Thursday, April 30, 2015ರಾಷ್ಟ್ರೀಯ ಕ್ರೀಡೆಯಲ್ಲಿ ಪೊಲೀಸ್‌ ಶಂಕರ್‌ಗೆ ಬಂಗಾರದ ಪದಕ  • ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪ್ರಸ್ತುತ ಪೊಲೀಸ್‌ ಅಧೀಕ್ಷಕರ ಕಛೇರಿಯ ನಿಸ್ತಂತು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಶಂಕರ ಪೂಜಾರಿ ಇವರು ದಿನಾಂಕ:25/04/2015 ರಿಂದ 29/04/2015 ರ ವರೆಗೆ ಗೋವಾ ರಾಜ್ಯದ ಪಣಜಿಯ ಬ್ಯಾಂಬೋಲಿಮ್‌ ಕ್ರೀಡಾಂಗಣದಲ್ಲಿ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಪೆಡರೇಷನ್‌ ರವರು ನಡೆಸಿದ ರಾಷ್ಟ್ರ ಮಟ್ಟದ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್ ಶಿಫ್ -2015 ರಲ್ಲಿ ಮೂಲತಃ ಕುಂದಾಪುರ ತಾಲೂಕಿನ ಬಿಜೂರಿನವರಾದ ಶಂಕರ ಪೂಜಾರಿ ಕಾಡಿನತಾರು ಇವರು 4x100 ರಿಲೇ ಓಟದ 35+ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಒಂದು ಬಂಗಾರದ ಪದಕವನ್ನು ಪಡೆದಿರುತ್ತಾರೆ. ಇವರು ಕಳೆದ ಬಾರಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಯಲ್ಲಿ ಮೂರು ಪದಕ ಪಡೆದ ಫ್ರಾನ್ಸ್‌ ದೇಶದಲ್ಲಿ ಇದೇ ಅಗಸ್ಟ್‌ನಲ್ಲಿ ನಡೆಯುವ ವಿಶ್ವ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ - 2015 ಕ್ಕೆ ಆಯ್ಕೆಯಾಗಿರುತ್ತಾರೆ. ಇವರನ್ನು ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಕೆ.ಅಣ್ಣಾಮಲೈ ಐ.ಪಿ.ಎಸ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಸಂತೋಷ್‌ ಕುಮಾರ್‌ ಹಾಗೂ ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಕೆ.ಎಂ ಚಂದ್ರಶೇಖರರವರು ಅಭಿನಂದಿಸಿರುತ್ತಾರೆ.

3 comments:

M Rama Rao said...

Congrats

Anonymous said...

http://news.kundapra.in/2015/05/Shankar-poojary-baggan-gold.html

Anonymous said...

Read news: http://news.kundapra.in/2015/05/Shankar-poojary-baggan-gold.html