Friday, April 03, 2015

PRESS NOTE


 
 
  • ದಿನಾಂಕ:03/04/2015 ರಂದು ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಕೆ.ಅಣ್ಣಾಮಲೈ, ಐ.ಪಿ.ಎಸ್‌ರವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಂತೋಷ ಕುಮಾರ್ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಚಂದ್ರಶೇಖರ್ ಕೆ.ಎಮ್‌ ರವರ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲಾ ಅಪರಾಧ ಗುಪ್ತವಾರ್ತಾ ವಿಭಾಗದ ಪೊಲೀಸ್ ನಿರೀಕ್ಷಕರಾದ ಶ್ರೀ ಟಿ.ಆರ್ ಜೈಶಂಕರ್‌ರವರು ಯಡ್ತಾಡಿ ಎಂಬಲ್ಲಿ ಇಬ್ಬರು ಯುವಕರು ಕೆಂಪು ಬಣ್ಣದ ಹೀರೊ ಹೊಂಡಾ ಹಂಕ್, ಬೈಕ್ ನಂಬ್ರ ಕೆಎ 20 ಎಕ್ಸ್‌ 1098 ನೇದರಲ್ಲಿ ಪಿಸ್ತೂಲ್ ಹಿಡಿದುಕೊಂಡು ಮಾರಾಟ ಮಾಡುವರೇ ತಿರುಗಾಡುತ್ತಿರುವುದಾಗಿ ಖಚಿತ ಮಾಹಿತಿ ಪಡೆದು, ಯಡ್ತಾಡಿಯ ಕಾವಡಿ ಕ್ರಾಸ್ ಬಸ್ ನಿಲ್ದಾಣದ ಬಳಿ ದಾಳಿ ನಡೆಸಿ ಆರೋಪಿಗಳಾದ ಯೋಗೀಶ (29), ತಂದೆ:ಕುಷ್ಟ ಪೂಜಾರಿ, ವಾಸ:ಹಳೆ ಅಳಿವೆಕೋಡಿ, ಕೊಟೇಶ್ವರ ಗ್ರಾಮ, ಕುಂದಾಪುರ ತಾಲೂಕು ಮತ್ತು ಸೊಹೆಲ್ (29), ತಂದೆ:ಹಬೀಬ್, ವಾಸ:ಶ್ರೀ ದುರ್ಗಾಂಬಾ ಗ್ಯಾರೇಜ್ ಬಳಿ, ಫೆರಿ ರೋಡ್, ಕುಂದಾಪುರ ಎಂಬವರನ್ನು  ದಸ್ತಗಿರಿ ಮಾಡಿ ಒಂದು ಪಿಸ್ತೂಲ್, 7 ಸಜೀವ ಗುಂಡುಗಳು (ರೌಂಡ್ಸ್), 3 ಮೊಬೈಲ್ ಫೋನ್‌, ಹೀರೊ ಹೊಂಡಾ ಹಂಕ್ ಬೈಕ್-1 ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ಅಂದಾಜು 1,34,000/- ರೂಪಾಯಿ ಆಗಿರುತ್ತದೆ. ಸದ್ರಿ ಆರೋಪಿಗಳನ್ನು ಹಾಗೂ ಸ್ವಾಧೀನಪಡಿಸಿಕೊಂಡ ಸ್ವತ್ತುಗಳನ್ನು ಬ್ರಹ್ಮಾವರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯವರಾದ ರವಿಚಂದ್ರ, ಸುರೇಶ, ಚಂದ್ರ ಶೆಟ್ಟಿ, ಸಂತೋಷ್ ಅಂಬಾಗಿಲು, ಸಂತೋಷ ಕುಂದರ್, ಪ್ರವೀಣ, ರಾಘವೇಂದ್ರ ಉಪ್ಪುಂದ, ಥಾಮ್ಸನ್ ಮತ್ತು ಚಂದ್ರಶೇಖರರವರು ಪಾಲ್ಗೊಂಡಿರುತ್ತಾರೆ.

No comments: