Friday, May 08, 2015

Daily Crime Reported As On 08/05/2015 At 07:00 Hrsಅಸ್ವಾಭಾವಿಕ ಮರಣ ಪ್ರಕರಣ:

  • ಉಡುಪಿ ನಗರ: ಪಿರ್ಯಾದಿ ಡಾ/ ವೀಣ ಕುಮಾರಿ ಯು ವೈದ್ಯಾಧಿಕಾರಿ ಸರಕಾರಿ ಆಸ್ವತ್ರೆ ಅಜ್ಜರಕಾಡು ಉಡುಪಿ ಇವರು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 07/05/2015 ರಂದು ಮಧ್ಯಾಹ್ನ 2:30 ಗಂಟೆಗೆ ಒಬ್ಬವ್ಯಕ್ತಿ ಸುಮಾರು 35 ವರ್ಷ ಪ್ರಾಯದ ಕಣ್ಣನ್ ಎಂಬವರು ತೀವ್ರ ಎದೆನೋವು ಎಂದು ಹೇಳುತ್ತ ಸರಕಾರಿ ಜಿಲ್ಲಾ ಆಸ್ಪತ್ರೆ ಅಜ್ಜರಕಾಡಿಗೆ ಬಂದಿದ್ದು ಚಿಕಿತ್ಸೆ ನೀಡಿ ಐಸಿಯು ವಿಭಾಗಕ್ಕೆ ದಾಖಲಿಸಿದ್ದು ದಿನಾಂಕ 07/05/2015 ರಂದು ಚಿಕಿತ್ಸೆ ಫಲಕಾರಿಯಾಗಿದೆ ಸಮಯ ಸುಮಾರು ಮಧ್ಯಾಹ್ನ 3:20 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಯುಡಿಆರ್ ನಂಬ್ರ 19/2015 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹುಡುಗಿ ಕಾಣೆ ಪ್ರಕರಣ:

  • ಕಾಪು: ಪಿರ್ಯಾದಿ: ರೋಬರ್ಟ್ ಫೆರ್ನಾಂಡಿಸ್ (66) ತಂದೆ: ದಿ. ಬೆಸ್ತಮ್ ಫರ್ನಾಂಡಿಸ್ ವಾಸ: ಕಡವಿನ ಬಾಗಿಲು ಉದ್ಯಾವರ  ರವರು ದಿನಾಂಕ 06.04.2015 ರಂದು ಸುಮಾರು 13.00 ಗಂಟೆಗೆ ಹಲ್ಲು ನೋವಿದೆ ಆಸ್ಪತ್ರೆಗೆ ಹೋಗಿ ಹಲ್ಲು ಕೀಳಿಸಿಕೊಂಡು ಬರುವುದಾಗಿ ತನ್ನ ತಾಯಿಯ ಬಳಿ ಹೇಳಿ ಮನೆಯಾದ ಉದ್ಯಾವರ ಗ್ರಾಮದ ಕಡವಿನ ಬಾಗಿಲು ಎಂಬಲಿಂದ ಹೋಗಿದ್ದು ಈ ತನಕ ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ  ಆಸ್ಪತ್ರೆಯಲ್ಲಿ ಹೋಗಿ ವಿಚಾರಿಸಿದ್ದು, ಸಂಬಂದಿಕರ ಮನೆಯಲ್ಲಿ ಕೂಡಾ ವಿಚಾರಿಸಿದಲ್ಲಿಯೂ ಪಿರ್ಯಾದಿಯ ಮಗಳ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ.  ಈ ಬಗ್ಗೆ ಕಾಪು: ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 91/2015 ಕಲಂ ಹುಡುಗಿ ಕಾಣೆ  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ:

  • ಕೋಟ: ಪಿರ್ಯಾದಿ ಇಬ್ರಾಹಿಂ(60) ತಂದೆ:ದಿ.ಅಬ್ದುಲ್ಲಾ ,ವಾಸ:ಕೋಟತಟ್ಟು ಪಡುಕೆರೆ,ಉಡುಪಿ ತಾಲೂಕು ಇವರ ಮೊಮ್ಮಗ ಮಹಮ್ಮದ್ ಆಸಿರ್(12) ದಿನಾಂಕ:07/05/2015 ರಂದು ಬೆಳಿಗ್ಗೆ 09:30 ಗಂಟೆಗೆ ಕೋಟತಟ್ಟು ಗ್ರಾಮದ ಪಡುಕೆರೆ ಎಂಬಲ್ಲಿರುವ ತನ್ನ ಮನೆಯ ಎದುರಿನ ರಸ್ತೆಯಲ್ಲಿ ನಿಂತುಕೊಂಡಿರುವಾಗ ಕೆ.ಎ:20 ಎಸ್:2716ನೇ ನಂಬ್ರದ ಮೋಟಾರ್ ಸೈಕಲ್‌ ಸವಾರ ಆತನ ಮೋಟಾರ್ ಸೈಕಲ್‌ನ್ನು ಪಾರಂಪಳ್ಳಿ ಕಡೆಯಿಂದ ಕೋಟ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಎಡಕ್ಕೆ  ಚಲಾಯಿಸಿ ಮಹಮ್ಮದ್ ಆಸಿರ್‌ಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಆತನ  ಕಾಲಿನ ಮೇಲೆ ಮೋಟಾರ್ ಸೈಕಲ್ ಹರಿದ ಪರಿಣಾಮ ಎಡ ಕಾಲಿಗೆ ತೀವ್ರ ತರದ ರಕ್ತಗಾಯ ,ಎಡ ಕೈಗೆ ಮೂಳೆ ಮುರಿತ ಹಾಗೂ ಬಲ ಕಾಲಿನ ಪಾದ ,ಮುಂಗಾಲಿಗೆ ತರಚಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಕೋಟ: ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 93/2015 ಕಲಂ:279,338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬೈಂದೂರು: ದಿನಾಂಕ  06-05-2015 ರಂದು ಫಿರ್ಯಾದಿ ನರಸಿಂಹ ಪೂಜಾರಿ(39) ತಂದೆ-ಬಚ್ಚ ಪೂಜಾರಿ,  ವಾಸ-ಗೋಯಾಡಿ ಮನೆ, ಬೋಳಂಬಳ್ಳಿ, ಕಾಲ್ತೋಡು  ಗ್ರಾಮ, ಕುಂದಾಪುರ ತಾಲೂಕು ಇವರು ಮೋಟಾರ್ ಸೈಕಲ್ ನಂಬ್ರ ಕೆ.ಎ.15-9836 ನೇದರಲ್ಲಿ ತನ್ನ ತಂಗಿಯ ಮಗನಾದ ಅಕ್ಷಯ ನನ್ನು ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಉಪ್ಪುಂದದಿಂದ ಕಾಲ್ತೋಡು ಕಡೆಗೆ ಕಂಚಿಕಾನ್ ರಸ್ತೆಯಾಗಿ ಹೊರಟು ಸಮಯ ಸುಮಾರು ಸಂಜೆ 06-00 ಗಂಟೆಗೆ ಉಪ್ಪುಂದ ಗ್ರಾಮದ ಕಂಚಿಕಾನ್ ಮೋರಿಯ ಸಮೀಪ ತಲುಪುವಾಗ ಫಿರ್ಯಾದಿದಾರರ ವಿರುದ್ಧ ಧಿಕ್ಕಿನಿಂದ ಕೆ.ಎ.20.ಡಿ.1809 ನೇ ಆಟೋರಿಕ್ಷಾವನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರುಕತೆಯಿಂದ ರಸ್ತೆಯ ಬಲಭಾಗಕ್ಕೆ ಚಲಾಯಿಸಿ ಫಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಹಾಗೂ ಅಕ್ಷಯ್ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಫಿರ್ಯಾದಿದಾರರ ಬಲ ಮೊಣಕಾಲಿನ ಗಂಟು, ಪಾದಕ್ಕೆ ರಕ್ತಗಾಯವಾಗಿದ್ದು, ಸಹಸವಾರ ಅಕ್ಷಯನ ಬಲಕಾಲಿಗೆ ಒಳನೋವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 110/2015 ಕಲಂ : 279,337ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: