Tuesday, May 26, 2015

Daily Crime Reported As On 26/05/2015 At 17:00 Hrs

ಅಪಘಾತ ಪ್ರಕರಣ
  • ಕಾಪು: ದಿನಾಂಕ 25-05-2015 ರಂದು ಸಂಜೆ 6:15 ಗಂಟೆಗೆ ಆರೋಪಿ ಕೆ.ಎ 25 ಎನ್4531ನೇ ಮಾರುತಿ 800 ಕಾರು ಚಾಲಕನು ಕಾರನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಕಟಪಾಡಿ ವಿಜಯ ಇಂಡಸ್ಟ್ರೀಸ್ ಬಳಿ ರಾ.ಹೆ. 66ರ ಪಶ್ವಿಮ ಬದಿಯ ಮಣ್ಣುರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಮಾರು 80 ವರ್ಷ ಪ್ರಾಯದ ಸಂಜೀವ ಎಸ್. ಶೆಟ್ಟಿ ಇವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸದ್ರಿಯವರು ರಸ್ತೆಗೆ ಬಿದ್ದು, ಕೈಗಳಿಗೆ, ಕಾಲಿಗೆ ಮುಖಕ್ಕೆ ರಕ್ತ ಗಾಯ ಉಂಟಾಗಿದ್ದವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ. ಆಸ್ಪತ್ರೆಗೆ ದಾಖಲಿಸಿದ್ದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 111/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ
  • ಕಾರ್ಕಳ: ದಿನಾಂಕ 25/05/2015 ರ ರಾತ್ರಿ 11-30 ಗಂಟೆಯಿಂದ ದಿನಾಂಕ 26/05/2015 ರ ಬೆಳಿಗ್ಗೆ 05-00 ಗಂಟೆಯ ಮಧ್ಯದಲ್ಲಿ ಕಾರ್ಕಳ ತಾಲೂಕು ಕರಿಮಾರ್ ಕಟ್ಟೆ ಬಳಿ ಇರುವ ಪಿರ್ಯಾದಿ ಸುಜಾತ ಕೆ ಶೆಟ್ಟಿ ಇವರ ಆರ್ಶೀವಾದ ನಿಲಯ ಎಂಬ ಮನೆಯ ಅಡುಗೆ ಕೋಣೆಯ ಬಾಗಿಲಿನ ಚೀಲಕವನ್ನು ಯಾರೋ ಕಳ್ಳರು ಹೊರಗಿನಿಂದ ಮೀಟಿ ಬಾಗಿಲನ್ನು ತೆರೆದು ರೂಂನಲ್ಲಿದ್ದ ಕಪಾಟ್ ಅನ್ನು ತೆರೆದು ವಸಂತಿರವರ ಬ್ಯಾಗ್ ನಲ್ಲಿದ್ದ ಸುಮಾರು 5 ಪಾವನ್ ತೂಕದ ಕರಿಮಣಿ ಸರ  ಬೆಂಡೋಲೆ, ಜಯಂತಿ ಶೆಟ್ಟಿಯವರ ಬಂಗಾರದ ಒಡವೆಗಳಾದ 5 1/2 ಪವನ್ ಕರಿಮಣಿ ಸರ,  6 1/2 ಪವನ್ ತೂಕದ ಹವಳದ ಚೈನ್,  6 1/2 ಪವನ್ ಮುತ್ತಿನ ಹವಳದ ಚೈನ್,  6 1/2 ಪವನ್ ಮುತ್ತಿನ ಹವಳದ ಸರ, 4 ಪವನ್ ತೂಕದ ಹವಳದ ಬಳೆ 1 ಜೊತೆ, 4 ಗ್ರಾಂ ತೂಕದ ಬಂಗಾರದ ಉಂಗುರ, 1 ಪವನ್ ತೂಕದ ಬಂಗಾರದ ಬೆಂಡೋಲೆ, 1/2 ಪವನ್ ಬಂಗಾರದ ಬೆಂಡೋಲೆ 1 ಜೊತೆ, ಅಲ್ಲದೆ ಸುಜಾತ ಕೆ ಶೆಟ್ಟಿಯವರ ತಂಗಿಯಾರದ ಜಯಂತಿ ಮತ್ತು ವಸಂತಿ ಬಾಬ್ತು 18,000 ನಗದು ಹಣ ಒಟ್ಟು ರೂ 4 ಲಕ್ಷ ಬೆಲೆಯುಳ್ಳ ಮೇಲಿನ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ  ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2015 ಕಲಂ 457, 380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರೇ ಪ್ರಕರಣ : 
  • ಬ್ರಹ್ಮಾವರ : ದಿನಾಂಕ: 25/05/2015 ರಂದು 20.15 ಗಂಟೆಗೆ ಉಡುಪಿ ತಾಲೂಕು ಹನೆಹಳ್ಳಿ ಗ್ರಾಮದ ಬಂಡಿಮಠ ಬಸ್ಸ್ ನಿಲ್ದಾಣದ ಬಳಿ ಸುಬ್ರಹ್ಮಣ ಆಚಾರಿ(35) ತಂದೆ:ರುದ್ರಯ್ಯ ಆಚಾರಿ ವಾಸ: ಬಂಡಿಮಠ ಹನೆಹಳ್ಳಿ ಗ್ರಾಮ ಇವರು ಹಾಗೂ ರಾಜೇಶ್ ಎಂಬವರು ಮೋಟಾರ್ ಸೈಕಲ್ ನಂಬ್ರ ಕೆಎ-20-ಕ್ಯೂ- 8593 ನೇ ಯದರಲ್ಲಿ ಬಾರ್ಕೂರಿನಿಂದ ಬಂಡಿಮಠಕ್ಕೆ ಬರುವಾಗ ಆರೋಪಿತರಾದ ಹರೀಶ ಶೆಟ್ಟಿ ಮತ್ತು ಇತರ ಮೂರು ಜನರು ಮೋಟಾರು ಸೈಕಲನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಎರಡು ದಿನಗಳೊಳಗೆ ಕೊಲ್ಲದೆ ಬಿಡವುದಿಲ್ಲ ಎಂಬುದಾಗಿ ಜೀವ  ಬೆದರಿಕೆ ಹಾಕಿರುವುದಾಗಿದೆ, ಈ ಕೃತ್ಯಕ್ಕೆ ಹಳೆಯ ದ್ವೇಷವೇ ಕಾರಣವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 101/15 ಕಲಂ : 341, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

No comments: