Sunday, May 03, 2015

Daily Crime Reports As on 03/05/2015 at 07:00 Hrs

ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 02/05/2015 ರಂದು ಸಮಯ ಸುಮಾರು ಸಂಜೆ 5:15 ಗಂಟೆಗೆ ಕುಂದಾಪುರ ತಾಲೂಕು  ಆನೆಗಳ್ಳಿ  ಗ್ರಾಮದ  ಹೇರಿಕುದ್ರು  ಸೇತುವೆಯ  ರಾ.ಹೆ 66  ರಸ್ತೆಯಲ್ಲಿ, ಆಪಾದಿತ  KA05-AC-3706 ನೇ  ಟ್ಯಾಂಕರ್  ಚಾಲಕ, ತನ್ನ  ಟ್ಯಾಂಕರ್ ನ್ನು ಹೆಮ್ಮಾಡಿ ಕಡೆಯಿಂದ ಕುಂದಾಪುರ ಕಡೆಗೆ  ಅತೀವೇಗ  ಹಾಗೂ  ಅಜಾಗರುಕತೆಯಿಂದ ಚಾಲನೆ ಮಾಡಿಕೊಡು ರಸ್ತೆಯ ಬಲಬದಿಗೆ ಚಲಾಯಿಸಿ  ಕುಂದಾಪುರ ಕಡೆಯಿಂದ  ಹೆಮ್ಮಾಡಿ ಕಡೆಗೆ ಕರಿಯಪ್ಪ ಎಂಬವರು ಅಭಿಶೇಕ್  ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು  ಹೋಗುತ್ತಿದ್ದ   KA20-ED-7781  ಬೈಕಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ  ಪರಿಣಾಮ ಬೈಕಿನ  ಸವಾರ ಹಾಗೂ  ಬೈಕಿನ  ಹಿಂದೆ ಕುಳಿತ  ಸಹ ಸವಾರ  ಬೈಕ್  ಸಮೇತ  ರಸ್ತೆಯಲ್ಲಿ ಬಿದ್ದು ಸವಾರ ಕರಿಯಪ್ಪ ಯವರ  ತಲೆಗೆ  ತೀವ್ರ  ತರಹದ ರಕ್ತಗಾಯವಾಗಿ ಸ್ಥಳದಲ್ಲಿಯೇ  ಮೃತಪಟ್ಟಿದ್ದು, ಸಹ ಸವಾರ  ಅಭಿಶೇಕ್ರವರು ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 48/15  ಕಲಂ279, 337, 304(A)  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬ್ರಹ್ಮಾವರ: ದಿನಾಂಕ 02/05/2015 ರಂದು ಉಡುಪಿ ತಾಲೂಕು ಹೇರೂರು ಗ್ರಾಮದ ಹೇರೂರು ಎಂಬಲ್ಲಿ 21:30 ಗಂಟೆಗೆ ಶಂಕರ ಶೆಟ್ಟಿ ಕರ್ಜೆ ಎಂಬುವರು ರಸ್ತೆಯ ಪೂರ್ವ  ಬದಿಯಲ್ಲಿ ರಸ್ತೆ ದಾಟಲು ನಿಂತಿದ್ದ ಸಮಯ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಕೆಎ-19ಎಮ್ -4471 ಚಾಲಕ ಅತೀ ವೇಗ ಹಾಗೂ ಅಜಾಗೂರೂಕತೆಯಿಂದ ಚಲಾಯಿಸಿ ಢಿಕ್ಕಿ ಹೊಡೆದ ಪರಿಣಾಮ ಶಂಕರ ಶೆಟ್ಟಿ ರಸ್ತೆ ಬಲಬದಿಗೆ ಬಿದ್ದಾಗ ಅದೇ ವೇಳೆಗೆ ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಲಾರಿ ಕೆಎ-29-ಬಿ-9854 ಚಾಲಕ ಲಾರಿಯನ್ನು ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿದ ಪರಿಣಾಮ ಶಂಕರ ಶೆಟ್ಟಿಯವರು ಲಾರಿಯ ಅಡಿಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾಗಿರುತ್ತದೆ. ಅಪಘಾತಕ್ಕೆ ಕಾರಣ ಕೆಎ-19-ಎಮ್ಎ-4471 ಚಾಲಕ ಮೆಹಬೂಬ ಇಮಾಮ್ ಆಲಿ ಹಾಗೂ ಕೆಎ-29-ಬಿ-9854 ಚಾಲಕರ ಅತೀ ವೇಗ ಹಾಗೂ ಅಜಾಗೂರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/15 ಕಲಂ: 279,304() .ಪಿ.ಸಿ 134 ()(ಬಿ) .ಎಮ್.ವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಟ್ಕಾ ಜುಗಾರಿ ಪ್ರಕರಣ
  • ಕೋಟ: ಕಮಲಾಕರ್ ಆರ್ ನಾಯ್ಕ್ ಪಿ.ಎಸ್.ಐ ಕೋಟ ಠಾಣೆ ಇವರು ದಿನಾಂಕ 02-05-2015 ರಂದು 18:00 ಗಂಟೆಗೆ  ಠಾಣೆಯಲ್ಲಿರುವಾಗ ಕುಂದಾಪುರ ತಾಲೂಕು ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಬಿದ್ಕಲ್‌ಕಟ್ಟೆ ಎಂಬಲ್ಲಿನ  ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ದೊರೆತ ಖಚಿತ ವರ್ತಮಾನದಂತೆ ದಾಳಿ ನಡೆಸುವರೇ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಮಟ್ಕಾ ಜುಗಾರಿ  ಆಟ ನಡೆಸುತ್ತಿದುದ್ದನ್ನು ಖಚಿತ ಪಡಿಸಿ ಕೊಂಡು 19:00 ಗಂಟೆಗೆ ದಾಳಿ ನೆಡೆಸಿ ಮಟ್ಕಾ ಜುಗಾರಿ ಆಟ ನೆಡೆಸುತ್ತಿದ್ದ  ಆರೋಪಿ ರಮೇಶ್ ಎಂಬವರನ್ನು  ದಸ್ತಗಿರಿ ಮಾಡಿ ಆರೋಪಿಯಿಂದ   ಮಟ್ಕಾ ಜುಗಾರಿ ಆಟಕ್ಕೆ ಬಳಸುತ್ತಿದ್ದ ಮಟ್ಕಾ ಚೀಟಿ -1,ಬಾಲ್ ಪೆನ್ನು -1 ನಗದು ರೂ-680/-ನ್ನು  ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಒಂದನೇ ಆರೋಪಿಯು ಮಟ್ಕಾ ಜುಗಾರಿಯಿಂದ ಸಂಗ್ರಹಿಸಿದ ಹಣವನ್ನು ಮಟ್ಕಾ ಬಿಡ್ಡರ್ ಪಡುಮುಂಡುವಿನ  ದಿನೇಶ್ ಶೆಟ್ಟಿ ಎಂಬುವರಿಗೆ ನೀಡುತ್ತಿರುವುದಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಅಪರಾಧ ಕ್ರಮಾಂಕ 87/2015 ಕಲಂ 78(1) (3)   ಕೆ.ಪಿ ಆಕ್ಟ್  ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
  • ಬೈಂದೂರು: ಸುರೇಶ ಬಟ್ವಾಡಿ ಇವರು ಪಡುವರಿ ಪಂಚಾಯಿತಿಯ ಅಧ್ಯಕ್ಷರಾಗಿದ್ದು ದಿನಾಂಕ 02-05-2015 ರಂದು ಸಂಜೆ ಸಮಯ ಸುಮಾರು 4.30 ಗಂಟೆಗೆ ಸಾರ್ವಜನಿಕರೊಬ್ಬರು ಅವರಿಗೆ ಕರೆಮಾಡಿ ನಾಗರಾಜ ಶೇರುಗಾರ ಎಂಬುವವರ ಜಾಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಬಿದ್ದಿರುವ ಬಗ್ಗೆ ಮಾಹಿತಿ ತಿಳಿದು ಫಿರ್ಯಾದಿದಾರರು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಸುಮಾರು 45 ರಿಂದ 50 ವರ್ಷ ವಯಸ್ಸಿನ ಗಂಡಸಿನ ಮೃತ ದೇಹವು ಕೊಳೆತ ಸ್ಥಿತಿಯಲ್ಲಿದ್ದು ಯಾವುದೋ ಖಾಯಿಲೆಯಿಂದ ಅಥವಾ ಇತರೆ ಕಾರಣಗಳಿಂದ ಮೃತ ಪಟ್ಟಿರುವುದಾಗಿದೆ ಎಂದು ತಿಳಿಸಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಯುಡಿಆರ್ ನಂಬ್ರ 13/15 ಕಲಂ 174 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: