Friday, April 17, 2015

PRESS NOTE



       
   


ಕಾರ್ಕಳ ಪರಿಸರದಲ್ಲಿ ಮಹಿಳೆಯರ ಚಿನ್ನಾಭರಣಗಳನ್ನು ಬೈಕ್‌‌ನಲ್ಲಿ ಬಂದು ಸುಲಿಗೆ ಮಾಡುವ ಪ್ರಕರಣದ ಆರೋಪಿಯ ಬಂಧನ
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಥೋಮಸ್ ಕ್ಯಾಸ್ಟಲಿನೊ, ಪ್ರಾಯ 48 ವರ್ಷ, ತಂದೆ: ದಿ: ಪೀಟರ್ ಕ್ಯಾಸ್ಟಲಿನೊ, ವಾಸ ಮಹಮ್ಮಾಯಿ ಮೆಡಿಕಲ್ಸ್ ಎದುರುಗಡೆ ರಸ್ತೆ, ಸಾಲ್ಮರ, ಕಸಬಾ ಗ್ರಾಮ, ಕಾರ್ಕಳ ತಾಲೂಕು ಎಂಬಾತನನ್ನು ಉಡುಪಿ ಜಿಲ್ಲಾ ಎಸ್.ಪಿ ಅಣ್ಣಾಮಲೈರವರ ಆದೇಶದಂತೆ ಅಡಿಷನಲ್ ಎಸ್.ಪಿ ಶ್ರೀ. ಸಂತೋಷ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಕಾರ್ಕಳ ಡಿ.ವೈ.ಎಸ್.ಪಿ ಶ್ರೀ. ವಿನಯ್ ಎಸ್. ನಾಯಕ್ ರವರ ನಿರ್ದೇಶನದಂತೆ, ಕಾರ್ಕಳ ಪೊಲೀಸ್ ವೃತ್ತನಿರೀಕ್ಷಕರಾದ ಶ್ರೀ. ಜಿ.ಎಂ.ನಾಯ್ಕರ್ ಹಾಗೂ ಕಾರ್ಕಳ ನಗರ ಠಾಣಾ ಪ್ರಭಾರ ಪಿ.ಎಸ್.ಐ. ಶ್ರೀ. ಸಂಕಪ್ಪಯ್ಯ, ಕಾರ್ಕಳ ಗ್ರಾಮಾಂತರ ಠಾಣಾ ಪಿ.ಎಸ್.ಐ. ಶ್ರೀ. ಮಹಾದೇವ ಸೆಟ್ಟಿ, ಸಿಬ್ಬಂದಿಗಳಾದ ಹೆಚ್.ಸಿ. ಪ್ರಕಾಶ, ಹೆಚ್.ಸಿ. ರಾಜೇಶ, ಹೆಚ್.ಸಿ ಏಕನಾಥ, ಪಿ.ಸಿ ಶಿವಾನಂದ, ಪಿ.ಸಿ ರುದ್ರೇಶ, ಪಿಸಿ ಪ್ರವೀಣ್ ರೈ, ಪಿಸಿ ಪ್ರವೀಣ್ ಶೆಟ್ಟಿಗಾರ್, ಪಿ.ಸಿ. ಅರುಣ್ ಕುಮಾರ್ ಎಂಬವರೊಂದಿಗೆ ಕಾರ್ಕಳ ಕಸಬ ಗ್ರಾಮದ ಅತ್ತೂರು ಚರ್ಚ್‌ ಕ್ರಾಸ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಮದ್ಯಾಹ್ನ ಕಾಬೆಟ್ಟು ಕಡೆಯಿಂದ ಅನುಮಾನಾಸ್ಪದವಾಗಿ ಬಂದ ಮೋಟಾರು ಸೈಕಲನ್ನು ನಿಲ್ಲಿಸಿ ಮೋಟಾರು ಸೈಕಲ್ ಸವಾರನನ್ನು ವಿಚಾರಿಸಲಾಗಿ ಆತನು ಸಂಶಯಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದು ಆತನನ್ನು ಪರಿಶೀಲಿಸಿದಾಗ ಆತನ ಟಿಶರ್ಟ್‌ನ ಜೇಬಿನಲ್ಲಿ ಒಂದು ಪ್ಲಾಸ್ಟಿಕ್ ಕವರಿನಲ್ಲಿ ತುಂಡಾದ ಚಿನ್ನದ ಸರ ಮತ್ತು ತಾಳಿ ಕಂಡುಬಂದಿದ್ದು, ಇದರ ಬಗ್ಗೆ ವಿಚಾರಿಸಿದಾಗ ಆತನು ಸಮರ್ಪಕವಾದ ಉತ್ತರ ನೀಡದೇ ಇದ್ದುದರಿಂದ ಆತನನ್ನು ಠಾಣೆಗೆ ಕರೆತಂದು ಕೂಲಂಕುಷವಾಗಿ ವಿಚಾರಿಸಿದಾಗ ಕಾರ್ಕಳದಲ್ಲಿ ನಡೆದ ಹಲವಾರು ಸುಲಿಗೆ ಪ್ರಕರಣಗಳಲ್ಲಿ ಆರೋಪಿಯಾಗಿರುವುದು ಕಂಡುಬಂತು ನಂತರ ಆತನ ಸ್ವ ಇಚ್ಛಾ ಹೇಳಿಕೆಯಂತೆ ಆರೋಪಿಯು ಕೃತ್ಯಕ್ಕೆಬಳಸುತ್ತಿದ್ದ ಹೀರೋಹೋಂಡ ಎಸ್ಎಸ್ ಬೈಕ್ ಮತ್ತು ಹೋಂಡಾ ಆಕ್ಟಿವಾ, ಟಿವಿಎಸ್ ವೇಗೋ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಯ ಬಳಿ ಇದ್ದು ಸುಮಾರು 5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಪ್ರಕರಣಗಳ ವಿವರಗಳು ಈ ಕೆಳಕಂಡಂತಿದೆ.

          ಆರೋಪಿಯು ತಾನು ಕಳೆದ ವರ್ಷ ಕಾರ್ಕಳ ತಾಲೂಕಿನಲ್ಲಿ ಕಸಬ ಗ್ರಾಮದ ಆನೆಕೆರೆ ಕೃಷ್ಣದೇವಸ್ಥಾನದ ಬಳಿ ಶ್ರೀಮತಿ. ಪದ್ಮಶ್ರೀ ಎಂಬವರ ಕುತ್ತಿಗೆಯಿಂದ 35 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಎಳೆದಿರುತ್ತಾನೆ, ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಅ.ಕ್ರ. 116/14 ಕಲಂ. 392 ಐಪಿಸಿ ರೀತ್ಯ ಪ್ರಕರಣ ದಾಖಲಿಸಲಾಗಿದೆ, ಕಾರ್ಕಳ ತಾಲೂಕು ಕಸಬ ಗ್ರಾಮದ ಗಾಂಧಿಮೈದಾನ ಎಂಬಲ್ಲಿ ಸ್ವಾತಿ ಎಸ್. ಪ್ರಭು ಎಂಬವರ ಕುತ್ತಿಗೆಯಿಂದ 12 ಗ್ರಾಂ, ಚಿನ್ನದ ಕರಿಮಣಿ ಸರ ಎಳೆದಿರುತ್ತಾನೆ, ಈ ಬಗ್ಗೆ ಕಾರ್ಕಳ ನಗರ ಠಾಣಾ ಅ.ಕ್ರ. 103/14 ಕಲಂ. 392 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ. ಕಾರ್ಕಳದ ಮಾರ್ಕೆಟ್ ರಸ್ತೆಯಲ್ಲಿ ಮಂಜುಳಾ ಮತ್ತು ರಾಜೀವಿ ಪೂಜಾರ್ತಿ ಎಂಬವರ ಕುತ್ತಿಗೆಯಿಂದ ಹವಳದ ಮತ್ತು ಚಿನ್ನದ ಕನಕ ಹಾರ ಸರವನ್ನು ಎಳೆದಿರುತ್ತಾನೆ ಈ ಬಗ್ಗೆ. ಕಾರ್ಕಳ ನಗರ ಠಾಣಾ ಅ.ಕ್ರ. 16/14 ಕಲಂ. 392 ಐಪಿಸಿ ಮತ್ತು ಅ.ಕ್ರ. 17/14 ಕಲಂ. 392 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ. ಅತ್ತೂರು ಚರ್ಚ್‌ ರಸ್ತೆ ಕಾಬೆಟ್ಟುಕಾರ್ಕಳ ಕಸಬ ಗ್ರಾಮ ಶ್ರೀಮಂತಿನಿ ಭಟ್ ಎಂಬವರ ಕುತ್ತಿಗೆಯಿಂದ 3 ಪವನ್‌ ತೂಕದ ಮಂಗಳ ಸೂತ್ರ ಎಳೆದಿರುತ್ತಾನೆ ಈ ಬಗ್ಗೆ ಕಾರ್ಕಳ ನಗರ ಠಾಣಾ ಅ.ಕ್ರ. 183/14 ಕಲಂ. 392 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ..ಕಾರ್ಕಳ ತೆಳ್ಳಾರು ರಸ್ತೆಯ ಸಾಂತ್ರಬೆಟ್ಟು ಬಳಿ ಸುಬ್ರಾಯ ದೇವಾಡಿಗರ ಎಂಬವರ ಮಗಳ ಕುತ್ತಿಗೆಯಿಂದ ಸರವನ್ನು ಎಳೆಯಲು ಪ್ರಯತ್ನಿಸಿ ಪರಾರಿಯಾಗಿದ್ದು ಕಾರ್ಕಳ ನಗರ ಠಾಣಾ ಅ.ಕ್ರ. 202/14 ಕಲಂ. 392, 511 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

No comments: