Monday, May 18, 2015

Daily Crime Reported As On 18/05/2015 At 17:00 Hrs

ಹಲ್ಲೆ ಪ್ರಕರಣ
  • ಗಂಗೊಳ್ಳಿ: ಪಿರ್ಯಾದಿ ಉಸಾಮ (15) ತಂದೆ: ರಫೀಕ್ ವಾಸ: ಜಾಮೀಯ ಮೊಹಲ್ಲಾ, ಗಂಗೊಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 17-05-2015 ರಂದು ರಾತ್ರಿ ಗಂಗೊಳ್ಳಿ ಅಝೀಮ್ ಟೈಲರ್ ಬಳಿ ಹೂಲಿಯಲು ಕೊಟ್ಟ ಬಟ್ಟೆಯನ್ನು ತೆಗೆದು ಕೊಂಡು ಸ್ನೇಹಿತ ಅಮೀಜ್ ನೊಂದಿಗೆ ಮನೆಗೆ ಬರುತ್ತಿರುವಾಗ 21:15 ಗಂಟೆಗೆ  ಗಂಗೊಳ್ಳಿ ನಾಗಶ್ರೀ ಬಾರ್ ಬಳಿ ಬರುತ್ತಿದ್ದ ಸಮಯ ಅಪಾದಿತ ನವೀನ್ ಇವರು ಪಿರ್ಯಾದಿ ಮತ್ತು ಅವನ ಸ್ನೇಹಿತ ಅಮೀಜ್ ಇವರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಕುಂದಾಪುರಕ್ಕೆ ಹೋಗುವ ಬಸ್ಸು ಇದೇಯ ಎಂದು ಕೇಳಿ ಪಿರ್ಯಾದಿದಾರರು ಇಲ್ಲ ಎಂದು ಹೇಳಿದಕ್ಕೆ ಅವಾಚ್ಯ ಶಬ್ದಗಳಿಂದ ಬಯ್ದಿದ್ದು ಕುತ್ತಿಗೆಗೆ ಹಾಗೂ ಕೆನ್ನೆಗೆ ಕೈಯಿಂದ ಹೊಡೆದು ನೆಲಕ್ಕೆ ದೂಡಿ ಹಾಕಿದ್ದು,  ಪಿರ್ಯಾದಿ ಸ್ನೇಹಿತನಿಗೂ  ಅವಾಚ್ಯ ಶಬ್ದದಿಂದ ಬೈಯ್ದು ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 67 /2015 ಕಲಂ 341,323,504,506   ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
  • ಕೋಟ: ಪಿರ್ಯಾದಿ ವಿಶ್ವನಾಥ ಶೆಟ್ಟ(45),ತಂದೆ:ದಿ.ಮಹಾಬಲ ಶೆಟ್ಟಿ ,ವಾಸ:ಮಟಪಾಡಿ ಗ್ರಾಮ ಮತ್ತು ಅಂಚೆ,ಉಡುಪಿ ತಾಲೂಕು.ಇವರ ಅಣ್ಣನ ಮಗಳಾದ ಮೇಘಾ ಪ್ರಾಯ:17 ವರ್ಷ ಎಂಬುವರು ಬ್ರಹ್ಮಾವರ ಕ್ರಾಸ್‌ ಲ್ಯಾಂಡ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆ ಮುಗಿಸಿದ್ದು, ಪರೀಕ್ಷೆಯ ಫಲಿತಾಂಶಕ್ಕೆ ಹೆದರಿ  ದಿನಾಂಕ:17/05/2015 ರಂದು ರಾತ್ರಿ 10:45 ಗಂಟೆಯಿಂದ ದಿನಾಂಕ:18/05/2015 ರ ಬೆಳಿಗ್ಗೆ 08:00  ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ವಡ್ಡರ್ಸೆ ಗ್ರಾಮದ ಯಾಳಹಕ್ಲು ಎಂಬಲ್ಲಿರುವ ತನ್ನ ಮನೆಯ ಮಹಡಿಯ ಮೇಲಿನ ರೂಂ ನಲ್ಲಿ ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುದಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ  22/2015 ಕಲಂ:174 ಸಿ.ಆರ್.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: