Friday, May 08, 2015

Daily Crime Reported As On 08/05/2015 At 17:00 Hrsಜೀವ ಬೆದರಿಕೆ ಪ್ರಕರಣ

  • ಶಂಕರನಾರಾಯಣ:ದಿನಾಂಕ:05/05/2015 ರಂದು ರಾತ್ರಿ ಪಿರ್ಯಾದಿದಾರರಾದ ಶ್ರೀಮತಿ ನಾಗರತ್ನ (20) ಗಂಡ:ಶ್ರೀನಿವಾಸ ವಾಸ:ವಾಟೆಬಚಲು, ಹಳ್ಳಿಹೊಳೆ ಗ್ರಾಮ, ಕುಂದಾಪುರ ತಾಲೂಕು ಎಂಬವರು ತನ್ನ ಗಂಡನ ಮನೆಯಲ್ಲಿ ಟಿವಿ ನೋಡುವಾಗ ಅವರ ಮೈದುನನಾದ ಉಮೇಶ ಎಂಬವರು ಬೈದಿದ್ದು, ಈ ಬಗ್ಗೆ ಅವರು ಬೇಸರಗೊಂಡು, ದಿನಾಂಕ:06-05-15 ರಂದು ಬೆಳಿಗ್ಗೆ 10:00 ಗಂಟೆಗೆ ಅವರ ತಾಯಿಯ ಮನೆಗೆ ಹೊರಡುವಾಗ ಮೈದುನನಾದ ಉಮೇಶನು ಅಡ್ದಗಟ್ಟಿ ಮರದ ಕೋಲಿನಿಂದ ಹಲ್ಲೆ ಮಾಡಿದ್ದು ಇದರಿಂದ ಶ್ರೀಮತಿ ನಾಗರತ್ನರಿಗೆ ಎಡಕಾಲು ಹಾಗೂ ಕೈ ಗೆ ರಕ್ತ ಗಾಯವಾಗಿರುತ್ತದೆ ಹಾಗೂ ಅಲ್ಲಿಗೆ ಅತ್ತೆ ವಿಶಾಲ, ಭಾವ ಸುರೇಶ ಇವರು ಬಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ.ಈ ಬಗ್ಗೆ ಶ್ರೀಮತಿ ನಾಗರತ್ನರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 88/15 ಕಲಂ:341, 324, 504, 506, ಜೊತೆಗೆ 34  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   

ಕೊಲೆ ಪ್ರಕರಣ

  • ಪಡುಬಿದ್ರಿ:ದಿನಾಂಕ:08/05/2015 ರಂದು ಬೆಳಿಗ್ಗೆ 08:00 ಗಂಟೆಗೆ ಪಿರ್ಯಾದಿದಾರರಾದ ಸಂದೇಶ್ ಆರ್.ಶೆಟ್ಟಿ, (29) ತಂದೆ:ರಘುನಾಥ ಶೆಟ್ಟಿ, ವಾಸ:ತೋಟಾ ಮನೆ, ಕೆರೆಮೆ, ಪಡುಬಿದ್ರಿ ಪೋಸ್ಟ್, ಪಾದೆಬೆಟ್ಟು ಗ್ರಾಮ,  ಉಡುಪಿ ತಾಲೂಕು ಮತ್ತು ಜಿಲ್ಲೆರವರು ಪಾದೆಬೆಟ್ಟು ಗ್ರಾಮದ ಕೆರಮ ರಸ್ತೆಯಲ್ಲಿ ಹೋಗುತ್ತಿರುವಾಗ ಬಿಕ್ರಿಗುತ್ತು ಹಾಡಿ ಕಡೆಯಿಂದ ಯಾವುದೋ ದುರ್ವಾಸನೆ ಬರುತ್ತಿದ್ದು ಏನೆಂದು ತಿಳಿಯುವರೇ ಸಂದೇಶ್ ಆರ್.ಶೆಟ್ಟಿರವರು ಹಾಡಿಯ ಒಳಗಡೆ ಹೋಗಿ ನೋಡುವಾಗ ಪೊದೆಯ ನಡುವಿನಲ್ಲಿ ಯಾವುದೋ ಮನುಷ್ಯನ ತಲೆಯನ್ನು ಬಿಳಿ ಪ್ಲಾಸ್ಟಿಕ್ ತೊಟ್ಟೆಯಿಂದ ಕಟ್ಟಿರುವುದು ಹಾಗೂ ಹಳದಿ ಬಣ್ಣದ ನೈಲನ್ ಹಗ್ಗದಿಂದ ಬಿಗಿದಿರುವುದು ಕಂಡು ಬಂದಿದ್ದು, ಅದರ ಪಕ್ಕದಲ್ಲಿ ಅಲ್ಲಲ್ಲಿ ಎಲುಬುಗಳು ಹರಡಿ ಬಿದ್ದಿರುವುದು ಮತ್ತು ಅಲ್ಲಿ ಒಂದು ನೀಲಿ ಬಣ್ಣದ ಪ್ಯಾಂಟು ಬಿದ್ದಿರುವುದು ನೋಡಿದ್ದು, ಸದ್ರಿ ಅಂಗಾಗಗಳು ಇದ್ದ ಸ್ಥಳದಲ್ಲಿ ಹಳದಿ ಬಣ್ಣದ ನೈಲಾನ್ ಹಗ್ಗ ಇರುತ್ತದೆ. ತಲೆಯನ್ನು ಪ್ಲಾಸ್ಟಿಕ್ ಕವರಿನಿಂದ ಸುತ್ತಿರುವುದರಿಂದ ಸ್ಥಳದಲ್ಲಿ ನೈಲಾನ್ ಹಗ್ಗ ಇರುವುದನ್ನು ನೋಡಿ ಸಂದೇಶ್ ಆರ್.ಶೆಟ್ಟಿರವರು ಸಂಶಯ ಗೊಂಡಿದ್ದು, ಯಾರೋ ದುಷ್ಕರ್ಮಿಗಳು ಯಾವುದೋ ವ್ಯಕ್ತಿಯನ್ನು ಯಾವುದೋ ಉದ್ದೇಶಕ್ಕಾಗಿ ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ತಲೆಯನ್ನು ಪ್ಲಾಸ್ಟಿಕ್ ಕವರ್‌ನಿಂದ ಕಟ್ಟಿರುವುದಾಗಿದೆ. ಈ ಬಗ್ಗೆ ಸಂದೇಶ್ ಆರ್.ಶೆಟ್ಟಿರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 60/15 ಕಲಂ: ಕಲಂ:302, 201 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 07.05.2015 ರಂದು 17:35 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಲಕ್ಷ್ಮೀಂದ್ರ ನಗರ ಎಂಬಲ್ಲಿ ಉಡುಪಿ-ಮಣಿಪಾಲ ಏಕಮುಖ ರಸ್ತೆಯಲ್ಲಿ ಕಾರು ನಂಬ್ರ ಕೆಎ 20 ಪಿ 5848 ನೇ ಚಾಲಕನು ತನ್ನ ಬಾಬ್ತು ಕಾರನ್ನು ಉಡುಪಿ ಕಡೆಯಿಂದ ಮಣಿಪಾಲ ಕಡೆಯಿಂದ ಅಜಾಗರೂಕತೆ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಬಂದು ತನ್ನ ಎದುರುಗಡೆಯಿಂದ ಬಲಕ್ಕೆ ತಿರುಗುತ್ತಿದ್ದ ಮೊಪೆಡ್ ನಂಬ್ರ ಕೆಎ 20 ವೈ 4081 ಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೊಪೆಡ್ ಸವಾರ ಮೋನಿಚ್ಚನ್ ಎಂಬವರಿಗೆ ತೀವೃ ಗಾಯ ಆಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 71/15  ಕಲಂ 279, 338 ಐಪಿಸಿಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕುಂದಾಪುರ : ದಿನಾಂಕ 07/05/2015 ರಂದು ಸಮಯ ಸುಮಾರು ಸಂಜೆ 5:00 ಗಂಟೆಗೆ ಕುಂದಾಪುರ  ತಾಲೂಕು,  ಕಾವ್ರಾಡಿ  ಗ್ರಾಮದ  ವಾಲ್ತೂರು  ಎಂಬಲ್ಲಿ ಆಪಾದಿತ ರಾಘವೇಂದ್ರ ಎನ್  ಎಂಬವರು KA20-C-3095ನೇ ಟಿಪ್ಪರ್  ಲಾರಿಯನ್ನು  ಕೊಲ್ಲೂರು  ಕಡೆಯಿಂದ  ಅಂಪಾರು ಕಡೆಗೆ  ಅತೀವೇಗ  ಹಾಗೂ ಅಜಾಗರುಕೆಯಿಂದ ಚಲಾಯಿಸಿಕೊಂಡು ರಸ್ತೆಯ ಬಲಕ್ಕೆ ಬಂದು, ಪಿರ್ಯಾದಿ ಶಿವಕುಮಾರ್ ಇವರು  ಆಂಪಾರು  ಕಡೆಯಿಂದ ಕೊಲ್ಲೂರು ಕಡೆಗೆ  ಚಲಾಯಿಸಿಕೊಂಡು  ಹೋಗುತ್ತಿದ್ದ  AP02-AA-9819ನೇ ಕಾರಿಗೆ ಎದುರುಗಡೆಯಿಂದ  ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗದ ಬಲಬದಿ ಟಯರ್‌ ಸಿಡಿದು ಕಾರು ನಿಯಂತ್ರಣ ತಪ್ಪಿ  ರಸ್ತೆಯ ಬಲಬದಿಯ ಆಳದ ಗದ್ದೆಗೆ ಇಳಿದು  ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಲ್ಪನಾ ರವರ ಬಲಕೈಗೆ  ಮೂಳೆ ಮುರಿತದ  ಗಾಯ, ನಿತೀಶ  ಹಾಗೂ  ಪ್ರಜ್ಞಾ ರವರಿಗೆ  ಗಾಯ ನೋವು ಉಂಟಾಗಿ ಮಣಿಪಾಲದ  ಕೆ.ಎಂ.ಸಿ  ಆಸ್ಪತ್ರೆಯಲ್ಲಿ  ಚಿಕಿತ್ಸೆಗೆ  ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 50/15 ಕಲಂ :279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಹೆಬ್ರಿ: ಪಿರ್ಯಾದಿ ಶಿವರಾಮ ಶೆಟ್ಟಿ ಇವರು ದಿನಾಂಕ: 06-05-2015 ರಂದು  ಸುಮಾರು 19:30  ಗಂಟೆಯ ಸಮಯಕ್ಕೆ ವರಂಗ ಗ್ರಾಮದ ಮುನಿಯಾಲು ಸರ್ಕಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡಿರುವಾಗ್ಯೆ  ಸತೀಶ ಶೆಟ್ಟಿ ಎಂಬಾತ ಜಾಗದ ತಕರಾರು ಬಗ್ಗೆ ವಿಚಾರಿಸಿದ್ದು  ಅವರೊಳಗೆ ಗಲಾಟೆಯಾಗಿದ್ದು ಆಗ ಸತೀಶ ಶೆಟ್ಟಿ ಪಿರ್ಯಾದಿದಾರರನ್ನು ದೂಡಿ ಹಾಕಿ ಒಂದು ಸೋಡಾ ಬಾಟಲಿಯಿಂದ ತಲೆಗೆ ಹೊಡೆದು ಸಾದಾ ಸ್ವರೂಪದ  ಗಾಯ ಉಂಟು ಮಾಡಿದ್ದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 36/2015 ಕಲಂ: 323, 324 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಸುಲಿಗೆ ಪ್ರಕರಣ

  • ಕುಂದಾಪುರ: ಕುಂದಾಪುರ ತಾಲೂಕು ಕುಂದಾಪುರ ಕಸಭಾ ಗ್ರಾಮದ ಕುಂದಾಪುರ ಹೊಸ ಬಸ್ ತಂಗುದಾಣದ ಬಳಿ ದಿನಾಂಕ 07/05/2015 ರಂದು ಸಮಯ ಸುಮಾರು ರಾತ್ರಿ 08.15 ಗಂಟೆಗೆ ಪಿರ್ಯಾದಿ ಗಣೇಶ ನಾಯಕ್ ಇವರು ತಮ್ಮ ಬಾಬ್ತು ಅಂಗಡಿಯಲ್ಲರುವಾಗ ಇಬ್ಬರು ವ್ಯಕ್ತಿಗಳು ಮೋಟಾರು ಸೈಕಲ್ ನಲ್ಲಿ  ಅವರ  ಅಂಗಡಿಯ ಬಳಿಗೆ ಬಂದಿದ್ದು ಅದರಲ್ಲಿ  ಒಬ್ಬನ್ನು ಪಿರ್ಯಾದಿದಾರರ ಬಾಬ್ತು ಅಂಗಡಿಯ ಒಳಗೆ  ಬಂದು ಸಿಗರೇಟನ್ನು ಕೇಳಿದ್ದು  ಅದಕ್ಕೆ ಪಿರ್ಯಾದಿದಾರರು ಸಿಗರೇಟನ್ನು ಕೊಡುತ್ತಿರುವಾಗ ಆ ವ್ಯಕ್ತಿಯು ಪಿರ್ಯಾದದಾರರ ಕುತ್ತಿಗೆಯಲ್ಲಿದ್ದ ಸುಮಾರು ಒಂದೂವರೆ ಪವನ್ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಆತನ ಜೊತೆ ಬಂದಿದ್ದ ಇನ್ನೊಬ್ಬ ವ್ಯಕ್ತಿಯೊಂದಿಗೆ ಮೋಟಾರು ಸೈಕಲ್ ನಲ್ಲಿ ಪರಾರಿಯಾಗಿದ್ದು , ಆತನು ಎಳೆದುಕೊಂಡು ಹೋಗಿರುವ ಚಿನ್ನದ ಸರದ ಮೌಲ್ಯ ಸುಮಾರು 30,000 ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 129/2015 ಕಲಂ : 392 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: