Sunday, April 19, 2015

PRESS NOTE


ಲ್ಯಾಪ್‌ಟಾಪ್ ಕಳ್ಳನ ಬಂಧನ
  • ದಿನಾಂಕ:18/04/2015 ರಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಕೆ.ಅಣ್ಣಾಮಲೈ, ಐ.ಪಿ.ಎಸ್‌ ರವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಂತೋಷ ಕುಮಾರ್ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಚಂದ್ರಶೇಖರ್ ಕೆ.ಎಮ್‌ ರವರ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲಾ ಅಪರಾಧ ಗುಪ್ತವಾರ್ತಾ ವಿಭಾಗದ ಎ.ಎಸ್.ಐ. ರೋಸಾರಿಯೋ ಡಿಸೋಜಾರವರು ಉಡುಪಿ ತಾಲೂಕಿನ ಬೊಮ್ಮರಬೆಟ್ಟು ಗ್ರಾಮದ ಹಿರಿಯಡ್ಕ ಜಂಕ್ಷನ್ ಬಳಿ ಇರುವ ವೀರಭದ್ರ ದೇವಸ್ಥಾನದ ಮುಖ್ಯದ್ವಾರದ ಮುಂಭಾಗದ ರಸ್ತೆಯ ಬದಿಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ರಾಜೇಂದ್ರ ಶೆಟ್ಟಿ (42), ತಂದೆ:ರಘುರಾಮ ಶೆಟ್ಟಿ, ವಾಸ:ಉಪ್ಪರಿಗೆ ಮನೆ, ಮುದ್ರಾಡಿ, ಕಾರ್ಕಳ ಎಂಬವನನ್ನು ದಸ್ತಗಿರಿ ಮಾಡಿ, ಆತನು ಪೆರ್ಡೂರಿನ ಅನಂತ ಪದ್ಮನಾಭ ದೇವಸ್ಥಾನದ ಹಿಂಬದಿಯ ಮನೆಯಲ್ಲಿರುವ ಜ್ಯೋತಿಷ್ಯ ಕಛೇರಿಯಲ್ಲಿ ಇಟ್ಟಿದ್ದ acer ಕಂಪೆನಿಯ ಲ್ಯಾಪ್‌ಟಾಪ್‌ ಅನ್ನು ಕಳವು ಮಾಡಿದ್ದಾಗಿ ವಿಚಾರಣೆ ಸಮಯದಲ್ಲಿ ತಿಳಿಸಿದ್ದು, ಆರೋಪಿತನಿಂದ 15 ಸಾವಿರ ಮೌಲ್ಯದ ಲ್ಯಾಪ್‌ಟ್ಯಾಪನ್ನು ಸ್ವಾಧೀನಪಡಿಸಿಕೊಂಡಿದ್ದು ಮುಂದಿನ ಕ್ರಮದ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾಗಿದೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯವರಾದ ಸಂತೋಷ್ ಪುತ್ತೂರು, ಸಂತೋಷ ಕುಂದರ್, ಸುರೇಶ, ರಾಮುಹೆಗ್ಡೆ, ರಾಘವೇಂದ್ರ ಉಪ್ಪುಂದ, ಪ್ರವೀಣ, ಥಾಮ್ಸನ್ ಹಾಗೂ ಚಾಲಕ ಚಂದ್ರಶೇಖರ ರವರು ಪಾಲ್ಗೊಂಡಿರುತ್ತಾರೆ.

No comments: