Thursday, April 30, 2015

Daily Crimes Reported as On 30/04/2015 at 07:00 Hrs



ಕಳವು ಪ್ರಕರಣ
  • ಬೈಂದೂರು: ದಿನಾಂಕ 28.04.2015 ರಂದು ರಾತ್ರಿ ಸಮಯ ಸುಮಾರು 9.00 ವೇಳೆಗೆ ಫಿರ್ಯಾದಿ ಶಶಿಕಾಂತ ಇವರು ತನ್ನ ಬಾಬ್ತು ಕೆ.ಎ 20 ಇ.ಜಿ 1257 ನೇ ಪಲ್ಸರ್ ಮೋಟಾರ್ ಸೈಕಲ್ ಆನ್ನು ಬಿಜೂರು ಗ್ರಾಮದ ದುರ್ಗಾಪರಮೇಶ್ವರಿ ಮುಖಮಂಟಪದ ಎದುರು ಯಕ್ಷಗಾನ ನಡೆಯುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಯಕ್ಷಗಾನ ನೋಡಿ ಬೆಳಗಿನ ಜಾವ 5.30ಗಂಟೆಗೆ ಮನೆಗೆ ಹೋಗುವರೇ ಬೈಕ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ ಬೈಕ್ ಕಾಣೆಯಾಗಿರುತ್ತದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 104/15 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ
  • ಶಿರ್ವಾ: ಪಿರ್ಯಾದಿ ಅವಿನಾಶ್ ದೇವಾಡಿಗ ಇವರು  ತನ್ನ ಹೆಂಡತಿ  ಚೈತ್ರರೊಂದಿಗೆ  ಉಡುಪಿಯಿಂದ -ಬೆಳ್ಳೆ ಮಾರ್ಗವಾಗಿ ತನ್ನ ಬಾಬ್ತು ನೊಂದಣಿಯಾಗದ ಹೊಸ ಹೊಂಡಾ ಡ್ರೀಮ್ ವಾಹನದಲ್ಲಿ  ಪಳ್ಳಿ ಕಡೆ ಬರುತ್ತಿರುವಾಗ  ಮೂಡುಬೆಳ್ಳೆ  ಚರ್ಚ್ ನ ಎದುರುಗಡೆ  ದಿನಾಂಕ: 29/04/15  ಮದ್ಯಾಹ್ನ ಸುಮಾರು 3-30 ಗಂಟೆಗೆ  ಚರ್ಚ್ ನ ಒಳರಸ್ತೆಯಿಂದ ಬಂದ ಕೆ ಎ 20 ಎನ್ 721 ನೇ ನಂಬ್ರದ ಒಮಿನಿ ಕಾರನ್ನು  ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಬಂದು ಪಿರ್ಯಾದಿದಾರರ ಬಾಬ್ತು ಹೊಂಡಾ ಡ್ರೀಮ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಹಾಗೂ ಆತನ ಹೆಂಡತಿ ಚೈತ್ರ ರಿಗೆ ಸಾದಾ ಗಾಯವಾಗಿದ್ದು ಸದ್ರಿ ವಾಹನ ಚಾಲಕನು ಅಪಘಾತಗೊಳಿಸಿದ್ಲಲ್ಲದೆ ವಾಹನವನ್ನು ನಿಲ್ಲಿಸದೆ ಪರಾರಿಯಾಗಿರುತ್ತಾನೆ. ಈ ಬಗ್ಗೆ ಶಿರ್ವಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/15 ಕಲಂ 279, 337 ಐಪಿಸಿ ಮತ್ತು 134(ಎ)(ಬಿ)  ಮೋ.ವಾ ಕಾಯಿದೆಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬೈಂದೂರು: ದಿನಾಂಕ 29-04-2015 ರಂದು ರಾತ್ರಿ 11:00 ಗಂಟೆಯ ಸಮಯದಲ್ಲಿ  ಪಿರ್ಯಾಧಿ ಗೋಪಾಲಕೃಷ್ಣ ಗಾಣಿಗ ಇವರು ಅವರ ಮನೆಯಲ್ಲಿರುವಾಗ ಅವರ ಮೊಬೈಲಿಗೆ ಯಾರೋ ಒಬ್ಬರು ಕರೆ ಮಾಡಿ ನಾಯ್ಕನಕಟ್ಟೆ ಹಾಲು ಡೈರಿಯ ಹತ್ತಿರ ಪಿರ್ಯಾಧಿದಾರರ ತಮ್ಮ ವಿರೇಂದ್ರನು ಸವಾರಿ ಮಾಡುತ್ತಿದ್ದ ಮೋಟಾರ್‌ ಸೈಕಲ್‌ಗೆ ಒಂದು ಟೆಂಪೋ ಡಿಕ್ಕಿ ಹೊಡೆದು ಅಪಘಾತವಾಗಿರುವುದಾಗಿ ತಿಳಿಸಿದಂತೆ ಪಿರ್ಯಾಧಿದಾರರು ಸ್ಥಳಕ್ಕೆ ಬಂದು ನೋಡಿ ಅಲ್ಲಿ ಸೇರಿದ್ದವರಲ್ಲಿ ವಿಚಾರಿಸಲಾಗಿ ದಿನಾಂಕ 29/04/2015 ರಂದು ರಾತ್ರಿ ಸುಮಾರು 10:45 ಗಂಟೆಯ ಸಮಯಕ್ಕೆ ವಿರೇಂದ್ರನು ಬೈಂದೂರು ಕಡೆಯಿಂದ ಮನೆಯ ಕಡೆಗೆ ಕೆ.ಎ 20 ಎಸ್‌ 1365 ನೇ ಮೋಟಾರ್‌ ಸೈಕಲ್‌ನ್ನು ಸವಾರಿ ಮಾಡಿಕೊಂಡು ಬಂದು  ಕುಂದಾಪುರ ತಾಲೂಕು ನಂದನವನ ಗ್ರಾಮದ ರಾಹೆ 66 ರಲ್ಲಿ ನಾಯ್ಕನಕಟ್ಟೆ ಹಾಲು ಡೈರಿಯ ಹತ್ತಿರ  ತಲುಪುತ್ತಿದ್ದಂತೆ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಯಾವುದೋ ಟೆಂಪೋವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಿರೇಂದ್ರನು ಸವಾರಿ ಮಾಡುತ್ತಿದ್ದ ಮೋಟಾರ್‌ ಸೈಕಲ್‌ಗೆ ಹಿಂಬದಿಯಿಂದ ಡಿಕ್ಕಿಹೊಡೆದ ಪರಿಣಾಮ ವಿರೇಂದ್ರನು ಡಾಂಬಾರು ರಸ್ತೆಗೆ ಬಿದ್ದು ವಾಹನದ ಹಿಂಬದಿಯ ಚಕ್ರ ಆತನ ದೇಹದ ಮೇಲೆ ಚಲಿಸಿ ಮೃತಪಟ್ಟಿರುವುದಾಗಿದೆ. ಅಪಘಾತ ನಡೆಸಿದ  ಟೆಂಪೋವನ್ನು ಅದರ ಚಾಲಕನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 105/2015 ಕಲಂ : 279, 304 (ಎ) ಐಪಿಸಿ ಜೊತೆಗೆ 134(ಎ)&(ಬಿ) ಜೊತೆಗೆ 187 ಐಎಮ್‌ವಿ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  
ಇತರೇ ಪ್ರಕರಣ    
  • ಅಜೆಕಾರು: ದಿನಾಂಕ 29/04/2015 ರಂದು 16:00 ಗಂಟೆಗೆ ಆರೋಪಿ ಸಂತೋಷ ಶೆಟ್ಟಿ (29) ರವರು ಕೂಲಿಕೆಲಸ ಮುಗಿಸಿ ಕಡ್ತಲ ಗ್ರಾಮದ ನೂಜಿಬೆಟ್ಟು ಎಂಬಲ್ಲಿಗೆ ಬಂದು ಮನೆಯೊಳಗೆ ಪ್ರವೇಶಮಾಡಿ ಟೇಬಲ್ ಬೆಂಚು ಹೊಡೆದು ಹಾಳುಗೆಡವಿ ಪಿರ್ಯಾದಿ ಸತೀಶ ಮಂಜಯ್ಯ ಶೆಟ್ಟಿ ಇವರಿಗೆ ಹಾಗೂ ಮನೆಯವರಿಗೆ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಅಪರಾಧ ಕ್ರಮಾಂಕ 16/15 ಕಲಂ: 504, 506, 427 ಐಪಿಸಿಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  
  • ಕೊಲ್ಲೂರು: ಪಿರ್ಯಾದಿ ಷಮ್ಮಿ.ಎಮ್‌  ಇವರಿಗೆ ಈ ಹಿಂದೆ ಸ್ನೇಹಿತನಾಗಿದ್ದ ಶಿಬು ಎಂಬಾತ ದಿನಾಂಕ: 29/04/2015 ರಂದು ರಾತ್ರಿ 09:00 ಗಂಟೆಗೆ ಕೊಲ್ಲೂರು ಠಾಣಾ ಸರಹದ್ದಿನ ಹಾಲ್ಕಲ್‌ ಬ್ರಿಡ್ಜ್‌ನ ಬಳಿ ಅಡ್ಡಗಟ್ಟಿ ತಡೆದು ನಿಲ್ಲಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 42/15 ಕಲಂ: 341,  506 ಐಪಿಸಿಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  

 

No comments: