Thursday, April 30, 2015

Daily Crimes Reported as On 30/04/2015 at 17:00 Hrs

ಅಪಘಾತ ಪ್ರಕರಣ

  • ಬೈಂದೂರು: ದಿನಾಂಕ 30-04-2015 ರಂದು ಬೆಳಿಗ್ಗೆ ಸಮಯಕ್ಕೆ ಪಿರ್ಯಾದಿ ಗಣಪ ಜಿ ಇವರು ಬೈಂದೂರು ಕಡೆಯಿಂದ ನಾವುಂದ ಕಡೆಗೆ ಅವರ ಬಾಬ್ತು ಮೊಟಾರ್ಸೈಕಲ್ನಲ್ಲಿ ಸವಾರಿ ಮಾಡಿಕೊಂಡು ಹೊರಟು ಬೆಳಿಗ್ಗೆ 11:15 ಗಂಟೆಗೆ ಕುಂದಾಪುರ ತಾಲೂಕು ಕಿರಿಮಂಜೇಶ್ವರ ಗ್ರಾಮದ ರಾಹೆ 66 ರಲ್ಲಿ  ನಾಗೂರು ಮಹಿಳಾ ಸೊಸೈಟಿ ಬಳಿ ತಲುಪುತ್ತಿರುವಾಗ ಪಿರ್ಯಾಧಿದಾರರ ಎದುರಿನಿಂದ ಕೆ. 30 ಕೆ 1948 ನೇ ಮೋಟಾರ್ಸೈಕಲ್ನ್ನು ಅದರ ಸವಾರನು ಸಹಸವಾರರನ್ನು ಕುಳ್ಳಿರಿಸಿಕೊಂಡು ಮಿತವಾದ ವೇಗದಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಹೆಚ್ಅರ್‌ 55 ಅರ್‌ 1966 ನೇ ಟ್ಯಾಂಕರನ್ನು ಅದರ ಚಾಲಕನು ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಂದು ಟ್ಯಾಂಕರನ್ನು ಹಿಂದಿಕ್ಕಿ ಮುಂದಕ್ಕೆ ಹೋಗುತ್ತಿದ್ದಾಗ ಟ್ಯಾಂಕರನ್ನು ಎಡಗಡೆಗೆ ಚಲಾಯಿಸಿದ ಪರಿಣಾಮ ಟ್ಯಾಂಕರಿನ ಹಿಂಬಾಗ ಮೊಟಾರ್ಸೈಕಲ್ಗೆ ಡಿಕ್ಕಿ ಹೊಡೆದು ಮೋಟಾರ್ಸೈಕಲ್ಸವಾರ ಹಾಗೂ ಸಹಸವಾರಳು ಮೋಟಾರ್ಸೈಕಲ್ಸಮೇತ ರಸ್ತೆಗೆ ಬಿದ್ದು ಮೋಟಾರ್ಸೈಕಲ್ಸವಾರ ಗಣಪ ಎಂಬುವವರಿಗೆ ತರಚಿದ ಗಾಯವಾಗಿದ್ದು ಸಹಸವಾರಳಾದ ಕಾವೇರಿಯವರಿಗೆ ತಲೆಗೆ ತೀವೃತರಹದ ರಕ್ತಗಾಯವಾಗಿರುತ್ತದೆ. ತಲೆಗೆ ತೀವೃವಾಗಿ ಗಾಯಗೊಂಡ ಕಾವೇರಿಯವರನ್ನು ಅಂಬುಲೆನ್ಸನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ಸಮಯ ದಾರಿ ಮದ್ಯದಲ್ಲಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 106/2015 ಕಲಂ 279, 304 (ಎ) ಐಪಿಸಿ     ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: