Friday, May 29, 2015

Daily Crime Reported As On 29/05/2015 At 19:30 Hrs

ಅಪಘಾತ ಪ್ರಕರಣ:
  • ಕಾಪು: ದಿನಾಂಕ 29-05-2015 ರಂದು ಪಿರ್ಯಾದಿದಾರರಾದ ಪ್ರದೀಪ್ ಕುಮಾರ್ ಕೆ.ಜಿ. (27) ತಂದೆ: ಜವರೇಗೌಡ ವಾಸ: ನಂಬ್ರ 621 2 ನೇ ಮುಖ್ಯರಸ್ತೆ, 14 ನೇ ಅಡ್ಡ ರಸ್ತೆ, ಬಿ.ಎಮ್. ಶ್ರೀ ನಗರ, ಮೆಟಗಳ್ಳಿ ಮೈಸೂರುರವರು ತನ್ನ ಮೋಟಾರ್ ಸೈಕಲ್ ನಂಬ್ರ ಕೆ.ಎ.-02- ಹೆಚ್.ಹೆಚ್.- 9325 ನೇದರಲ್ಲಿ ಕಟಪಾಡಿಯಿಂದ ಬಂಟಕಲ್ ಕಡೆಗೆ ಸವಾರಿ ಮಾಡಿಕೊಂಡು ಬೆಳಿಗ್ಗೆ 09:20 ಗಂಟೆಗೆ ಯೆಣಗುಡ್ಡೆ ಗ್ರಾಮದ ಹೋಲಿಕ್ರಾಸ್ ವಿದ್ಯಾರ್ಥಿ ನಿಲಯದ ಬಳಿ ತಲುಪುವಾಗ ಕೆ.ಎ.-20-ಕ್ಯೂ-7817 ನೇ  ಮೋಟಾರ್ ಸೈಕಲ್‌‌ನ ಸವಾರನಾದ ಮಂಜುನಾಥ ಎಂಬವರು ಶಂಕರಪುರ ಕಡೆಯಿಂದ ಕಟಪಾಡಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ತೀರಾ ಬಲಬದಿಗೆ ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಬಲಕೈ ಮಣಿಗಂಟಿಗೆ ರಕ್ತಗಾಯ, ಮತ್ತು ಎಡಕೈಯ ಮಣಿಗಂಟಿಗೆ, ಎಡಬದಿಯ ಹಣೆಯ ಬಳಿ ಗುದ್ದಿದ ಒಳನೋವು ಉಂಟಾಗಿರುತ್ತದೆ. ಈ ಬಗ್ಗೆ ಅವರ ದೂರಿನಂತೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 113/2015 ಕಲಂ 279 338 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬ್ರಹ್ಮಾವರ : ದಿನಾಂಕ: 29/05/2015 ರಂದು 11:30 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು , ಹೇರಾಡಿ ಗ್ರಾಮದ, ಹೇರಾಡಿ ಜಂಕ್ಷನ್ ಬಳಿ ಇರುವ ಶ್ರೀ ದುರ್ಗಾ ಜನರಲ್ ಸ್ಟೋರ್ಸ್ ನ ಎದುರು ಬಾರ್ಕೂರು - ಯಡ್ತಾಡಿ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ಸುರೇಶ್ ಎಂಬಾತನು ತನ್ನ ಕೆಎ-20-ಡಿ-4249ನೇ ಶ್ರೀ ದುರ್ಗಾಂಬಾ ಬಸ್ಸ್‌ನ್ನು ಬಾರ್ಕೂರು ಕಡೆಯಿಂದ ಯಡ್ತಾಡಿ ಕಡೆಗೆ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ರಸ್ತೆಯ ಬಲ ಬದಿಗೆ ಬಂದು ಯಡ್ತಾಡಿ ಕಡೆಯಿಂದ ಬಾರ್ಕೂರು ಕಡೆಗೆ ಬರುತ್ತಿದ್ದ ಕೆಎ-20-ಇಜಿ-5636 ನೇ ದ್ವಿಚಕ್ರ ವಾಹನಕ್ಕೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸುಮತಿ ಎಂಬವರು ವಾಹನ ಸಮೇತ ರಸ್ತೆಗೆ ಎಸೆಯಲ್ಪಟ್ಟು  ತಲೆಗೆ ತೀವ್ರ ತರದ ಗಾಯಗೊಂಡು ಚಿಕಿತ್ಸೆ ಬಗ್ಗೆ ಮೊದಲು ಬ್ರಹ್ಮಾವರ ಮಹೇಶ್  ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈಧ್ತರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ರತ್ನಾಕರ ಶೆಟ್ಟಿ, (40), ತಂದೆ: ದಿವಂಗತ ಶೀನಪ್ಪ ಶೆಟ್ಟಿ, ವಾಸ: ಮಾಗೆಮನೆ, ಹೊಸಾಳ ಗ್ರಾಮರವರು ನೀಡಿದ ದೂರನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 103/2015 ಕಲಂ 279 338 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕುಂದಾಪುರ : ದಿನಾಂಕ 28/05/2015 ರಂದು ಸಂಜೆ  05:30 ಗಂಟೆಗೆ ಕುಂದಾಪುರ  ತಾಲೂಕು ಕೊಟೇಶ್ವರ ಗ್ರಾಮದ  ಕಾಮತ್ ಪೆಟ್ರೋಲ್ ಬಂಕ್ ಬಳಿ ರಾ.ಹೆ 66 ಏಕಮುಖ  ರಸ್ತೆಯಲ್ಲಿ ಆಪಾದಿತ ವಸಂತ್ ಎಂಬವರು ಶ್ರೀನಿವಾಸ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು  KA-20 EG-3975 ನೇ ಬೈಕ್ ನ್ನು  ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ  ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ತೀರ ಬಲ ಬದಿಗೆ ಬಂದು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಫಿರ್ಯಾದಿದಾರರಾದ ನಿರಂಜನ್ ಪುರಾಣಿಕ್ ಬಿ. (21) ತಂದೆ: ಪ್ರಭಾಕರ ಪುರಾಣಿಕ್ ಬಿ.,   ವಾಸ: ಮನೆ ನಂ 5/7/3 ಮಾರ್ಗೊಳಿ, ಬಸ್ರೂರುರವರು  ಸವಾರಿ ಮಾಡಿಕೊಂಡು ಬರುತ್ತಿದ್ದ KA-20 L-8389 ನೇ ಬೈಕ್ ಗೆ ಎದುರುಗಡೆಯಿಂದ ಢಿಕ್ಕಿ  ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಆಪಾದಿತ ಸಹ ಸವಾರರೊಂದಿಗೆ ವಾಹನ ಸಮೇತ ರಸ್ತೆಗೆ ಬಿದ್ದು ಫಿರ್ಯಾದಿದಾರರು, ಆಪಾದಿತ ಹಾಗೂ ಸಹ ಸವಾರ ಗಾಯಗೊಂಡು ಕೋಟೇಶ್ವರ ಎನ್.ಆರ್ ಆಚಾರ್ಯ ಆಸ್ಪತ್ರೆಯಲ್ಲಿ  ಚಿಕಿತ್ಸೆ  ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ನಿರಂಜನ್ ರವರ ದೂರಿನಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/2015 ಕಲಂ 279, 338 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜೀವ ಬೆದರಿಕೆ ಪ್ರಕರಣ: 
  • ಕಾರ್ಕಳ : ದಿನಾಂಕ 29/05/2015 ರಂದು ಪಿರ್ಯಾದಿದಾರರಾದ ಶ್ರೀ ಅಲೆಕ್ಷ್ ನೋರಾನ್ಹಾ  (46 ವರ್ಷ) ತಂದೆ: ಸೆಬೆಷ್ಟಿಯನ್ ನೋರಾನ್ಹಾ, ವಾಸ: ನೋರಾನ್ಹಾ ವಿಲ್ಲಾ ಪರಪ್ಪಾಡಿ ನಿರ್ಮಲ ಪದವು ಶಾಲೆಯ ಹತ್ತಿರ, ಪರಪ್ಪಾಡಿ ಅಂಚೆ ನಿಟ್ಟೆ ಗ್ರಾಮ ಕಾರ್ಕಳ ತಾಲೂಕುರವರು  ತನ್ನ ಆಟೋರಿಕ್ಷಾ ನಂಬ್ರ ಕೆಎ20-ಸಿ-3471  ನೇದರಲ್ಲಿ ಪರಪ್ಪಾಡಿಗೆ ಬಾಡಿಗೆ ಹೋಗಿದ್ದು ವಾಪಾಸ್ಸು ಬರುತ್ತಾ ತನ್ನ ಪರಿಚಯದ ಸೆರ್ಪಿನ ಫಿರೇರಾ ಎಂಬವರನ್ನು ಕುಳ್ಳಿರಿಸಿಕೊಂಡು ಬರುತ್ತಿರುವಾಗ ಸುಮಾರು 10:30 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ಗ್ರಾಮದ ಪರಪ್ಪಾಡಿ ಪದವು ಕ್ರಾಸ್ ರಸ್ತೆ ಸಮೀಪ ತಲುಪುವಾಗ ಆರೋಪಿ ಸಂತೋಷ ಪೂಜಾರಿಯು ಮೊಬೈಲ್ ನಲ್ಲಿ ಮಾತನಾಡಿಕೊಂಡಿದ್ದವನು ಒಮ್ಮೆಲೇ ಪಿರ್ಯಾದಿದಾರ ರಿಕ್ಷಾವನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಅವರನ್ನು ಹೊರಗೆ ಎಳೆದು ಕೈಯಿಂದ ಮುಖಕ್ಕೆ ಹೊಡೆದು,  ಹೊಟ್ಟೆ, ಎದೆಗೆ, ಹಾಗೂ ಮರ್ಮಾಂಗಕ್ಕೆ ಕಾಲಿನಿಂದ ತುಳಿದಿದ್ದು ಅವಾಚ್ಯ ಶಬ್ದಗಳಿಂದ ಬೈದು ನಿನಗೆ ರಿಕ್ಷಾ ಓಡಿಸುವಾಗ ಕಣ್ಣು ಕಾಣಿಸುವುದಿಲ್ಲವೇ, ನಮ್ಮ ಮೈಮೇಲೆ ಬರುತ್ತೀಯಾ ಇನ್ನು ಬಾಡಿಗೆ ಮಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆಂದು ಆರೋಪಿಸಿ ಅಲೆಕ್ಷ್ ನೋರಾನ್ಹಾರವರು  ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಆರೋಪಿಯ ವಿರುದ್ದ ಠಾಣೆಯಲ್ಲಿ ಅಪರಾಧ ಕ್ರಮಾಂಕ 92/2015  ಕಲಂ 341, 323, 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: