ್ಥರಾದವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದೇವುದಾಸ ಮುಗೇರ ಮೃತಪಟ್ಟಿರುವುದಾಗಿದೆ ಎಂಬುದಾಗಿ ಅಣ್ಣು  ಮುಗೇರ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 08/2015 ಕಲಂ 174 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 

No comments: