Thursday, May 28, 2015

Daily Crime Reported As On 28/05/2015 At 17:00 Hrs

ಅಪಘಾತ ಪ್ರಕರಣ :
  • ಕೊಲ್ಲೂರು : ದಿನಾಂಕ 28.05.2015 ರಂದು ಶ್ರೀಮತಿ ಜ್ಯೋತಿ(37) ಗಂಡ: ಸುಧಾಕರ ಚಂದನ್ ವಾಸ: ಮಹಾಲಿಂಗ ನಿಲಯ ಬರೆಕಟ್ಟು, ಕುಂದಾಪುರ ಕಸಬ ಇವರು ಹಾಗೂ ಇವರ ತಂಗಿ ಗೀತಾ ಮತ್ತು ಆಕೆಯ ಮಗು ವನ್ಷಿತಾ (3.5 ವರ್ಷ) ರವರು ಬೆಳಿಗ್ಗೆ ತನ್ನ ಮನೆಯಿಂದ ಕೆ.ಎ 20 ಡಿ 1120 ನೇ ಆಟೋ ರಿಕ್ಷಾದಲ್ಲಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗಿ ಪೂಜಾ ಕಾರ್ಯ ಮುಗಿಸಿಕೊಂಡು ವಾಪಾಸ್ಸು ಅದೇ ರಿಕ್ಷಾದಲ್ಲಿ ಮನೆಯ ಕಡೆಗೆ ಬರುವಾಗ ಬೆಳಿಗ್ಗೆ 07.45 ಗಂಟೆ ಸಮಯ ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ಮಾರ್ಣಕಟ್ಟೆ ಜಂಕ್ಷನ್ ಬಳಿ ರಾಜ್ಯ ಹೆದ್ದಾರಿಯಲ್ಲಿ ರಿಕ್ಷಾ ಚಾಲಕನು ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ಮೋರಿಯಲ್ಲಿ ಮಗುಚಿ ಬಿದ್ದು ವನ್ಷಿತಾ(3.5) ವರ್ಷದ ಮಗುವಿಗೆ ಬಲಕಾಲಿಗೆ ರಕ್ತಗಾಯವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 68/15 ಕಲಂ: 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಉಡುಪಿ ಸಂಚಾರ : ವಿರೇಶ. ಹೆಚ್‌. ಘಾಳಪೂಜಿ (28), ತಂದೆ: ಹುಲಗಪ್ಪ, ವಾಸ:ಮರಗಮ್ಮ ದೇವಿ ಮಂದಿರದ ಹತ್ತಿರ ಆಲೂರು ಗ್ರಾಮ ವಿಜಯಪುರ ಜಿಲ್ಲೆ ಇವರು ದಿನಾಂಕ 27/05/2015 ರಂದು ಹಾವಂಜೆಯಿಂದ ಮಣ್ಣು ತುಂಬಿಸಿ ಮಲ್ಪೆಗೆ ಹೋಗುವರೇ ಸರ್ವಿಸ್ ರೋಡ್ ಮುಖಾಂತರ ಬಂದು ಮಲ್ಪೆ ಕಡೆಗೆ ತಿರುಗಿಸಿ ಲಕ್ಷ್ಮೀನಗರ ಕಡೆ ಹೋಗುವ ರಸ್ತೆಯಲ್ಲಿ ಹೋಗುತ್ತಾ ಸಮಯ ಸುಮಾರು ಸಂಜೆ 5:30ಗಂಟೆಗೆ ಶಾಂತಿನಗರ ಬಸ್ ನಿಲ್ದಾಣದ ಹತ್ತಿರ ಗರಡಿ ಮಜಲು ರಸ್ತೆಯಿಂದ ಕೆಎ-20 ಎಮ್-5272ನೇ ನಂಬ್ರದ ಮಾರುತಿ 800 ಕಾರು ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಿರೇಶರು ಚಲಾಯಿಸಿಕೊಂಡು ಹೋಗುತ್ತಿದ್ದ ಜಿಎ-01 ಯು-3266ನೇ ನಂಬ್ರದ ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಎಡಬದಿ ಜಖಂಗೊಂಡಿರುತ್ತದೆ. ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಬಗ್ಗೆ ತಿಳಿದುಬಂದಿರುತ್ತದೆ. ವಿರೇಶ ಇವರು ಸದ್ರಿ ಅಪಘಾತ ತಪ್ಪಿಸುವರೇ ಟಿಪ್ಪರಿನ ಎದುರು ಮತ್ತು ಹಿಂಬದಿ ಚಕ್ರಗಳು ಚರಂಡಿಗೆ ಬಿದ್ದಿರುತ್ತವೆ. ಈ ಅಪಘಾತದಿಂದ ಇವರು ಚಲಾಯಿಸುತ್ತಿದ್ದ ಟಿಪ್ಪರಿನ ಮುಂಬದಿ ಜಖಂ ಗೊಂಡಿರುತ್ತದೆ. ಸದ್ರಿ ಅಪಘಾತಕ್ಕೆ ಕೆಎ-20 ಎಮ್ 5272ನೇ ಮಾರುತಿ 800 ಕಾರು ಚಾಲಕ ದೇವರಾಜ್‌ ಆಚಾರ್ಯರವರ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದ್ದು, ಸದ್ರಿ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೋಳ್ಳಬೇಕಾಗಿ ಕೋರಿಕೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 54/15 ಕಲಂ: 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಪಡುಬಿದ್ರಿ : ದಿನಾಂಕ. 27.05.2015 ರಂದು ಬೆಳಿಗ್ಗೆ 07:30 ಗಂಟೆಗೆ ವಿಠಲ ಆಚಾರ್ಯ 50 ವರ್ಷ, ತಂದೆ:- ದಿ. ಕಿಟ್ಟಣ್ಣ ಆಚಾರ್ಯ ವಾಸ:- ದುರ್ಗಾ ನಗರ, ಕುಂಜೂರು, ಎಲ್ಲೂರು ಗ್ರಾಮ, ಉಡುಪಿ ತಾಲೂಕು ಇವರ ಅಕ್ಕ ಶಕುಂತಲ 47ವರ್ಷ ಎಂಬವರು ತನ್ನ ತಮ್ಮನ ಮನೆಯಾದ ಎಲ್ಲೂರುಗೆ ಬಂದು ವಾಪಾಸ್ಸು ತನ್ನ ಗಂಡನ ಮನೆಯಾದ ಬ್ರಹ್ಮಾವಾರಕ್ಕೆ ಹೋಗಲು ಉಡುಪಿ ಹೋಗುವ ಬಸ್ ನಿಲ್ದಾಣಕ್ಕೆ ಹೋಗಲು ಬಡಾ ಗ್ರಾಮದ ಉಚ್ಚಿಲ ಮಂಗಳೂರು ಹೋಗುವ ಬಸ್ ನಿಲ್ದಾಣದಲ್ಲಿ ರಸ್ತೆ ದಾಟಲು ನಿಂತಿದ್ದಾಗ ಉಡುಪಿ ಕಡೆಯಿಂದ ಕೆಎ-19-ಎಂ.ಸಿ-2965ನೇ ಸಿಪ್ಟ್ ಡಿಸೈರ್ ಕಾರಿನ ಚಾಲಕನಾದ ವಿಶ್ವಾಸ ಕುಮಾರ್ ಎಂಬವರು ಕಾರನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡ ಬದಿಗೆ ಬಂದು ರಸ್ತೆಯ ಪೂರ್ವ ಬದಿಯ ಅಂಚಿನಲ್ಲಿ ನಿಂತಿದ್ದ ಶಕುಂತಲ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಶಕುಂತಲ ಎಂಬವರಿಗೆ ಬಲಕಾಲಿಗೆ ಹಾಗೂ ತಲೆಗೆ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ವಿಠಲ ಆಚಾರ್ಯರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 76/15 ಕಲಂ: 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಪಡುಬಿದ್ರಿ : ದಿನಾಂಕ. 26.05.2015 ರಂದು 19:30 ಗಂಟೆಗೆ ನಡ್ಸಾಲು ಗ್ರಾಮ ಬೀಡು ಬಳಿ ಇರುವ ರೈಸ್ ಮಿಲ್ಲ್ ಬಳಿ ರಾ.ಹೆ 66 ರಲ್ಲಿ  ಪಡುಬಿದ್ರಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ಯಾವುದೋ ವಾಹನದ ಚಾಲಕ ವಾಹನವನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ಪದ್ಮಾನಾಭ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಪದ್ಮಾನಾಭ ಎಂಬವರಿಗೆ ತಲೆಗೆ ತೀವ್ರ ತರಹದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮುಲ್ಕಿ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಡಿಕ್ಕಿ ಹೊಡೆದ ವಾಹನದ ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿರುತ್ತಾರೆ ಎಂಬುದಾಗಿ ಲೀಲಾಧರ್ ಪೂಜಾರಿ(44) ತಂದೆ: ದಿ. ಸದಾನಂದ ಪೂಜಾರಿ ವಾಸ: ಸುವರ್ಣ ವಿಹಾರ, ಹೆಜಮಾಡಿ ಗ್ರಾಮ, ಉಡುಪಿ ತಾಲೂಕು ಇವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 75/15 ಕಲಂ: 279, 338  ಐ.ಪಿ.ಸಿನ 134 (ಎ & ಬಿ) ಜೊತೆಗೆ 187 ಐ.ಎಂ. ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆಕ್ರಮ ಜಾನುವಾರು ಸಾಗಾಟ ಪ್ರಕರಣ :
  • ಹೆಬ್ರಿ : ಪರಮೇಶ್ವರ ನಾಯ್ಕ್‌, ಎ.ಎಸ್‌.ಐ, ಹೆಬ್ರಿ ಪೊಲೀಸ್ ಠಾಣೆ ಇವರು ದಿನಾಂಕ 28/05/2015 ರಂದು ಬೆಳಿಗ್ಗೆ ಸಿಬ್ಬಂದಿಯವರೊಂದಿಗೆ ಮೊಟಾರ್ ಸೈಕಲಿನಲ್ಲಿ ಮುದ್ರಾಡಿ ಗ್ರಾಮದ ಬಕ್ರೆಮಠ ಕ್ರಾಸ್‌ ಬಳಿ ರೌಂಡ್ಸ್ ನಲ್ಲಿರುವಾಗ ಬೆಳಿಗ್ಗೆ 10:00 ಗಂಟೆಗೆ ಆರೋಪಿ ಗುರುಮೂರ್ತಿ (24), ತಂದೆ: ಶ್ರೀನಿವಾಸ, ವಾಸ: ಗೋಪಾಲ್‌ ಕಾಲೋನಿ, ತರಿಕೆರೆ, ಚಿಕ್ಕಮಗಳೂರು ಜಿಲ್ಲೆ ಇವನು ತನ್ನ ಬಾಬ್ತು ಕೆಎ 18 ಬಿ 6462ನೇ ಮಹೇಂದ್ರ ಬೊಲೇರೋ ವಾಹನದಲ್ಲಿ ಯಾವುದೇ ದಾಖಲಾತಿ ಇಲ್ಲದೇ ಮೂರು ಜಾನುವಾರುಗಳನ್ನು ಅವುಗಳ ಕುತ್ತಿಗೆಗೆ ಹಗ್ಗ ಕಟ್ಟಿ ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಯದ್ವತದ್ವವಾಗಿ ತುಂಬಿಸಿಕೊಂಡು ಅವುಗಳನ್ನು ವಧೆ ಮಾಡುವ ಉದ್ದೇಶದಿಂದ ಕಸಾಯಿಖಾನೆಗೆ ಕೊಂಡು ಹೋಗುತ್ತಿರುವುದನ್ನು ಪತ್ತೆ ಹಚ್ಚಿ ಸದ್ರಿ ಜಾನುವಾರುಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು ಆರೋಪಿ ಗುರುಮೂರ್ತಿಯನ್ನು ದಸ್ತಗಿರಿ ಮಾಡಿರುವುದಾಗಿದೆ. ಈ ಬಗ್ಗೆ  ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/15, ಕಲಂ: 8,9, 11 ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಪರಿರಕ್ಷಣೆ ಕಾಯ್ದೆ, ಕಲಂ: 11(1)(ಡಿ) ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ. & ಕಲಂ: 192 ಐ.ಎಂ.ವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: