Saturday, May 02, 2015

Daily Crime Reports As on 02/05/2015 at 17:00 Hrs

ಅಪಘಾತ ಪ್ರಕರಣ
  • ಕೋಟ: ದಿನಾಂಕ:02/05/2015 ರಂದು ಬೆಳಗ್ಗಿನ ಜಾವ 3:30 ಗಂಟೆಗೆ ಕೆ.:01 ಸಿ:2425 ನೇ ನಂಬ್ರದ ಟ್ಯಾಂಕರ್ ಲಾರಿ ಚಾಲಕನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಉಡುಪಿ ತಾಲೂಕು ಚಿತ್ರಪಾಡಿ ಗ್ರಾಮದ ಕಾರ್ತಟ್ಟು ಎಂಬಲ್ಲಿರುವ ಪಿರ್ಯಾದಿ ವೈ.ಎಸ್.ರಾಮಚಂದ್ರ ಹೊಳ್ಳ ಇವ ಬಾಬ್ತು 1-179ನೇ ಕಾಂಪ್ಲೆಕ್ಸ್ಗೆ ಢಿಕ್ಕಿ ಹೊಡೆದ ಪರಿಣಾಮ ಕಟ್ಟಡದಲ್ಲಿನ ರೋಲಿಂಗ್ ಶೆಟ್ಟರಿಗೆ ಹಾಗೂ ಬಿಲ್ಡಿಂಗ್ಗೆ ಹಾನಿಯಾಗಿ ಸುಮಾರು 2 ½ ಲಕ್ಷ  ರೂಪಾಯಿ ನಷ್ಟ ಉಂಟಾಗಿರುವುದಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಅಪರಾಧ ಕ್ರಮಾಂಕ 87/2015 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಉಡುಪಿ: ದಿನಾಂಕ 02/05/2015  ರಂದು ಪಿರ್ಯಾದಿದಾರರಾದ ರಾಜಾರಾಮ್ ಭಟ್ ರವರ ಅಣ್ಣನಾದ ರಾಮದಾಸ್ ರವರು ತನ್ನ ಬಾಬ್ತು ಕೆಎ 20 .ಹೆಚ್. 4398 ನೇ ಸ್ಕೂಟರಿನಲ್ಲಿ ಲಕ್ಷ್ಮೀ ನಾರಾಯಣ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಉದ್ಯಾವರಕ್ಕೆ ಅಡುಗೆ ಕೆಲಸದ ನಿಮಿತ್ತ  ತನ್ನ ಮನೆಯಾದ ಬುಡ್ನಾರುವಿನಿಂದ ಹೊರಟಿದ್ದು, ಪಿರ್ಯಾದಿದಾರರು ತನ್ನ ಬಾಬ್ತು ಮೋಟಾರು ಸೈಕಲಿನಲ್ಲಿ ಭಾಸ್ಕರರವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ತನ್ನ ಅಣ್ಣ ರವರನ್ನು ಹಿಂಬಾಲಿಸಿಕೊಂಡು ಹೊರಟಿದ್ದು, ಉಡುಪಿ ಶಾರದಾ ಕಲ್ಯಾಣ ಮಂಟಪ ಮಾರ್ಗವಾಗಿ ಬೀಡಿನಗುಡ್ಡೆ ತಲುಪುವಾಗ ಕೆಎ 20 ಸಿ 115 ನೇ ನಂಬ್ರದ ಟಿಪ್ಪರ್ ಚಾಲಕ ದ್ಯಾಮಣ್ಣ ಎಂಬಾತನು ಟಿಪ್ಪರನ್ನು ಅತೀವೇಗವಾಗಿ ಚಲಾಯಿಸಿಕೊಂಡು ಬೀಡಿನಗುಡ್ಡೆ ರಂಗ ಮಂಟಪದ ತಿರುವಿನ ಬಳಿ ಟಿಪ್ಪರನ್ನು ಅಜಾಗರೂಕತೆಯಿಂದ ಒಮ್ಮೆಲೇ ಎಡಕ್ಕೆ ತಿರುಗಿಸಿದ ಪರಿಣಾಮ ಟಿಪ್ಪರ್ ಎಡಬದಿ ಸ್ಕೂಟರಿಗೆ ಡಿಕ್ಕಿ ಹೊಡೆದು, ರಾಮದಾಸ್ ಹಾಗೂ ಲಕ್ಷ್ಮೀ ನಾರಾಯಣ ರವರು ರಸ್ತೆಗೆ ಬಿದ್ದು ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2015ಲಂ. 279, 304() ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: