Wednesday, April 29, 2015

Daily Crimes Reported as On 29/04/2015 at 17:00 Hrs

ಅಪಘಾತ ಪ್ರಕರಣ
  • ಮಣಿಪಾಲ: ಪಿರ್ಯಾದಿ ಕೃಷ್ಣ, ತಂದೆ: ದಿ.ತಾಮ,ವಾಸ: ಅಲೆವೂರು ಗುಡ್ಡೆಯಂಗಡಿ, ಮಣಿಪಾಲ ಕ್ರಾಸ್ ರಸ್ತೆ, ಉಡುಪಿ ಇವರು ದಿನಾಂಕ 26.04.15ರಂದು ತನ್ನ ಮಗ ರಾಜಶೇಖರನ ಆಟೋರಿಕ್ಷಾ ನಂಬ್ರ ಕೆಎ208859ನೇದರಲ್ಲಿ ಅಗತ್ಯ ಕೆಲಸದ ನಿಮಿತ್ತ ಉಡುಪಿಗೆ ಹೋಗಿ ಮನೆಗೆ ವಾಪಸ್ಸು ಬರುವಾಗ್ಗೆ ಸಂಜೆ ಸುಮಾರು 5:30ಗಂಟೆಗೆ ಅಲೆವೂರು ಗುಡ್ಡೆಯಂಗಡಿ ಬಳಿ ತಲುಪುವಾಗ್ಗೆ ರಾಜಶೇಖರನು ತಾನು ಚಲಾಯಿಸಿಕೊಂಡು ಬರುತ್ತಿದ್ದ ಆಟೋರಿಕ್ಷಾವನ್ನು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹತೋಟಿ ತಪ್ಪಿ ಆಟೋರಿಕ್ಷಾ ಅಡ್ಡ ಬಿದ್ದಿರುತ್ತದೆ. ಆಟೋರಿಕ್ಷಾ ರಸ್ತೆಗೆ ಅಡ್ಡ ಬಿದ್ದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರಿಗೆ ಹಣೆಗೆ ಮತ್ತು ಎಡಬದಿಯ ಸೊಂಟದ ಬಳಿ ಮೂಳೆ ಮುರಿತದ ಗಾಯವಾಗಿರುತ್ತದೆ.ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/15 ಕಲಂ 279, 337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಮಣಿಪಾಲ: ಪಿರ್ಯಾದಿ ದಿವಾಕರ ಶೆಟ್ಟಿ, ತಂದೆ: ದಿ.ಕೃಷ್ಣಯ್ಯ ಶೆಟ್ಟಿ, ವಾಸ: ಪಡುಮನೆ, ಮೂಡುಪಾಪು, ಹೆರ್ಗಾ ಗ್ರಾಮ & ಅಂಚೆ, ಉಡುಪಿ ಇವರು ದಿನಾಂಕ 29.04.15ರಂದು ಅಗತ್ಯದ ಕೆಲಸದ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಗೆ ಬಂದಿದ್ದು, ತನ್ನ ಕಾರು ನಂಬ್ರ ಕೆಎ20ಜಡ್‌‌5288 ನೇದನ್ನು ಠಾಣೆಯ ಎದುರಿನ ರಸ್ತೆಯ ಬದಿಯಲ್ಲಿ ಇಟ್ಟು ಬಂದಿರುತ್ತಾರೆ. ಮಧ್ಯಾಹ್ನ 1:30ಗಂಟೆಗೆ ಠಾಣೆಯಲ್ಲಿರುವಾಗ ಹೊರಗಡೆ ದೊಡ್ಡ ಶಬ್ದವಾದುದನ್ನು ಕಂಡು ಹೋಗಿ ನೋಡಿದಾಗ ಪಿರ್ಯಾದಿದಾರರು ನಿಲ್ಲಿಸಿದ್ದ ಕಾರಿಗೆ ಕೆಎ20ಪಿ9203ನೇದರ ಕಾರಿನ ಚಾಲಕನು ತಾನು ಚಲಾಯಿಸಿಕೊಂಡು ಬಂದ ಕಾರನ್ನು ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರ ಕಾರು ಜಖಂಗೊಂಡಿದ್ದಾಗಿರುತ್ತದೆ. ಈ ಅಪಘಾತದಿಂದ ಅಫಘಾತವೆಸಗಿದ ಚಾಲಕನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ . ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 67/15 ಕಲಂ 279 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕುಂದಾಪುರ: ದಿನಾಂಕ 28/04/2015 ರಂದು ಸಮಯ ಸುಮಾರು ಮಧ್ಯಾಹ್ನ  3:30  ಗಂಟೆಗೆ ಕುಂದಾಪುರ ತಾಲೂಕು  ಕಾವ್ರಾಡಿ  ಗ್ರಾಮದ ವಾಲ್ತೂರು  ಎಂಬಲ್ಲಿ ತಿರುವಿನ  ರಸ್ತೆಯಲ್ಲಿ, ಆಪಾದಿತ  ಕಾಶಪ್ಪ ಕೆ ಬೆಳಗಂಟಿ ಎಂಬವರು   KA 20-A-7415ನೇ  ಟಿಪ್ಪರ್  ಲಾರಿಯನ್ನು ಅಂಪಾರು ಕಡೆಯಿಂದ  ನೇರಳಕಟ್ಟೆ ಕಡೆಗೆ  ಅತೀವೇಗ ಹಾಗೂ ಅಜಾಗರುಕತೆಯಿಂದ  ಚಾಲನೆ ಮಾಡಿಕೊಂಡು  ರಸ್ತೆಯ  ಬಲ ಬದಿಗೆ ಹೋಗಿ ನೇರಳಕಟ್ಟೆ ಕಡೆಯಿಂದ  ಅಂಪಾರು  ಕಡೆಗೆ ನಾಗರಾಜ ಆಚಾರಿ  ಎಂಬವರು ಸವಾರಿ ಮಾಡಿಕೊಂಡು  ಬರುತ್ತಿದ್ದ KA20-ED-7781  ಬೈಕಿಗೆ ಎದುರುಗಡೆಯಿಂದ ಡಿಕ್ಕಿ  ಹೊಡೆದ ಪರಿಣಾಮ ಬೈಕ್‌  ಸವಾರ ನಾಗರಾಜ ಆಚಾರಿ  ಬೈಕ್‌ ಸಮೇತ  ರಸ್ತೆಯಲ್ಲಿ  ಬಿದ್ದು ಅವರ ಬಲಕಾಲಿಗೆ  ಮೂಳೆ  ಮೂರಿತದ ಗಾಯ ,   ತಲೆಗೆ,   ಹಾಗೂ ಮೈ ಕೈಗೆ  ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ  ಠಾಣೆಯಲ್ಲಿ ಅಪರಾಧ ಕ್ರಮಾಂಕ 47/15 ಕಲಂ 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  
  • ಬ್ರಹ್ಮಾವರ: ದಿನಾಂಕ: 28/04/2015 ರಂದು ರಾತ್ರಿ 7:30 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು, ವಾರಂಬಳ್ಳಿ ಗ್ರಾಮದ, ಉಪ್ಪಿನಕೋಟೆ ಜಂಕ್ಷನ್ ಬಳಿ ರಾ.ಹೆ 66 ರಲ್ಲಿ ಪಿರ್ಯಾದಿ ರವಿ ಗಣಪತಿ ಹೆಗ್ಡೆ ಇವರು ತನ್ನ ಬಾಬ್ತು ಕೆಎ-25-ಎಮ್‌-6072 ನೇ ನಂಬ್ರದ ಫಿಯೆಟ್ ಕಾರ್‌ನಲ್ಲಿ ತನ್ನ ಸಂಬಂಧಿಕರಾದ ಮಂಜುನಾಥ, ನಾರಾಯಣ ಹೆಗ್ಡೆ, ನಾರಾಯಣ ಸುಬ್ರಾಯ ಹೆಗ್ಡೆ, ಸುನಂದ, ಪದ್ಮಾವತಿ   ಮತ್ತು 4 ವರ್ಷದ ಪ್ರಗತಿ ಎಂಬವರನ್ನು ಕೂರಿಸಿಕೊಂಡು  ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಸದ್ರಿ ಕಾರಿನ  ಮುಂದಿನಿಂದ ಕುಂದಾಪುರ ಕಡೆಗೆ  ಹೋಗುತ್ತಿದ್ದ ಆರೋಪಿಯ ಬಾಬ್ತು ಕೆಎ-35-ಎ-3361ನೇ ಟಿಪ್ಪರ್ ಲಾರಿಯನ್ನು ಆರೋಪಿಯು ಅತೀ  ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿ ಯಾವುದೇ ಸೂಚನೆ ನೀಡದೇ ಒಮ್ಮೇಲೆ ನಿರ್ಲಕ್ಷತನದಿಂದ ಕ್ರಾಸಿಂಗ್‌ ನಲ್ಲಿ  ಬಲಕ್ಕೆ ಬ್ರಹ್ಮಾವರ ಕಡೆಗೆ ಹೋಗುವ ರಸ್ತೆಗೆ ಚಲಾಯಿಸಿದ ಪರಿಣಾಮ ಟಿಪ್ಪರ್  ಲಾರಿಯ ಬಲ ಬದಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಜಖಂ ಗೊಂಡು ಕಾರಿನಲ್ಲಿದ್ದ ಪಿರ್ಯಾದಿದಾರರ ಕೈ ಮಣಿಗಂಟು ಬಳಿ ಮೂಳೆ ಮುರಿತವಾಗಿದ್ದು, ಮಂಜುನಾಥರವರಿಗೆ  ಮುಖ, ಬಾಯಿಗೆ ರಕ್ತ ಗಾಯವಾಗಿದ್ದು ಹೊಟ್ಟೆಗೆ ಗುದ್ದಿದ ನೋವು, ಸುನಂದರವರ  ಹಲ್ಲು ದವಡೆಗೆ ತೀವ್ರ ಗಾಯ ಮತ್ತು ನಾರಾಯಣ @ ರವಿ ಯವರ ತಲೆ ಮತ್ತು ಎರಡೂ ಕಾಲುಗಳಿಗೆ ತೀವ್ರ ತರಹದ ಗಾಯಗಳಾಗಿರುತ್ತದೆ.   ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 67/15 ಕಲಂ 279, 337, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
  • ಮಣಿಪಾಲ: ರಾಜೇಶ ನಾಯ್ಕ(35)ರವರು  ದಿನಾಂಕ 29.04.15 ರಂದು ಬೆಳಿಗ್ಗೆ 07:45 ಗಂಟೆಗೆ ಆದರ್ಶನಗರದ ಜಯಪ್ರಕಾಶ್‌ ಎಂಬವರ ಮನೆಗೆ ಬಂದು ಅವರ ಮನೆಯ ತೆಂಗಿನ ಮರದಿಂದ ತೆಂಗಿನ ಕಾಯಿ ತೆಗೆಯಲು ತೆಂಗಿನ ಮರವನ್ನು ಹತ್ತಿ ತೆಂಗಿನ ಕಾಯಿ ತೆಗೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ರಾಜೇಶ ನಾಯ್ಕರವರು ಮೃತಪಟ್ಟಿದ್ದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಯುಡಿಆರ್ ನಂಬ್ರ 17/15 ಕಲಂ 174 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬ್ರಹ್ಮಾವರ: ವಸಂತಿ ಶೆಡ್ತಿ ಪ್ರಾಯ: 47 ವರ್ಷ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 28/04/2015 ರಾತ್ರಿಯಿಂದ ದಿನಾಂಕ: 29/04/2015 ಬೆಳಿಗ್ಗೆ 07:00 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು, ಹನೇಹಳ್ಳಿ ಗ್ರಾಮದ, ಪಡುಮನೆ ಎಂಬಲ್ಲಿರುವ ವಾಸದ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 23/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಅಮಾಸೆಬೈಲು: ನಾಗರಾಜ ಪೂಜಾರಿ (55)  ಎಂಬವರು ಪಾರ್ಶ್ವವಾಯು ತೊಂದರೆಯಿಂದ ಬಳಲುತ್ತಿದ್ದು, ಈ ಬಗ್ಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಸಲಹೆಯಂತೆ ಮನೆಯಲ್ಲಿ ಮಾತ್ರೆಯನ್ನು ಸೇವಿಸುತ್ತಿದ್ದವರು, ದಿನಾಂಕ 28/04/2015 ರಂದು ಸಂಜೆ 6:00 ಗಂಟೆಗೆ ಕುಂದಾಪುರ ತಾಲೂಕು ಅಮಾಸೆಬೈಲು ಗ್ರಾಮದ ಕೆಲ ಸಾಲಿಮಕ್ಕಿ ಎಂಬಲ್ಲಿ ಮಾತ್ರೆಯನ್ನು ಹೆಚ್ಚಾಗಿ ಸೇವಿಸಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 07/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: