Monday, April 27, 2015

Daily Crimes Reported as On 27/04/2015 at 07:00 Hrs


ಅಪಘಾತ ಪ್ರಕರಣ
  • ಮಣಿಪಾಲ: ದಿನಾಂಕ 26.04.2015 ರಂದು 16:30 ಗಂಟೆಗೆ ಫಿರ್ಯಾದಿ ಅರ್ನಬ್ ಬ್ಯಾನರ್ಜಿ ಇವರ ಗೆಳೆಯ ಉದಿತ್ ಜೈಸ್ವಾಲ್‌ ಮತ್ತು ಆತನ ಗೆಳತಿ ನತಾಶ ಆಲಿಷಾ ಡಯಾಸ್‌‌ ರವರೊಂದಿಗೆ ಮೋಟಾರ್ ಸೈಕಲ್ ನಂಬ್ರ KA19 ED 501 ನೇದರಲ್ಲಿ ಟೈಗರ್‌ ಸರ್ಕಲ್ ನಿಂದ ಸಿಂಡಿಕೇಟ್ ಸರ್ಕಲ್‌ ಕಡೆಗೆ ಹೋಗುತ್ತಿರುವಾಗ ಮಣಿಪಾಲದ ಬಸ್ಸು ನಿಲ್ದಾಣದಿಂದ ಸ್ವಲ್ಪ ಮುಂದೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ರಸ್ತೆಯ ಬದಿಯ ಇಲೆಕ್ಟ್ರಿಕ್ ಕಂಬಕ್ಕೆ ಡಿಕ್ಕಿ ಹೊಡೆದು ಇನ್ನೊಂದು ರಸ್ತೆಗೆ ಬಿದ್ದ ಪರಿಣಾಮ ಇಬ್ಬರಿಗೂ ತೀವೃ ಗಾಯಗೊಂಡಿರುವುದಾಗಿದೆ.  ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/15 ಕಲಂ. 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಶಂಕರನಾರಾಯಣ: ದಿನಾಂಕ: 26/04/2015 ರಂದು ಪಿರ್ಯಾದಿ ಸಾಯಿನಾಥ ಪೂಜಾರಿರವರು ಕೆಏ 20 ಇಬಿ 4669 ನೇ ನಂಬ್ರದ ಮೋಟಾರ ಸೈಕಲ್‌ನಲ್ಲಿ ತನ್ನ ಅತ್ತೆ ಪಾರ್ವತಿ ಪೂಜಾರ್ತಿಯವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು, ಹೆಬ್ರಿ ಕಡೆಯಿಂದ ಹಾಲಾಡಿ ಕಡೆಗೆ ಬರುತ್ತಿರುವಾಗ ಮದ್ಯಾಹ್ನ ಸುಮಾರು 3:30 ಗಂಟೆಗೆ ಬೆಳ್ವೆ ಹತ್ತಿರ ಬರುತ್ತಿರುವಾಗ ಎದುಗಡೆಯಿಂದ ಅಂದರೆ ಹಾಲಾಡಿ ಕಡೆಯಿಂದ ಕೆಎ 20 ಎಎ 2993 ನೇ ನಂಬ್ರದ  ಟ್ಯಾಂಕರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು  ರಸ್ತೆಯ ತೀರ ಬಲಬದಿಗೆ ಬಂದು ಪಿರ್ಯಾದಿದಾರರ ಮೋಟಾರ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ಹಾಗೂ ಪಿರ್ಯಾದಿದಾರರ ಅತ್ತೆ ಮೋಟಾರು ಸೈಕಲ್‌ ಸಮೇತ ರಸ್ತೆಯ ಬದಿಗೆ ಬಿದ್ದಿದ್ದು, ಪಿರ್ಯಾದಿದಾರರಿಗೆ ಬಲ ಕಾಲು, ಬಲ ಕೈ ಗೆ ರಕ್ತ ಗಾಯವಾಗಿದ್ದು, ಹಾಗೂ ಅತ್ತೆಗೆ ತಲೆಗೆ ಗಂಬೀರ ಸ್ವರೂಪದ ಗಾಯಾವಾಗಿರುತ್ತದೆ, ಟ್ಯಾಂಕರ ಚಾಲಕನು ಅಪಘಾತ ನಡೆದ ಸ್ಥಳದಲ್ಲಿ  ಟ್ಯಾಂಕರನ್ನು ನಿಲ್ಲಿಸದೆ ಠಾಣೆಗೆ ಮಾಹಿತಿ ನೀಡದೆ ಪರಾರಿಯಾಗಿರುತ್ತಾನೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 75/15 ಕಲಂ: 279, 337,388 .ಪಿ.ಸಿ ಮತ್ತು 134 &ಬಿ ಐಎಮ್ವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವೇಶ್ಯಾವಾಟಿಕೆ ಪ್ರಕರಣ  
  • ಮಲ್ಪೆ: ದಿನಾಂಕ 26/04/2015 ರಂದು ಮದ್ಯಾಹ್ನ 12:00 ಗಂಟೆಗೆ ಶ್ರೀಕಾಂತ ಕೆ, ಸಿಪಿಐ ಉಡುಪಿ ವೃತ್ತ, ಉಡುಪಿ ಇವರು ಖಚಿತ ವರ್ತಮಾನದ ಮೇರೆಗೆ ಮಹಿಳಾ ಪಿಎಸ್‌ಐ ಉಡುಪಿ ನಗರ ಠಾಣೆ ಹಾಗೂ ಇತರೆ ಸಿಬ್ಬಂದಿಯವರೊಂದಿಗೆ ಮೂಡುತೋನ್ಸೆ ಗ್ರಾಮದ ಕಲ್ಯಾಣಪುರದ ಹಳೆ ಕೆನರಾ ಬ್ಯಾಂಕ್ ಬಳಿ ಇರುವ ಚಂದ್ರಕಲಾ ಎಂಬವರ ಮನೆಯ ಬಳಿ ಹೋಗಿ ಪರಿಶೀಲನೆ ನಡೆಸಿ ಸದ್ರಿ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಮದ್ಯಾಹ್ನ 13:00 ಗಂಟೆಗೆ ದಾಳಿ ನಡೆಸಿ ಆಪಾದಿತರಾದ 1.ಚಂದ್ರಕಲ 2.ಶಿವಪ್ರಜ್ವಲ್‌ @ ಪ್ರಜ್ವಲ್‌, 3.ಸತೀಶ ಪ್ರಭು, 4.ಸುನಿಲ್‌ ಪೂಜಾರಿ ಇವ ರನ್ನು ದಸ್ತ ಗಿರಿ ಮಾಡಿ ಸದ್ರಿ ಕೃತ್ಯಕ್ಕೆ ಬಳಸಿದ ಹೊಸ ರಿಜಿಸ್ಟೇಷನ್‌ ನಂಬ್ರ ಆಗದ ಟಯಟೋ ಇತಿಯೋಸ್‌ ಕಾರು ಹಾಗೂ ಆಪಾಧಿತ ಪ್ರಜ್ವಲ್‌ನ  ಕೆ.ಎ.20.ಇಸಿ.1753ನೇ ಕೆಂಪು ಬಣ್ಣದ  ಅಕ್ಟೀವ್‌ ಹೊಂಡಾ ದ್ವಿಚಕ್ರ ವಾಹನ ಹಾಗೂ ನಗದು 2650/-ನ್ನು ಹಾಗೂ ಈ ಕೃತ್ಯಕ್ಕೆ ಬಳಿಸಿರುವ 4 ಮೊಬೈಲ್‌ ಪೋನುಗಳನ್ನು  ಸ್ವಾಧೀನಪಡಿಸಿಕೊಂಡು ಈ ಬಗ್ಗೆ  ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 62/2015 ಕಲಂ 370(3) ಐಪಿಸಿ ಮತ್ತು ಕಲಂ 3, 4, 5(ಎ), 5(ಸಿ), 6 ಐ.ಟಿ.ಪಿ. ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: