Saturday, April 25, 2015

Daily Crimes Reported as On 25/04/2015 at 17:00 Hrs


ಕಾಣೆ ಪ್ರಕರಣ
  • ಕೋಟ:ಕುಂದಾಪುರ ತಾಲೂಕು ಬೇಳೂರು ಗ್ರಾಮದ ಸ್ಪೂರ್ತಿಧಾಮದಲ್ಲಿ ಪುನರ್ವಸತಿಯಲ್ಲಿದ್ದ ಆನಂದ ಕುಮಾರ್ (15) ಹಾಗೂ ಶಿವಕುಮಾರ್(16) ಎನ್ನುವ ಬಾಲಕರು, ದಿನಾಂಕ:22/04/2015 ಬೆಳಗ್ಗಿನ ಜಾವ 5:30 ಗಂಟೆಯಿಂದ ಸ್ಪೂರ್ತಿಧಾಮದಿಂದ ಕಾಣೆಯಾಗಿದ್ದು, ಸದ್ರಿಯವರ ಬಗ್ಗೆ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ ಎಂಬುದಾಗಿ ಕುಮಾರಿ ಜ್ಯೋತಿ, ಸಂಯೋಜಕರು, ಸ್ಪೂರ್ತಿಧಾಮ, ಬೇಳೂರು, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 77/2015 ಕಲಂ:363 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   
ಅಸ್ವಾಭಾವಿಕ ಮರಣ ಪ್ರಕರಣಗಳು
  • ಬ್ರಹ್ಮಾವರ:ಪಿರ್ಯಾದಿದಾರರಾದ ಪಾಂಡುರಂಗ (22), ತಂದೆ:ಬೆಳ್ಳ ನಾಯ್ಕ ವಾಸ:ನಾಗಶ್ರೀ, ಪಡುಜೆಡ್ಡು, ಪಡುಮನೆ, ಪೆಜಮಂಗೂರು ಗ್ರಾಮ, ಉಡುಪಿ ತಾಲೂಕುರವರ ತಂದೆ ಬೆಳ್ಳ ನಾಯ್ಕ (55) ಎಂಬವರು ವಿಪರೀತ ಮದ್ಯ ಸೇವನೆ ಮಾಡುತ್ತಿದ್ದು, ಅಲ್ಲದೇ ಮಗಳಿಗೆ ಮದುವೆಯಾಗಿಲ್ಲ ಎಂಬ ಚಿಂತೆಯಿಂದ ಇದ್ದು, ಹಣಕಾಸಿನ ತೊಂದರೆ ಕೂಡ ಇದ್ದು, ಈ ಎಲ್ಲಾ ಚಿಂತೆಯಿಂದ ಮಾನಸಿಕವಾಗಿ ನೊಂದು ಅಥವಾ ಬೇರೆ ಯಾವುದೋ ವೈಯಕ್ತಿಕ ಕಾರಣಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡು, ದಿನಾಂಕ:24/04/2015 ರಂದು ಬೆಳಿಗ್ಗೆ 10:00 ಗಂಟೆಯಿಂದ 25/05/2015 ರ ಬೆಳಿಗ್ಗೆ 07:00 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು, ಪೆಜಮಂಗೂರು ಗ್ರಾಮದ ಸಾಸ್ತಾವು ಪಡುಜೆಡ್ಡು ಎಂಬಲ್ಲಿ ಹಾಡಿಯಲ್ಲಿ ಬೋಗಿ ಮರದ ಗಿಡಕ್ಕೆ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ.ಈ ಬಗ್ಗೆ ಪಾಂಡುರಂಗರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 22/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಗಂಗೊಳ್ಳಿ:ಪ್ರೇಮ ದೇವಾಡಿಗ, ನಾಯಕವಾಡಿ, ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆರವರ ಗಂಡನಾದ ಚಂದ್ರ ದೇವಾಡಿಗ (41) ಎಂಬವರು ದಿನಾಂಕ 23/04/2015 ರಂದು ಬೆಳಿಗ್ಗೆ 10:30 ಗಂಟೆಗೆ ಮನೆಯಿಂದ ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದು, ಕಾಣೆಯಾದ ಚಂದ್ರ ದೇವಾಡಿಗನನ್ನು ಮನೆಯವರು ಹುಡುಕಾಡಿದಾಗ ಈ ದಿನ ದಿನಾಂಕ 25/04/2015 ರಂದು ಬೆಳಿಗ್ಗೆ 06:30 ಗಂಟೆಗೆ ಗುಜ್ಜಾಡಿ ಗ್ರಾಮದ ನಾಯಕವಾಡಿ ಎಂಬಲ್ಲಿ ನರಸಿಂಹ ನಾಯಕರವರ ಮನೆಯ ಸಮೀಪ ಇರುವ ಹಾಡಿಯಲ್ಲಿ ಚಂದ್ರ ದೇವಾಡಿಗರ ಮೃತದೇಹ ಪತ್ತಯಾಗಿದ್ದು, ಮೃತರ ಮರಣದಲ್ಲಿ ಸಂಶಯ ಕಂಡುಬರುತ್ತದೆ ಎಂಬುದಾಗಿ ಚಂದ್ರ ದೇವಾಡಿಗರವರ ತಂದೆ ಗೋವಿಂದ ದೇವಾಡಿಗ (73) ತಂದೆ:ಮಹಾಲಿಂಗ ದೇವಾಡಿಗ ನಾಯಕವಾಡಿ, ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 05/2015 ಕಲಂ 174 (ಸಿ) ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: