Saturday, May 02, 2015

Daily Crime Reports As on 02/05/2015 at 07:00 Hrs


ಅಪಘಾತ ಪ್ರಕರಣ :
  • ಕೋಟ : ದಿನಾಂಕ 01/05/2015 ರಂದು ಶಂಕರ ಪೂಜಾರಿ(30) ತಂದೆ: ಗೋವಿಂದ ಪೂಜಾರಿ, ಕೋಣಿ, ಕುಂದಾಪುರ ಇವರು ಕುಂದಾಪುರ ಕಡೆಯಿಂದ ಕೋಟ ಕಡೆಗೆ ತನ್ನ ಬಾಬ್ತು ನೊಂದಣಿಯಾಗದ ಮೋಟಾರು ಸೈಕಲ್ ಸುಜುಕಿ ಜಿಕ್ಸರ್ ಸವಾರಿ ಮಾಡಿಕೊಂಡು ಬೆಳಿಗ್ಗೆ 09:30 ಗಂಟೆಗೆ ತೆಕ್ಕಟ್ಟೆ ಬಸ್ಸು ನಿಲ್ದಾಣ ಬಳಿ ಬರುತ್ತಿರುವಾಗ ಕೆದೂರು ಕಡೆಯಿಂದ ಕೆಎ 14 9293ನೇ ಟ್ಟಿಪ್ಪರ್ ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಎನ್.ಎಚ್ 66ರ ರಸ್ತೆಗೆ ಏಕಾಎಕಿ ಬಂದು, ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಶಂಕರ ಪೂಜಾರಿಯವರು ರಸ್ತೆಗೆ ಬಿದ್ದ ಪರಿಣಾಮ ಕಣ್ಣಿನ ಎಡಭಾಗದ ಕೆಳಗೆ ಮೂಳೆ ಮುರಿತ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಂಕರ ಪೂಜಾರಿಯವರು ನೀಡಿದ ದೂರಿನಂತೆ ಕೋಟಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 86/15 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಂಕರನಾರಾಯಣ : ದಿನಾಂಕ 01.05.15 ರಂದು ಬೆಳಿಗ್ಗೆ 10:45 ಗಂಟೆಗೆ  ಕುಂದಾಪುರ ತಾಲೂಕಿನ  ಹಾಲಾಡಿ 76 ಗ್ರಾಮದ  ಹಾಲಾಡಿ ಪೇಟೆಯ ಬಳಿ ಕೆಎ.21 ಎಮ್‌ 7921ನೇ ನಂಬ್ರದ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಯಾವುದೇ ಮುನ್ಸೂಚನೇ ನೀಡದೇ ಒಮ್ಮೆಲೇ ರಸ್ತೆಯ ಮೇಲೆ ನಿಲ್ಲಿಸಿದ್ದು ಈ ಸಮಯ ನಾಗೇಶ ಆಚಾರಿ (22) ತಂದೆ: ರಾಮ ಆಚಾರಿ ವಾಸ: ಅಲ್ತಾರು, ಯಡ್ತಾಡಿ ಗ್ರಾಮ ಉಡುಪಿ ತಾಲೂಕು ಇವರು ಚಲಾಯಿಸಿಕೊಂಡು ಬರುತ್ತಿದ್ದ ಕೆಎ.20 ಇಡಿ 6723ನೇ ನಂಬ್ರದ ಮೋಟಾರ್ ಸೈಕಲ್‌ನ್ನು ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದ್ದು ಇದರಿಂದ ನಾಗೇಶ್‌ ಆಚಾರಿಯವರ ಗಲ್ಲಕೆ ಹಾಗೂ ಹಿಂಬದಿ ಕುಳಿತ ಶ್ರೀಮತಿ ರತ್ನಾವತಿ ಇವರ ಎಡಕೈ ಹಾಗೂ ಕಾಲುಗಳಿಗೆ ರಕ್ತಗಾಯವಾಗಿರುತ್ತದೆ ಎಂಬುದಾಗಿ ನಾಗೇಶ್‌ ಆಚಾರಿಯವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 79/15 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: