Thursday, May 28, 2015

Daily Crime Reported As On 28/05/2015 At 19:30 Hrs

ಅಪಘಾತ ಪ್ರಕರಣ : 
  • ಶಂಕರನಾರಾಯಣ : ದಿನಾಂಕ 25.05.15 ರಂದು  ರಾತ್ರಿ 01.00  ಘಂಟೆ ಸಮಯಕ್ಕೆ  ಆರೋಪಿ ಶರತ್ ಶೆಟ್ಟಿ ಸಿದ್ದಾಪುರ ಗ್ರಾಮ ಇವನು ತನ್ನ ಕೆಎ.20 ಕ್ಯೂ.4138  ನೇ ನಂಬ್ರದ ಮೋಟಾರ್ ಸೈಕಲ್‌‌‌ನ್ನು ಕುಂದಾಪುರ ತಾಲೂಕಿನ ಐರಬೈಲ್ಲು  ಹಾಲಿನ  ಡೈರಿಯ ಬಳಿ  ಅತೀ ವೇಗ ಹಾಗೂ ಅಜಾಗೂಕತೆಯಿಂದ ಚಲಾಯಿಸಿದ್ದು, ಈ ಸಮಯ ಮೋಟಾರ್ ಸೈಕಲ್ ಹತೋಟಿ ತಪ್ಪಿ ರಸ್ತೆಯ ಬಲಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದು ಇದರ ಪರಿಣಾಮ ಮೋಟಾರ್ ಸೈಕಲ್ ಹಿಂಬದಿ ಸವಾರ ಸತೀಶ ಶೆಟ್ಟಿ ಇವರ ತಲೆಗೆ ಗಂಭೀರ ಸ್ವ್ರರೂಪದ ರಕ್ತಗಾಯವಾಗಿರುತ್ತದೆ ಎಂಬುದಾಗಿ ಶೇಖರ್ ಶೆಟ್ಟಿ (36) ತಂದೆ: ಶೀನಪ್ಪ ಶೆಟ್ಟಿ ನಿರೋಣಮಕ್ಕಿ ಸಿದ್ದಾಪುರ ಗ್ರಾಮ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 130/15 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ಸಂಚಾರ: ದೇವರಾಜ್ ಆಚಾರ್ಯ(58) ತಂದೆ:ದಿ,ರಾಮಕೃಷ್ಣ ಆಚಾರ್ಯ ವಾಸ:,ಈಶ್ವರನಗರ ತೆಂಕನಿಡಿಯೂರು ಕೊಡವೂರು ಇವರು ದಿನಾಂಕ 27/05/2015 ರಂದು ಸಮಯ ಸುಮಾರು ಸಂಜೆ 5:15 ಗಂಟೆ ಸಮಯಕ್ಕೆ ಈಶ್ವರನಗರದಿಂದ ಉಡುಪಿ ಕಡೆಗೆ ಬಾಬ್ತು ಕಾರು ನಂಬ್ರ ಕೆಎ-20 ಎಮ್ 5272ನೇಯದರಲ್ಲಿ ಬರುತ್ತಿರುವಾಗ ಶಾಂತಿನಗರದ ಹತ್ತಿರ ಎದುರಿನಿಂದ  ಜಿಎ-01 ಯು-3266ನೇ ನಂಬ್ರದ ಟಿಪ್ಪರ್ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೇವರಾಜ್‌ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಎಡಬದಿ ಜಖಂಗೊಂಡಿರುತ್ತದೆ ಹಾಗೂ ತೀವ್ರ ತರಹದ ಗಾಯಗಳಾಗಿದ್ದು, ಚಿಕಿತ್ಸೆ ಬಗ್ಗೆ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಸದ್ರಿ ಅಪಘಾತಕ್ಕೆ ಜಿಎ-01 ಯು-3266ನೇ ನಂಬ್ರದ ಟಿಪ್ಪರ್ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದ್ದು, ಸದ್ರಿ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೋಳ್ಳಬೇಕಾಗಿ ಕೋರಿಕೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 55/2015 ಕಲಂ. 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: