Monday, May 11, 2015

Daily Crime Reported As On 11/05/2015 At 17:00 Hrs



ಅನುಮಾನಾಸ್ಪದ ವ್ಯಕ್ತಿಯ ಬಂಧನ

  • ದಿನಾಂಕ : 10/05/2015  ರಂದು ಕುಂದಾಪುರ ಪೊಲೀಸ್‌‌ ವೃತ್ತ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಕುಂದಾಪುರ ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ದಿನಾಂಕ 11/05/2015 ರಂದು ಬೆಳಗ್ಗಿನ ಜಾವ 03.40 ಗಂಟೆಗೆ ಬಸ್ರೂರು ಗ್ರಾಮದ ಬಸ್ರೂರು ಸಿಂಡಿಕೇಟ್‌‌ ಬ್ಯಾಂಕ್‌‌ ಎದುರು ಇರುವ ನಂದಿನಿ ಮಿಲ್ಕ್‌‌ ಡೈರಿ ಅಂಗಡಿಯ ಬಳಿ ಅಡ್ಡವಾಗಿ ಕತ್ತಲಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡಿದ್ದು, ಇಲಾಖಾ ಜೀಪನ್ನು ನೋಡಿ ಆತನು ತನ್ನ ಮುಖವನ್ನು ಮರೆಮಾಚಿಕೊಂಡು ನಿಂತುಕೊಂಡಿರುವುದನ್ನು ಜೀಪಿನ ಲೈಟಿನ ಬೆಳಕಿನಲ್ಲಿ ಕಂಡು ಅನುಮಾನಗೊಂಡು ಜೀಪನ್ನು ನಿಧಾನ ಮಾಡಿ ಹತ್ತಿರ ಹೋದಾಗ ಓಡಲು ಪ್ರಯತ್ನಿಸಿದವನನ್ನು ಹಿಡಿದು ವಿಚಾರಿಸಿದಲ್ಲಿ ಆತನ ಹೆಸರು ಕೇಳಲಾಗಿ ತನ್ನ ಹೆಸರು ಸುರೇಶ, ದೇವು ಬಸ್ರೂರು ಎಂತಲೂ, ಬಸ್ರೂರಿನಲ್ಲಿ ಎಲ್ಲಿ ಎಂದು ಕೇಳಿದಾಗ ಹೇಳಲು ತಡವರಿಸಿದವನನ್ನು ಕೂಲಂಕುಷವಾಗಿ ವಿಚಾರಿಸಿದಾಗ ತನ್ನ ಹೆಸರು ಪ್ಯಾರಾ ಸಮದ್ @  ರಾಘವ್‌‌ ಪ್ರಾಯ : 18 ವರ್ಷ  ತಂದೆ : ರೇಜಾನ ವಾಸ : ಕಜ್ರೀದರ್‌‌‌, ತಿಲೇಬೋಣಿ ಬ್ಲಾಕ್‌‌, ಗುಹೀರಾ ಡ್ಯಾಮ್‌‌ ಅಂಚೆ, ದೇವಗಡ್ಪೊಲೀಸ್ಠಾಣಾ ವ್ಯಾಪ್ತಿ, ದೇವಗಡ್ಜಿಲ್ಲೆ, ಒರಿಸ್ಸಾ ರಾಜ್ಯ ಎಂಬುದಾಗಿ ತಿಳಿಸಿದನು. ಆತನು ಕೈಯಲ್ಲಿ ಯಾವುದೋ ವಸ್ತುಗಳನ್ನು ಹಿಡಿದುಕೊಂಡಿದ್ದು ಅದನ್ನು ಪರಿಶಿಲಿಸಿದಾಗ ಆತನ ಕೈಯಲ್ಲಿ ಕಬ್ಬಿಣದ ಸರಳು ಇದ್ದು, ಈತನು  ಯಾವುದೋ ಬೇವಾರಂಟು ತಕ್ಷೀರನ್ನು ಮಾಡುವ ಸಲುವಾಗಿ ನಿಂತಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ :       131 /2015   ಕಲಂ: 96 ಕೆ.ಪಿ.ಆಕ್ಟ್  ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ

  • ಬೈಂದೂರು:  ದಿನಾಂಕ:11/05/15 ರಂದು ಪಿರ್ಯಾದಿ ಜನಾರ್ಧನ ಬಿಲ್ಲವ ಇವರು ತಮ್ಮ ಮನೆಯ ಟಿಲ್ಲರ್ ರಿಪೇರಿ ಮಾಡಿಸುವರೇ ಕಿರಿಮಂಜೇಶ್ವರದಿಂದ ಮೆಕ್ಯಾನಿಕ್ ನನ್ನು ಕೆಎ20 ಇಎ3160 ನೇ ನಂಬ್ರದ ಮೋಟಾರು ಸೈಕಲಿನಲ್ಲಿ ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ತಾನು ಸವಾರಿ ಮಾಡಿಕೊಂಡು ಕಿರಿಮಂಜೇಶ್ವರದಿಂದ ಬೈಂದೂರು ಕಡೆಗೆ ಎನ್ ಹೆಚ್ 66 ರಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ್ಗೆ ಕುಂದಾಪುರ ತಾಲುಕು ಕಿರಿಮಂಜೇಶ್ವರ ಗ್ರಾಮದ ನಾಗೂರು ಮಸೀದಿ ಹತ್ತಿರ ತಲುಪುವಾಗ್ಗೆ ಸಮಯ ಸುಮಾರು 9:30 ಗಂಟೆಗೆ ಕೆ 47ಎಮ್ 3001 ನಂಬ್ರದ ಮಾರುತಿ ಓಮಿನಿಯನ್ನು ಅದರ ಚಾಲಕನು ಕುಂದಾಪುರದಿಂದ ಬೈಂದೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಮೋಟಾರು ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಮೋಟಾರ್ ಸೈಕಲ್  ಹಿಂಬದಿ ಸವಾರ ಚಂದ್ರ ರವರಿಗೆ ತಲೆಗೆ ಹಾಗೂ ಸೊಂಟಕ್ಕೆ ಗುದ್ದಿದ ಜಖಂ ಆಗಿದ್ದು ಪಿರ್ಯಾದಿದಾರರಿಗೆ ತರಚಿದ ಗಾಯವಾಗಿರುತ್ತದೆ . ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 112/2015 ಕಲಂ : 279, 337  ಐಪಿಸಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಪಡುಬಿದ್ರಿ:  ದಿನಾಂಕ. 11.05.2015 ರಂದು ಬೆಳಿಗ್ಗೆ 10:40 ಗಂಟೆಗೆ ಬಡಾ ಗ್ರಾಮದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ಸಭಾ ಭವನದಿಂದ ಸ್ವಲ್ಪ ಮುಂದಕ್ಕೆ ರಾ.ಹೆ 66 ರಲ್ಲಿ ಕೆಎ-19-ಎಬಿ-5901 ನೇ ಮಿನಿ ಬಸ್   ಚಾಲಕ ಮಿನಿ ಬಸ್ಸು ಉಚ್ಚಿಲ ಕಡೆಯಿಂದ ಪಡುಬಿದ್ರಿ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಎದುರಿನಲ್ಲಿ ಹೋಗುತ್ತಿದ್ದ ವಾಹನವನ್ನು ಓವರ್ ಟೆಕ್ ಮಾಡುವಾಗ ಮಿನಿ ಬಸ್ ಮತ್ತು ವಾಹನದ ನಡುವೆ ಹೋಗುತ್ತಿದ್ದ ದ್ವಿಚಕ್ರ ವಾಹನ ನಂ.ಕೆಎ-20-ಡಬ್ಲ್ಯೂ-9913 ಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಬಲಕ್ಕೆ ತಿರುಗಿ ಮಗುಚಿ ಬಿದ್ದು, ದ್ವಿಚಕ್ರ ವಾಹನ ಸವಾರರಾದ ವೈ.ಎಸ್.ಅಹಮ್ಮದ್ 70 ವರ್ಷ ಎಂಬವರಿಗೆ ತಲೆಗೆ ತೀವ್ರ ತರಹದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದು ಕೊಂಡು ಹೋಗುವಾಗ ದಾರಿ ಮದ್ಯದಲ್ಲಿ ಮೃತ ಪಟ್ಟಿರುತ್ತಾರೆ. ಮಿನಿಬಸ್ ಚಾಲಕ ಅಪಘಾತವಾದ ಕೂಡಲೇ ಪರಾರಿಯಾಗಿರುತ್ತಾನೆ . ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 65/15 ಕಲಂ: ಕಲಂ: 279, 304() ಐಪಿಸಿ ಮತ್ತು 134 () (ಬಿ) ಜೊತೆಗೆ 187 .ಎಂ.ವಿ. ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ 
  • ಮಣಿಪಾಲ: ಮಾಧವ ದೇವಾಡಿಗ(74)ರವರು ಅಸೌಖ್ಯದಿಂದ ಬಳಲುತ್ತಿದ್ದು, ಇದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 10.05.15ರಂದು ರಾತ್ರಿ 12:00 ಗಂಟೆಯಿಂದ ದಿನಾಂಕ 11.05.15 ಬೆಳಿಗ್ಗೆ 05:00ಗಂಟೆಯ ಮಧ್ಯಾವಧಿಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ.  ಈ ಬಗ್ಗೆ ಮಣಿಪಾಲ  ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 20/2015  ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

No comments: