Monday, May 11, 2015

Daily Crime Reported As On 11/05/2015 At 07:00 Hrs

ಅಪಘಾತ ಪ್ರಕರಣ
  • ಉಡುಪಿ: ದಿನಾಂಕ 10-05-2015 ರಂದು ಪಿರ್ಯಾದಿ ದೀಪಕ್ ಶೆಟ್ಟಿ ಇವರು ತನ್ನ ಬಾಬ್ತು ಕೆಎ 19 ಎಂ.ಇ. 6302 ನೇ ಕಾರಿನಲ್ಲಿ ತನ್ನ ಪತ್ನಿ ಮತ್ತು  ಸ್ನೇಹಿತ ಜಯಕರ ಶೆಟ್ಟಿ ರವರೊಂದಿಗೆ ಎನ್ ಹೆಚ್ -66 ರಲ್ಲಿ ಕುಂದಾಪುರ ದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದು, ಮಧ್ಯಾಹ್ನ ಸಮಯ ಸುಮಾರು 3-00 ಗಂಟೆಗೆ ಉಡುಪಿ ಬಲಾಯಿಪಾದೆ ಜಂಕ್ಷನ್ ಬಳಿ ಪಿರ್ಯಾದಿದಾರರು ತನ್ನ ಕಾರನ್ನು ನಿಲ್ಲಿಸಿದ್ದು,  ಅಷ್ಟರಲ್ಲಿ ಉಡುಪಿ ಯಿಂದ ಮಂಗಳೂರು ಕಡೆಗೆ  GJ 12 AZ 1430 ನೇ ಟ್ಯಾಂಕರ್ ಚಾಲಕ ಎಂ.ಡಿ. ಶಹಜಾದ್ ಎಂಬತನು ಟ್ಯಾಂಕರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಟ್ಯಾಂಕರನ್ನು ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದುದರಿಂದ ಕಾರಿನ ಹಿಂಬದಿ ಜಖಂಗೊಂಡಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 43/2015 ಕಲಂ. 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾರ್ಕಳ:  ದಿನಾಂಕ 10/05/2015 ರಂದು 17:30 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಜೋಡು ರಸ್ತೆಯ ಬಳಿ ಇರುವ ಸಾರಸ್ವತ ಸೌಧದ ಎದುರು ಹಾದು ಹೋಗುವ ಜೋಡು ರಸ್ತೆ –ಪುಲ್ಕೇರಿ ರಾಜ್ಯ ಹೆದ್ದಾರಿಯಲ್ಲಿ ಜೋಡು ರಸ್ತೆ ಕಡೆಯಿಂದ ಅಟೋರಿಕ್ಷಾ ನಂಬ್ರ KA20A4476 ನೇಯದರ ಚಾಲಕ ಗುರು ಎಂಬಾತನು ತನ್ನ ಬಾಬ್ತು ಅಟೋರಿಕ್ಷಾವನ್ನು ಅತಿವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲ ಬದಿಯಲ್ಲಿ ಚಲಾಯಿಸಿಕೊಂಡು ಬಂದು ಕಾರ್ಕಳ ಬೈಪಾಸ್ ಕಡೆಯಿಂದ ಜೋಡು ರಸ್ತೆ ಕಡೆಗೆ ಪಿರ್ಯಾದಿ ನವನೀತ ಶೆಟ್ಟಿ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ನಂಬ್ರ  KA20Z8630 ನೇ ಯದಕ್ಕೆ ಢಿಕ್ಕಿ ಹೊಡೆದು, ರಸ್ತೆಯಲ್ಲಿ ಮಗುಚಿಬಿದ್ದಾಗ ಅದರ ಚಾಲಕ ಅಟೋರಿಕ್ಷಾದಿಂದ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಅಟೋರಿಕ್ಷಾ ಚಾಲಕನಿಗೆ ಸಾಮಾನ್ಯ ಸ್ವರೂಪದ ಗಾಯಗೊಂಡಿರುತ್ತಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 49/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾರ್ಕಳ:  ದಿನಾಂಕ 10/05/2015 ರಂದು 16:00 ಗಂಟೆಗೆ ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಬೈಲೂರು ಪೇಟೆಯಲ್ಲಿರುವ ರಚನಾ ಕಾಂಪ್ಲೆಕ್ಸ್ ಎದುರು ಹಾದು ಹೋಗುವ ಉಡುಪಿ- ಕಾರ್ಕಳ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಬಸ್ಸು ನಂಬ್ರ KA19D1415 ನೇಯದರ ಚಾಲಕ ಸುನೀಲ್ ಲೋಬೋ ಎಂಬವರು ತಮ್ಮ ಬಾಬ್ತು ಬಸ್ಸನ್ನು ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಅತಿವೇಗ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿದ್ದ ಮೆಸ್ಕಾಂ ಇಲಾಖೆಗೆ ಸೇರಿದ ಮೂರು ವಿದ್ಯುತ್ ಕಂಬಗಳಿಗೆ ಢಿಕ್ಕಿ ಹೊಡೆದು ಜಖಂಗೊಳಿಸಿ ಮೆಸ್ಕಾಂ ಇಲಾಖೆಗೆ ಸುಮಾರು 30,000/- ರೂಪಾಯಿ ನಷ್ಠವನ್ನುಂಟು ಮಾಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 50/2015 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾಪು: ದಿನಾಂಕ 10-05-2015 ರಂದು ಪಿರ್ಯಾದಿ ಸುಬ್ರಹ್ಮಣ್ಯ ಆಚಾರ್ಯ ಇವರು ತಮ್ಮ ಬಾಬ್ತು ಮೋಟಾರ್‌ ಸೈಕಲ್‌ ನಂಬ್ರ ಕೆ.ಎ. 20 ಇಸಿ8925 ನೇದರಲ್ಲಿ ಸವಾರಿ  ಮಾಡಿಕೊಂಡು ಕಾಪು ಪೇಟೆ ಯಿಂದ ಕಳತ್ತೂರು ತಮ್ಮ ಮನೆ ಕಡೆಗೆ ಕಾಪು ಮಂಚಕಲ್‌ ರಸ್ತೆಯ ಬದಿಯಲ್ಲಿ ಹೋಗುತ್ತಿರುವಾಗ ಮಜೂರು ಸತ್ಯದೇವತೆ ದೈವಸ್ಥಾನದ ಬಳಿ ತಲುಪುವಷ್ಟರಲ್ಲಿ ಹಿಂದುಗಡೆಯಿಂದ ಅಂದರೆ ಮಜೂರಿನಿಂದ ಮಂಚಕಲ್‌ ಕಡೆಗೆ ಹೋಗುವ ಸ್ಕೂಟರ್‌ ಸವಾರನು ತನ್ನ ಸ್ಕೂಟರನ್ನು ಅತಿವೇಗ ಹಾಗೂ ಅಜಾಗರೂಕತೆ, ನಿರ್ಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಸವಾರಿ ಮಾಡಿಕೊಂಡಿದ್ದ ಮೋಟಾರ್‌ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು  ಹತೋಟಿ ತಪ್ಪಿ  ಮೋಟಾರ್‌ ಸೈಕಲ್‌ ಸಮೇತ  ಡಾಮಾರು ರಸ್ತೆಗೆ ಬಿದ್ದು ಗಾಯವಾಗಿರುವುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 94/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: