Saturday, May 30, 2015

Daily Crime Reported As On 30/05/2015 At 19:30 Hrs

ಅಪಘಾತ ಪ್ರಕರಣ: 
  • ಕೊಲ್ಲೂರು : ರವಿ ಪೂಜಾರಿ  (20) ತಂದೆ; ಮಂಜು ಪೂಜಾರಿ ವಾಸ; ತಾತೈಯ್ಯನ ಮಠ ಗುಲ್ವಾಡಿ ಗ್ರಾಮ   ಕುಂದಾಪುರ ತಾಲೂಕು  ಇವರು ದಿನಾಂಕ 30/05/15 ರಂದು ಬೆಳಿಗ್ಗೆ ಗುಲ್ವಾಡಿಯಿಂದ ಏಳ್ಜಿತಕ್ಕೆ ಕೆಲಸಕ್ಕೆ ತನ್ನ ಬಾಬ್ತು ಕೆಎ 20 ಇಹೆಚ್‌ 1692 ನೇ ಪಲ್ಸರ್‌ ಮೋಟಾರು ಬೈಕಿನಲ್ಲಿ ಹೊರಟು ಚಿತ್ತೂರು ಗ್ರಾಮದ ಆಲೂರು ಕ್ರಾಸ್‌ ತಲುಪುವಾಗ ಸಮಯ ಸುಮಾರು ಬೆಳಿಗ್ಗೆ 07:20 ಗಂಟೆಗೆ ಕೊಲ್ಲೂರು ಕಡೆಯಿಂದ ಕೆ ಎ 19 ಪಿ 9817 ನೇ ಆಲ್ಟೋ ಕಾರಿನ ಚಾಲಕನು ತನ್ನ ಬಾಬ್ತು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ರವಿ ಪೂಜಾರಿಯವರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ರವಿ ಪೂಜಾರಿಯವರ ಬಲಕಾಲಿನ ಮೂಳೆ ಮುರಿತ ಹಾಗೂ ಬಲಕೈಯ ಮೊಣ ಗಂಟು ಮತ್ತು ಮುಖದ ಭಾಗಗಳಿಗೆ ರಕ್ತಗಾಯ ಉಂಟಾಗಿರುತ್ತದೆ ಎಂಬುದಾಗಿ ನೀಡಿದ  ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 71/15 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣ : 
  • ಕೊಲ್ಲೂರು : ದಿನಾಂಕ 29/05/15 ರಂದು ಬೆಳ್ಳಾಲ ಗ್ರಾಮದ ಮೂಡುಮುಂದ ಶಾಲೆಯಲ್ಲಿ ಮತದಾನ ಮಾಡಿ ಬರುತ್ತಾ ಮದ್ಯಾಹ್ನ 16:30 ಗಂಟೆಗೆ ಶಾಲೆಯಿಂದ ಸುಮಾರು 100 ಮೀಟರ್‌ ದೂರದಲ್ಲಿ ಮಹಾಬಲ ಜಿ ಮೊಗವೀರ (48) ತಂದೆ; ಶ್ಯಾಸ ಮೊಗವೀರ ವಾಸ; ಆಸ್ಪತ್ರೆ ಜೆಡ್ಡು, ಮುಡುಮುಂದ ಬೆಳ್ಳಾಲ ಗ್ರಾಮ ಮತ್ತು ಅಂಚೆ ಕುಂದಾಪುರ ಇವರು ಪರಿಚಯದವರೊಡನೆ ಮಾತನಾಡುತ್ತಿರುವಾಗ ಚಂದ್ರ ಶೆಟ್ಟಿ, ಪ್ರವೀಣ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಭಾಸ್ಕರ ಶೆಟ್ಟಿ, ಸೀತಾರಾಮ ಶೆಟ್ಟಿ ರವರು ಮಹಾಬಲ ರವರ ಬಳಿ ಬಂದು ಜಾತಿ ವಿಷಯವಾಗಿ ಜಗಳಕ್ಕೆ ಬಂದಿದ್ದು ಆಗ ಮಹಾಬಲರು ಜಾತಿ ವಿಷಯ ಬೇಡ ಇದು ಜಾತಿ ಚುನಾವಣೆ ಅಲ್ಲ ಎಂದಾಗ, ಮಾತಿಗೆ ಮಾತು ಬೆಳೆದು ಅವರು ಪಿರ್ಯಾದಿಮಹಾಬಲರಿಗೆ ಕೈಯಿಂದ ದೂಡಿದಾಗ ಕೆಳಗಡೆ ಬಿದ್ದ ಬಳಿಕ ಆ ಜನರು ಸೇರಿ ಕೈಯಿಂದ ಹೊಡೆದು ಕಾಲಿನಿಂದ ಬಲಬದಿಯ ಹಾಗೂ ಎಡಬದಿಯ ಕಿಬ್ಬೊಟ್ಟೆಗೆ ತುಳಿದರು. ಆಗ ಮಹಾಬಲರು ಕೋಪಗೊಂಡು ಬಾಲಕೃಷ್ಣ ಶೆಟ್ಟಿಯ ತಲೆಗೆ ಮರದ ಚೆಕ್ಕೆಯಿಂದ ಹೊಡೆದಾಗ ಪ್ರವೀಣ ಕುಮಾರ್‌ ಶೆಟ್ಟಿಯವರು ಒಂದು ಕೊಲಿನಿಂದ ಮಹಾಬಲರ ಕೈಗೆ ಹೊಡೆದು ಕೈಗೆ ಗಾಯಗೊಳಿಸಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 70/15 ಕಲಂ 323,324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: