Monday, April 27, 2015

Daily Crimes Reported as On 27/04/2015 17:00 Hrs

ಅಪಘಾತ ಪ್ರಕರಣಗಳು
  • ಕೋಟ:ಪಿರ್ಯಾದಿದಾರರಾದ ವ್ಯಾಸರಾಜ ಎ. (23), ತಂದೆ:ಅಪ್ಪು ಕುಲಾಲ, ವಾಸ:ಗುಡ್ಡಿಮನೆ, ಶ್ಯಾನುಭೋಗರಬೆಟ್ಟು, ಯಡಾಡಿ-ಮತ್ಯಾಡಿ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆರವರ ಅಜ್ಜ ನರಸಿಂಹ ಕುಲಾಲ್ (65) ಎಂಬವರು ದಿನಾಂಕ:27/04/2015 ರಂದು ಬೆಳಿಗ್ಗೆ ಡೈರಿಗೆ ಹಾಲು ಕೊಡಲು ಗುಡ್ಡೆಯಂಗಡಿ ಕಡೆಯಿಂದ ಶಿರಿಯಾರ ಕಡೆಗೆ ಟಾರು ರಸ್ತೆಯಲ್ಲಿ ಅವರ ಕೆ.ಎ 20 ಎಸ್ 5769ನೇ ಟಿ.ವಿ.ಎಸ್, ಎಕ್ಸ್.ಎಲ್ ಮೋಟಾರ್ ಸೈಕಲ್‌ನಲ್ಲಿ ಹೋಗುವಾಗ ಬೆಳಿಗ್ಗೆ ಸುಮಾರು 7:30 ಗಂಟೆಗೆ ಯಡಾಡಿ ಮತ್ಯಾಡಿ ಗ್ರಾಮದ ರಮೇಶ ಕುಲಾಲ್‌ರವರ ಮನೆಯ ಬಳಿ ತಲುಪುವಾಗ, ಗುಡ್ಡೆಯಂಗಡಿ ಕಡೆಯಿಂದ ನೊಂದಣೆಯಾಗದ ಫ್ಯಾಷನ್ ಪ್ರೋ ಮೋಟಾರ್ ಸೈಕಲ್‌ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ರಸ್ತೆಯ ತೀರ ಬಲಕ್ಕೆ ಚಲಾಯಿಸಿ ಶಿರಿಯಾರ ಕಡೆಯಿಂದ ಬರುತ್ತಿದ್ದ ನರಸಿಂಹ ಕುಲಾಲ್‌ರವರ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ, ನರಸಿಂಹ ಕುಲಾಲ್‌ರವರು ಟಾರು ರಸ್ತೆಯ ಪಶ್ಚಿಮ ಬದಿಗೆ ಬಿದ್ದಾಗ, ಅದೇ ಸಮಯದಲ್ಲಿ ಶಿರಿಯಾರ ಕಡೆಯಿಂದ ಗುಡ್ಡೆಯಂಗಡಿ ಕಡೆಗೆ ಕೆ.ಎ 20 ಸಿ 939 ನೇ ನಂಬ್ರದ ಲಾರಿ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಟಾರು ರಸ್ತೆಯ ಪಶ್ಚಿಮ ಬದಿಯಲ್ಲಿ ಬಿದ್ದಿದ ನರಸಿಂಹ ಕುಲಾಲ್‌ರವರ  ತಲೆ ಮತ್ತು ಎದೆಯ ಮೇಲೆ ಲಾರಿಯನ್ನು ಹತ್ತಿಸಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವ್ಯಾಸರಾಜ ಎ. ರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 82/2015 ಕಲಂ:279, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   
  • ಕೋಟ:ಪಿರ್ಯಾದಿದಾರರಾದ ರಾಮಚಂದ್ರ ಬಿ. ಶಿರೂರಕರ್ (55), ತಂದೆ:ದಿವಂಗತ ಬಾಬು ಶಿರೂರಕರ್, ವಾಸ:ಚರ್ಚ್ ರೋಡ್, ಕುಂದಾಪುರರವರು ದಿನಾಂಕ:27/04/2015 ರಂದು ಮಧ್ಯಾಹ್ನ ಸಮಾರು 12:00 ಗಂಟೆಗೆ ಅವರ ಕೆಎ 20 ಝಡ್ 8058 ನೇ ನಂಬ್ರದ ಕಾರಿನಲ್ಲಿ ಕುಂದಾಪುರದಿಂದ ಉಡುಪಿಗೆ ಹೋಗುವಾಗ ಮಾಬುಕಳ ಬಸ್ ನಿಲ್ದಾಣದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಸ್ ನಿಂತಿರುವುದರಿಂದ, ರಾಮಚಂದ್ರ ಬಿ. ಶಿರೂರಕರ್‌ರವರು ತನ್ನ ಕಾರಿಗೆ ಸಿಗ್ನಲ್ ಲೈಟ್ ಹಾಕಿ ನಿಲ್ಲಿಸಿದ್ದು, ಆ ಸಮಯದಲ್ಲಿ ಹಿಂದಿನಿಂದ ಎಪಿ 31 ಡಬ್ಲ್ಯೂ 1365ನೇ ನಂಬ್ರದ ಲಾರಿ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಲಾರಿಯನ್ನು ಚಲಾಯಿಸಿ ರಾಮಚಂದ್ರ ಬಿ. ಶಿರೂರಕರ್‌ರವರ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ, ಕಾರಿನ ಹಿಂಭಾಗ ಹಾಗೂ ಕಾರು ಮುಂದಕ್ಕೆ ಚಲಿಸಿ ಬಸ್ಸಿನ ಹಿಂಬದಿಗೆ ಢಿಕ್ಕಿಯಾಗಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುವುದಾಗಿದೆ.ಈ ಬಗ್ಗೆ ರಾಮಚಂದ್ರ ಬಿ. ಶಿರೂರಕರ್‌ರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 83/2015 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   
  • ಉಡುಪಿ ಸಂಚಾರ:ಪಿರ್ಯಾದಿದಾರರಾದ ಜಯಂತಿ ಎನ್‌ ಕೋಟ್ಯಾನ್ (42) ಗಂಡ:ನಾಗೇಶ್ ಕೋಟ್ಯಾನ್ ವಾಸ:ವಾಣಿಶ್ರೀ ನಿಲಯ, ಅಮೀನ್ ಕಂಪೌಂಡ್, ವಢಬಾಂಡೇಶ್ವರ ತೊಟ್ಟಂ ಕೊಡವೂರು ಉಡುಪಿರವರು ದಿನಾಂಕ:20/04/2015 ರಂದು ರಾತ್ರಿ ಸುಮಾರು 10:50 ಗಂಟೆಗೆ ತನ್ನ ಮಗ ವರುಣ್‌ನೊಂದಿಗೆ ಅಂಬಲಪಾಡಿಯಿಂದ ಬಾಡಿಗೆ ರಿಕ್ಷಾದಲ್ಲಿ ಉಡುಪಿ ಸಿಟಿ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿರುವಾಗ, ಎಲ್ಐಸಿ ಕಾಲನಿ ಹತ್ತಿರ ಕೆಎ 20 ಎನ್ 2884ನೇ ಮಾರುತಿ ಓಮ್ನಿ ಕಾರಿನ ಚಾಲಕ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಜಯಂತಿ ಎನ್‌ ಕೋಟ್ಯಾನ್‌ರವರಿದ್ದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಜಯಂತಿ ಎನ್‌ ಕೋಟ್ಯಾನ್‌ರವರ ಮುಖಕ್ಕೆ ಮತ್ತು ಬಲಗೈಗೆ ರಕ್ತಗಾಯವಾಗಿದ್ದು, ಅವರ ಮಗ ವರುಣ್‌ಗೆ ಹಣೆ, ಎಡಕೈ ಹಾಗೂ ಬಲಗಣ್ಣಿನ ಬಳಿ ರಕ್ತಗಾಯವಾಗಿದ್ದು, ಢಿಕ್ಕಿ ಹೊಡೆದ ಓಮ್ನಿ ಕಾರಿನ ಚಾಲಕ ಮತ್ತು ಅಲ್ಲಿ ಸೇರಿದವರು ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು, ಈ ಅಪಘಾತಕ್ಕೆ ಕೆಎ 20 ಎನ್ 2884 ನೇ ಮಾರುತಿ ಓಮ್ನಿ ಕಾರಿನ ಚಾಲಕ ಸತೀಶ್‌ರವರ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.ಈ ಬಗ್ಗೆ ಜಯಂತಿ ಎನ್‌ ಕೋಟ್ಯಾನ್‌ರವರು ನೀಡಿದ ದೂರಿನಂತೆ ಉಉಡಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 35/2015 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ ಸಂಚಾರ:ದಿನಾಂಕ:26/04/2015 ರಂದು ರಾತ್ರಿ ಸುಮಾರು 09:30 ಗಂಟೆಗೆ ಕುಂದಾಪುರ ತಾಲೂಕು ಹಂಗಳೂರು ಗ್ರಾಮದ ದುರ್ಗಾಂಬಾ ಗ್ಯಾರೇಜಿನ ಎದುರುಗಡೆ ಪಶ್ಚಿಮ ಬದಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ, ಆಪಾದಿತ ಮಂಜುನಾಥ ದೇವಾಡಿಗ ಎಂಬವರು ಕೆಎ 05 ಎಸಿ 7167 ನೇ ಮಾರುತಿ ಓಮ್ನಿ ಕಾರನ್ನು ಕೊಟೇಶ್ವರ ಕಡೆಯಿಂದ  ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಡು, ರಸ್ತೆಯ ತೀರ ಎಡಬದಿಗೆ ಬಂದು ಪಿರ್ಯಾದಿದಾರರಾದ ಚಂದ್ರ  ಮೊಗವೀರ (42), ತಂದೆ:ದಿವಂಗತ ವೆಂಕಟ ಮೋಗವೀರ, ವಾಸ:ಸಂತೋಷ ನಗರ, ಹೆಮ್ಮಾಡಿ ಗ್ರಾಮ, ಕುಂದಾಪುರ ತಾಲೂಕುರವರ ಪಕ್ಕದಲ್ಲಿ  ನಿಂತುಕೊಂಡಿದ್ದ ಮಹಾಂತೇಶ  ಎಂಬವರಿಗೆ ಢಿಕ್ಕಿ ಹೊಡೆದ  ಪರಿಣಾಮ  ಅವರು ರಸ್ತೆಯಲ್ಲಿ  ಬಿದ್ದು, ತಲೆಗೆ,  ಕೈ ಕಾಲುಗಳಿಗೆ  ರಕ್ತಗಾಯ  ಹಾಗೂ ಒಳ ನೋವು ಆಗಿ ಕುಂದಾಪುರ ಶ್ರೀದೇವಿ  ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ.ಈ ಬಗ್ಗೆ ಚಂದ್ರ ಮೊಗವೀರರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 46/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಹಿರಿಯಡ್ಕ:ದಿನಾಂಕ:27/04/2015 ರಂದು 10:40 ಗಂಟೆಗೆ ಉಡುಪಿ ತಾಲೂಕು ಅಂಜಾರು ಗ್ರಾಮದ ಓಂತಿಬೆಟ್ಟು ಶಾಲೆಯ ಬಳಿಯ ಬಸ್ ನಿಲ್ದಾಣದ ಬಳಿ KA 20 C 3439 ನೇ ರಿಕ್ಷಾ ಚಾಲಕ ತನ್ನ ರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಹಿರಿಯಡ್ಕ ಕಡೆಯಿಂದ ಆತ್ರಾಡಿ ಕಡೆಗೆ ಚಲಾಯಿಸಿಕೊಂಡು ಬಂದು ಪ್ರಯಾಣಿಕರನ್ನು ಇಳಿಸುತ್ತಿದ್ದ ಎ.ಪಿ.ಎಮ್ ಬಸ್ ನಂಬ್ರ KA 20 D 1377 ನೇದಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಆರೋಪಿ ರಿಕ್ಷಾ ಚಾಲಕ ರಕ್ತಗಾಯಗೊಂಡಿದ್ದು, ರಿಕ್ಷಾ ಹಾಗೂ ಬಸ್  ಜಖಂಗೊಂಡಿರುವುದಾಗಿದೆ.ಈ ಬಗ್ಗೆ ಶ್ರೀ ಸಂತೋಷ ಪೂಜಾರಿ (26) ತಂದೆ:ಚೀಂಕ್ರ ಪೂಜಾರಿ, ವಾಸ:ಕೇರಿಮನೆ, ಬಣ್ಣಂಪಳ್ಳಿ, ಪಾಡಿಗಾರ, ಪೆರ್ಡೂರು ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 35/2015 ಕಲಂ 279,337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: