Sunday, May 10, 2015

Daily Crime Reported As On 10/05/2015 At 07:00 Hrs


 ಅಪಹರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ನಿಂಗಪ್ಪ ಹೂಂಡದ, 48 ವರ್ಷ, ತಂದೆ:- ಬಸಪ್ಪ ಹೂಂಡದ ,ವಾಸ:- ಕಾಳಿದಾಸ ನಗರ, ಕುಂದಗೋಳ ಅಂಚೆ ಮತ್ತು ಗ್ರಾಮ, ಧಾರವಾಡ ಜಿಲ್ಲೆ.  ಇವರು ನಡ್ಸಾಲು ಗ್ರಾಮದ ನಾಗರಾಜ ಎಸ್ಟೇಟ್ ಬಳಿ ಇರುವ ಪಾಂಡುರಂಗ ಮರದ ಮಿಲ್ಲಿನಲ್ಲಿ ಮರದ ಕೆಲಸ ಮಾಡಿಕೊಂಡಿದ್ದು, ಮಿಲ್ಲಿನ ಪಕ್ಕದಲ್ಲಿ ಕುಟುಂಬದೊಂದಿಗೆ ವಾಸ ಮಾಡಿಕೊಂಡಿರುತ್ತಾರೆ. ದಿನಾಂಕ. 08.05.2015 ರಂದು ಮಧ್ಯಾಹ್ನ 13:30 ಗಂಟೆಗೆ ಇವರ ಮಗನಾದ ಬಸವರಾಜ್ 16 ವರ್ಷ ಎಂಬವರು ವಾಸ ಮಾಡಿ ಕೊಂಡಿರುವ ಮನೆಯಿಂದ ಯಾವುದೋ ಕಾರಣಕ್ಕೆ ಸ್ವ-ಇಚ್ಚೆಯಿಂದ ಮನೆ ಬಿಟ್ಟು ಹೋಗಿದ್ದು ಅಥವಾ ಆತನನ್ನು ಯಾರೋ ವ್ಯಕ್ತಿ ಪಿರ್ಯಾದಿದಾರರಿಗೆ ತಿಳಿಯದ ರೀತಿಯಲ್ಲಿ ಸ್ಥಳದಿಂದ ಅಪಹರಿಸಿಕೊಂಡು ಹೋಗಿರುವುದಾಗಿದೆ ಈ ಬಗ್ಗೆ ನಿಂಗಪ್ಪ ಹೂಂಡದ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 64/15 ಕಲಂ:363 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

  • ಶಂಕರನಾರಾಯಣ: ದಿನಾಂಕ 09-05-2015 ರಂದು 19:00 ಗಂಟೆಗೆ ಕುಂದಾಪುರ ತಾಲೂಕು ಸಿದ್ದಾಫುರ ಗ್ರಾಮದ ಜನ್ಸಾಲೆ ಎಂಬಲ್ಲಿರುವ ಅಂಗಡಿಯೊಂದರ ಹಿಂದುಗಡೆ  ತೆರೆದ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯವನ್ನು ಹೊಂದಿ ಮಾರಾಟ ಮಾಡುತ್ತಿದ್ದ ಆರೋಪಿತ ಉಮೇಶ ಶೆಟ್ಟಿ (28)ತಂದೆ: ಚಿಕ್ಕಯ್ಯ ಶೆಟ್ಟಿ ವಾಸ; ಜನ್ಸಾಲೆ ಸಿದ್ದಾಫುರ ಗ್ರಾಮ ಕುಂದಾಪುರ ತಾಲೂಕು ರವರನ್ನು ಶಂಕರನಾರಾಯಣ ಪೊಲೀಸ್‌ ಠಾಣಾ ಪಿ.ಎಸ್‌.ಐ ರವರು  ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿ ಮಹಜರು ಮುಖೇನ ಆರೊಪಿಯನ್ನು ದಸ್ತಗಿರಿ ಮಾಡಿ HAYWARDS  CHEERS WHICKY 90 ML  ಎಂದು ಬರೆದ ಸ್ಯಾಚೆಟ್‌ಗಳು-65 ಹಾಗೂ HAYWARDS  CHEERS WHICKY 90 ML ಖಾಲಿ ಸ್ಯಾಚೆಟ್‌‌‌‌ಗಳು-7 ಹಾಗೂ ನಗದು ಹಣ 440/- ರೂಪಾಯಿಯನ್ನು ಸ್ವಾಧಿನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 94 /15 ಕಲಂ: 32, 34 ಕೆ.ಇ ಕಾಯಿದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹುಡುಗಿಕಾಣೆ ಪ್ರಕರಣ

  • ಉಡುಪಿ ನಗರ ಪಿರ್ಯಾದಿ ಮುತ್ತು (56), ಗಂಡ: ಸುಂದರ, ವಾಸ ಉಮಾಮಹೇಶ್ವರ ಭಜನಾ ಮಂದಿರದ ಹತ್ತಿರ ಅಂಬಲಪಾಡಿ  ಗ್ರಾಮ ಉಡುಪಿ ಇವರ ಮಗಳು ಸರೋಜಾ ಎಂಬವರು  ಉಡುಪಿಯ ಹೈಟೆಕ್ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡಿಕೊಂಡಿರುತ್ತಾರೆ ದಿನಾಂಕ 04/05/2015 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಪಿರ್ಯಾದಿದಾರರ ಮಗಳು ಸರೋಜರವರು ನೆರೆಮನೆಯವರಲ್ಲಿ ಸುಮಾರು 10 ಗಂಟೆ ಸಮಯಕ್ಕೆ ತಾನು ನಿಶ್ಚಿತಾರ್ಥದ ಬಗ್ಗೆ ಉಡುಗೊರೆ ತೆಗೆದುಕೊಂಡು ಬರುವರೇ ಹೋಗುತ್ತೇನೆ ಎಂಬುದಾಗಿ ಹೇಳಿ ಮನೆಯಿಂದ ಹೋಗಿದ್ದು ಸಂಜೆಯಾದರೂ ಮನೆಗೆ ಬಾರದೇ ಇದ್ದು ಪಿರ್ಯಾದಿದಾರರು ಸರೋಜರವರ ಮೊಬೈಲ್ ಗೆ ಫೋನ್ ಮಾಡಿದ್ದು ಸ್ವಿಚ್ ಆಫ್ ಆಗಿರುತ್ತದೆ ಈ ಬಗ್ಗೆ ಪಿರ್ಯಾದಿದಾರರ ಸಂಬಂದಿಕರ ಮನೆಯಲ್ಲಿ ಹಾಗೂ ನೆರೆಕೆರೆಯವರಲ್ಲಿ ವಿಚಾರಿಸಿದಲ್ಲಿ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಮುತ್ತು ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 104/2015  ಕಲಂ ಹುಡುಗಿ ಕಾಣೆ ಕಾಯಿದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ:

  • ಗಂಗೊಳ್ಳಿ ದಿನಾಂಕ 09/05/2015 ರಂದು ಪಿರ್ಯಾದಿ ಉಮ್ಮರ್‌ ಬಿಲಾಲ್‌ (29) ತಂದೆ: ಅಬ್ದುಲ್‌ ರೆಹಮಾನ್‌ ತೋನ್ಸೆ, ಮುಗ್ಗದುಂ  ಕಾಲೋನಿ, ಹಿಲಾಲ್‌ ಸ್ರ್ಟೀಟ್‌‌, ಭಟ್ಕಳ. ರವರು ತಮ್ಮ ಮೋಟಾರು ಸೈಕಲ್‌ ನಂಬ್ರ ಕೆಎ-47-ಕೆ-5824 ನೇದರಲ್ಲಿ ಮುಸ್ತಫಾರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಭಟ್ಕಳದಿಂದ ತ್ರಾಸಿ ಕಡೆಗೆ ರಾಹೆ-66 ರಲ್ಲಿ ಬರುತ್ತಾ ಸಮಯ 11.45 ಗಂಟೆಗೆ ತ್ರಾಸಿ ಕ್ಲಾಸಿಕ್‌ ಆಡಿಟೋರಿಯಮ್‌ ಹಾಲ್‌ ಬಳಿ ಪಿರ್ಯಾದಿದಾರರು ಸೂಚನೆ ಕೊಟ್ಟು ಮೋಟಾರು ಸೈಕಲನ್ನು ಬಲಕಡೆಗೆ ಅಂದರೆ ಕ್ಲಾಸಿಕ್‌ ಆಡಿಟೋರಿಯಮ್‌ ಹಾಲ್‌ ಕಡೆಗೆ ತಿರುಗಿಸಿದಾಗ ಹಿಂದಿನಿಂದ ಬಂದ ಟೆಂಪೋ ನಂಬ್ರ ಕೆಎ-47-3908 ನೇದರ ಚಾಲಕ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರು ಬೈಕ್‌ ಸಮೇತ ರಸ್ತೆಗೆ ಬಿದ್ದು, ಮೊಣಗಂಟಿಗೆ, ಕಾಲಿನ ಗಂಟಿಗೆ ತರಚಿದ ಗಾಯ ಹಾಗೂ ಸಹ ಸವಾರ ಮುಸ್ತಾಫಾ ರವರಿಗೆ ಬಲ ಕಾಲಿನ ತೊಡೆಗೆ ಮೂಳೆ ಮುರಿತದ ಗಾಯವಾಗಿರುವುದಾಗಿದೆ. ಈ ಬಗ್ಗೆ ಉಮ್ಮರ್‌ ಬಿಲಾಲ್‌ ರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 56 /2015   ಕಲಂ279, 337, 338  ಐಪಿಸಿ  ಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: