Saturday, April 25, 2015

Daily Crimes Reported as On 25/04/2015 at 07:00 Hrs

ಅಪಘಾತ ಪ್ರಕರಣ
  • ಕುಂದಾಪುರ:ದಿನಾಂಕ 24/04/2015 ರಂದು ಸಮಯ  ಸುಮಾರು ಸಂಜೆ 4:30  ಗಂಟೆಗೆ ಕುಂದಾಪುರ ತಾಲೂಕು, ಬಸ್ರೂರು  ಗ್ರಾಮದ ಬಸ್ರೂರು ಪೇಟೆಯ ಬಳಿ ರಾಜ್ಯ ರಸ್ತೆಯಲ್ಲಿ ಆಪಾದಿತ ರಂಗಯ್ಯ ಆಚಾರಿ ಎಂಬವರು KA20-B-964 ನೇ ಬಸ್‌‌ ನ್ನು  ಕೆಟ್ಟು ಹೋಗಿರುವ KA 01-AA-4810ನೇ ಬಸ್‌‌ ನ್ನು ಕಬ್ಬಿಣದ ಜಾಯಿಂಟ್ ಮುಖೇನ ತನ್ನ ಬಸ್ಸಿನ ಹಿಂಬದಿಯಲ್ಲಿ ಕಟ್ಟಿಕೊಂಡು ಎಳೆದುಕೊಂಡು ಸಿದ್ದಾಪುರ  ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಾಲನೆ  ಮಾಡಿಕೊಂಡು  ಬಂದು ಎದುರುಗಡೆಯಿಂದ ಬಂದ ವಾಹನ ನೋಡಿ ಒಮ್ಮಲೆ ಬ್ರೇಕ್‌  ಹಾಕಿದ ಪರಿಣಾಮ ಎರಡು ವಾಹನಗಳ ನಡುವಿನ ಜಾಯಿಂಟ್  ಬೆಂಡ್‌  ಆಗಿ  ಹಿಂಬದಿಯ  KA 01-AA-4810ನೇ ಬಸ್‌‌  ರಸ್ತೆಯ  ಬಲಬದಿಗೆ ಚಲಿಸಿದಾಗ ಸದ್ರಿ ಬಸ್ಸಿನ ಹಿಂಬದಿ ರಸ್ತೆಯ ಎಡಬದಿಗೆ ಚಲಿಸಿ ನಡೆದುಕೊಂಡು ಬಸ್ರೂರು ಕಡೆಗೆ ಹೋಗುತ್ತಿದ್ದ  ಪಿರ್ಯಾದಿ  ಹಾಗೂ ನರಸಿಂಹ ಪೂಜಾರಿ ಮತ್ತು ಬಾಬು ಎಂಬವರಿಗೆ ತಾಗಿ ಪಿರ್ಯಾದಿದಾರರು ಗಾಯಗೊಂಡು  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 44/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಪಡುಬಿದ್ರಿ: ದಿನಾಂಕ. 24.04.2015 ರಂದು 10:00 ಗಂಟೆಗೆ ಪಿರ್ಯಾದಿ ಬೇಬಿ ಎಂಬವರು ತನ್ನ ಮನೆಯಾದ ಹೆಜಮಾಡಿ ಕೋಡಿಯಿಂದ ಬಂದು ಹೆಜಮಾಡಿ ಗ್ರಾಮದ ಹೆಜಮಾಡಿ ಪೇಟೆಯ ಆಲಡೆ ಎಂಬಲ್ಲಿ ಬಂದು ಬಸ್ಸಿನಲ್ಲಿ ಇಳಿದು ರೇಶನ್ ಅಂಗಡಿಗೆ ಹೋಗುವರೇ ನಡೆದು ಕೊಂಡು ಹೋಗುತ್ತಿರುವಾಗ ಮುಲ್ಕಿ ಕಡೆಯಿಂದ ಕೆಎ-20-ಎಕ್ಸ್-5127 ನೇ ಮೋಟಾರು ಸೈಕಲ್ ಸವಾರರಾದ ಅಬ್ದುಲ್ ಖಾದರ್ ಎಂಬವರು ಮೋಟಾರು ಸೈಕಲ್ ನ್ನು  ಅತೀ ವೇಗದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಯ ಬದಿಗೆ ಬಿದ್ದು  ಗಾಯವಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 53/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಬೈಂದೂರ: ದಿನಾಂಕ: 23/04/2015 ರಂದು ರಾತ್ರಿ  09:00 ಗಂಟೆಗೆ ಫಿರ್ಯಾದಿ ಶಶಿಧರ್‌ ಹುದಾರ್‌ ಇವರು ಅವರ ಚಿಕ್ಕಮ್ಮನ ಮನೆಯಿಂದ ತನ್ನ ಮನೆಯ ಕಡೆಗೆ  ಕುಂದಾಪುರ ತಾಲೂಕು ತೆಗ್ಗರ್ಸೆ ಗ್ರಾಮದ  ತೆಗ್ಗರ್ಸೆ ಪೇಟೆಯ ಹತ್ತಿರ ಮಲ್ಯರ ಮನೆಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಫಿರ್ಯಾದಿದಾರರ ಪರಿಚಯದ ಕೃಷ್ಣ ಗಾಣಿಗ ರವೀಂದ್ರ ಹಾಗೂ ಶಿವರಾಜ್ ಎಂಬವರು ಒಮ್ಮಲೇ ಬಂದು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಕೃಷ್ಣ ಎಂಬವನು ಫಿರ್ಯಾದಿದಾರರ ಕುತ್ತಿಗೆಯನ್ನು ಹಿಡಿದು  ಕೈಯಿಂದ ಹೊಡೆದು ರವೀಂದ್ರ ಮತ್ತು ಶಿವರಾಜ್ ಎಂಬವರು ಫಿರ್ಯಾದಿದಾರರ ಬೆನ್ನಿಗೆ  ಮತ್ತು ಬಲ ರಟ್ಟೆಗೆ ಕೈಯಿಂದ ಹೊಡೆದು ದೂಡಿ ಹಾಕಿ ಕಾಲಿನಿಂದ ಹೊಟ್ಟೆಯ ಎಡ ಬಾಗಕ್ಕೆ ತುಳಿದರು ಆಗ ಫಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದು ಅವರ ಬಲ ಕಾಲಿನ ಮೊಣಗಂಟಿನ ಕೆಳಗೆ ರಕ್ತಗಾಯವಾಗಿರುತ್ತದೆ. ಫಿರ್ಯಾದಿದಾರರು ಬೊಬ್ಬೆ ಹಾಕಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಓಡಿ ಹೋಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 101/2015 ಕಲಂ  341, 323, 504, 506  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: