Saturday, May 09, 2015

Daily Crime Reported As On 09/05/2015 At 07:00 Hrs

ಅಪಘಾತ ಪ್ರಕರಣ
  • ಕಾರ್ಕಳ : ದಿನಾಂಕ 08/05/2015 ರಂದು 17:15 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ವಿನ್ಯಾಸ್ ಹಾರ್ಡ್‌‌ ವೇರ್ ಸಮೀಪ ಪಿರ್ಯಾದಿ ಭರತ್ ಎನ್. ಶೆಟ್ಟಿ ಇವರು ತನ್ನ ಬಾಬ್ತು Ford ECO sports ಕಾರು ನಂಬ್ರ KA20MA815 ನೇಯದನ್ನು ಜೋಡು ರಸ್ತೆ ಕಡೆಯಿಂದ ಕಾರ್ಕಳ ಪೇಟೆ ಕಡೆಗೆ ಕಾರ್ಕಳ-ಜೋಡುರಸ್ತೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ರಸ್ತೆಯ ತೀರಾ ಎಡಬದಿಯಲ್ಲಿ ಚಲಾಯಿಸಿಕೊಂಡು ಹೋಗುವಾಗ ರಸ್ತೆಯ ಬಲಬದಿಯಿಂದ ಅಸ್ಲಾಂ ಎಂಬವರು ಆಕ್ಟಿವಾ ಸ್ಕೂಟರ್ ನಂಬ್ರ KA20S1085 ನೇಯದನ್ನು ಏಕಾಏಕಿ ರಸ್ತೆಯ ಬಲಬದಿಯಿಂದ ರಸ್ತೆಯ ತೀರಾ ಎಡ ಬದಿಗೆ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದುದಾರರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಆಕ್ಟಿವಾ ಸ್ಕೂಟರ್ ಸವಾರನ ಮುಂದಲೆಗೆ ಹಾಗೂ ಮುಖಕ್ಕೆ ರಕ್ತಗಾಯವಾಗಿದ್ದು ಎರಡೂ ವಾಹನಗಳು ಜಖಂಗೊಂಡಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 48/2015 ಕಲಂ 279, 337 ಐಪಿಸಿಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬೈಂದೂರು: ಪಿರ್ಯಾಧಿ ನಾಗೇಶ್ ಜಟ್ಟ ನಾಯ್ಕ ಇವರು ದಿನಾಂಕ 08/05/2015 ರಂದು ಸಂತೋಷ ಮಂಜಪ್ಪ ನಾಯ್ಕ ಎಂಬುವವರು ಸವಾರಿ ಮಾಡುತ್ತಿದ್ದ ಕೆ.ಎ 47 ಎಲ್‌ 6548 ನೇ ಮೋಟಾರ್‌ ಸೈಕಲ್‌ನಲ್ಲಿ ಸಹ ಸವಾರರಾಗಿ ಕುಳಿತುಕೊಂಡು ಕುಂದಾಪುರದಿಂದ ಮುರ್ಡೇಶ್ವರದ ಕಡೆಗೆ ಹೊರಟು ಮದ್ಯಾಹ್ನ 02:30 ಗಂಟೆಯ ಸಮಯಕ್ಕೆ  ಕುಂದಾಪುರ ತಾಲೂಕು ಉಪ್ಪುಂದ ಗ್ರಾಮದ ಉಪ್ಪುಂದ ಜಂಕ್ಷನ್‌ ಬಳಿ ರಾಹೆ 66 ರಲ್ಲಿ ಹೋಗುತ್ತಿರುವ ಸಮಯ ಕಂಚಿಕಾನ್‌ ಕಡೆಯಿಂದ ಬರುವ ರಸ್ತೆಯಿಂದ ರಾಹೆ 66 ಕ್ಕೆ  ಕೆ.ಎ 20 ಇಇ 9086 ನೇ ಮೋಟಾರ್‌ ಸೈಕಲನ್ನು ಅದರ ಸವಾರನು ಸಹಸವಾರನನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್‌ ಸೈಕಲ್‌ನ ವೇಗವನ್ನು ತಗ್ಗಿಸದೇ ಹಾರ್ನ ಹಾಕದೇ ಒಮ್ಮೇಲೆ ಚಲಾಯಿಸಿದ ಪರಿಣಾಮ ಸದ್ರಿ ಬೈಕ್‌ ಪಿರ್ಯಾಧಿದಾರರು ಸಹಸವಾರರಾಗಿ ಕುಳಿತುಕೊಂಡು ಹೋಗುತ್ತಿದ್ದ ಕೆ.ಎ 47 ಎಲ್‌ 6548 ನೇ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಬೈಕ್‌ನಲ್ಲಿದ್ದವರು ಬೈಕ್‌ ಸಮೇತ ರಸ್ತೆಗೆ ಬಿದ್ದು ಪಿರ್ಯಾಧಿದಾರರಿಗೆ ಎಡಕಾಲ ಹೆಬ್ಬೆರಳಿಗೆ ಗಾಯವಾಗಿರುತ್ತದೆ ಹಾಗೂ ಸಂತೋಷ ಮಂಜಪ್ಪ ನಾಯ್ಕರಿಗೆ ಮುಖಕ್ಕೆ ಹಾಗೂ ಕಾಲಿಗೆ ತೀವೃತರಹದ ರಕ್ತ ಗಾಯವಾಗಿರುತ್ತದೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 111/2015 ಕಲಂ : 279,337, 338 ಐಪಿಸಿಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರೇ ಪ್ರಕರಣ
  • ಕಾರ್ಕಳ : ಪಿರ್ಯಾಧಿ ಬಾಬು ಸಾಬ ಇಮಾಮ ಸಾಬ ನದಾಫ ಇವರು  ಕಾರ್ಕಳ ತಾಲೂಕು ಕಸಬಾ ಗ್ರಾಮದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಮುಖ್ಯ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ದಿನಾಂಕ: 05/05/2015 ರಂದು ಸಂಜೆ  7:00 ಗಂಟೆ ಸಮಯಕ್ಕೆ  ಯಾರೋ ಅಪರಿಚಿತ ವ್ಯಕ್ತಿ  ಆತನ ಮೊಬೈಲ್ ಮೂಲಕ ಪಿರ್ಯಾಧಿದಾರರ ಮೊಬೈಲ್ ಗೆ  ಕರೆ ಮಾಡಿ ತಾನು ಬೆಂಗಳೂರಿನಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಮುಖ್ಯ ಕಚೇರಿಯಿಂದ ಮಾತಾನಾಡುವುದಾಗಿ ಹೇಳಿ ಪಿರ್ಯಾಧಿದಾರರ ಎ.ಟಿ.ಎಂ ನ ಡೆಬಿಟ್ ಕಾರ್ಡ್‌ ಸಿಕ್ರೇಟ್ ಕೋಡ್ ನಂಬ್ರ ಪಡೆದು ಪಿರ್ಯಾಧಿದಾರರ ಸಿಂಡಿಕೇಟ್ ಬ್ಯಾಂಕ್ ನ ಉಳಿತಾಯ ಖಾತೆ ಯಿಂದ  ಹಂತ ಹಂತವಾಗಿ ಒಟ್ಟು ರೂಪಾಯಿ 19,998/- ನಗದನ್ನು ಅನಧಿಕೃತವಾಗಿ ಡ್ರಾ ಮಾಡಿ ಪಿರ್ಯಾದುದಾರರಿಗೆ ವಂಚಿಸಿದ್ದಾಗಿದೆಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 47/15 ಕಲಂ 66 (D) IT Act & sec 420 ಐಪಿಸಿಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: