Thursday, April 23, 2015

Daily Crimes Reported as On 23/04/2015 at 19:30 Hrsಅಸ್ವಾಭಾವಿಕ ಮರಣ ಪ್ರಕರಣ : 

  • ಕಾಪು : ಬಿ. ಲಕ್ಷ್ಮೀಕಾಂತ್  ರಾವ್ (57) ತಂದೆ: ದಿ ಬಿ. ನಾಗರಾಜ ರಾವ್ ವಾಸ: ಸುದರ್ಶನ ಅಂಬಾಡಿ, ಮಟ್ಟು ಉಡುಪಿ ಇವರ ಮಗ ಬಿ. ಎಲ್. ಶ್ರೀಶ ರಾವ್ ರವರು ದಿನಾಂಕ 21/04/2015ರಂದು ಮಧ್ಯಾಹ್ನ 3:00 ಗಂಟೆಯಿಂದ ಕಾಣೆಯಾಗಿದ್ದು ಈ ಬಗ್ಗೆ ಬಿ. ಲಕ್ಷ್ಮೀಕಾಂತ್ ರಾವ್ ರವರು ದಿನಾಂಕ 22/04/2015ರಂದು ಕಾಪು ಪೊಲೀಸ್ ಠಾಣೆಯಲ್ಲಿ ದೂರು ನಿಡಿದ್ದು, ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 79/2015 ಕಲಂ. ಹುಡುಗ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ. ಈ ದಿನ ಲಕ್ಷ್ಮೀಕಾಂತ್ ರಾವ್ ರವರು ತಮ್ಮ ಮನೆಯ ಬಾವಿಯಿಂದ ಪಂಪ್ ಮೂಲಕ ನೀರು ಸೇದುತ್ತಿದ್ದಾಗ, ಬಾವಿಯ ನೀರು ವಾಸನೆ ಬರುತ್ತಿದ್ದು, ಇಣುಕಿ ನೋಡಿದಾಗ ಮಗ ಶ್ರೀಶ ರಾವ್‌ ರವರ ಮೃತದೇಹ ತೇಲಾಡುತ್ತಿರುವುದು ಕಂಡು ಬಂದಿದ್ದು, ನಂತರ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿಯನ್ನು ನೀಡಿರುವುದಾಗಿದೆ. ಶ್ರೀಶ ರಾವ್‌ ರವರು ಬಿಬಿಎಂ 1ನೇ ವರ್ಷದ ವಿದ್ಯಾರ್ಥಿಯಾಗಿದ್ದು ಕಲಿಯುತ್ತಿರುವ ಸಮಯ ಬಿಬಿಎಂ ಕಲಿಯಲು ಕಷ್ಟ ಇದೆ ಎಂದು ಹೇಳುತ್ತಿದ್ದು, ಅದೇ ಕಾರಣದಿಂದ ಬೇಸರಗೊಂಡು ದಿನಾಂಕ 21/04/2015ರಂದು ಮಧ್ಯಾಹ್ನ 3:00 ಗಂಟೆಯಿಂದ ದಿನಾಂಕ 23/04/201510:30 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಬಾವಿಯ ನೀರಿಗೆ ಹಾರಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಿ. ಲಕ್ಷ್ಮೀಕಾಂತ್  ರಾವ್ ರವರು ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ 12/2015 ಕಲಂ. 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿದೆ. 
ಮನುಷ್ಯ ಕಾಣೆ ಪ್ರಕರಣ :

  • ಕುಂದಾಪುರ : ಆಮಿನಾಬಿ (38) ಗಂಡ: ಬಾಷಾ ಸಾಹೇಬ್‌ ವಾಸ: ಜನತಾ ಕಾಲೋನಿ, ಮೂಡು ಗೋಪಾಡಿ, ಗೋಪಾಡಿ ಗ್ರಾಮ, ಕುಂದಾಪುರ ತಾಲೂಕು ಇವ ಗಂಡ ಬಾಷಾ ಸಾಹೇಬ್‌ ಪ್ರಾಯ 47 ವರ್ಷ ಎಂಬವರು ದಿನಾಂಕ 15.04.2015 ರಂದು ಬೆಳಿಗ್ಗೆ 08:30 ಗಂಟೆಗೆ ಅವರ ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಂಚಲು ಗಂಗೊಳ್ಳಿಗೆ ಹೋಗುವುದಾಗಿ ಹೇಳಿ ಕುಂದಾಪುರ ತಾಲೂಕು ಗೋಪಾಡಿ ಗ್ರಾಮದ ಮೂಡು ಗೋಪಾಡಿ ಜನತಾ ಕಾಲೋನಿಯ ವಾಸ್ತವ್ಯದ ಮನೆಯಿಂದ ಹೋದವರು ಈವರೆಗೆ ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದು, ಕಾಣೆಯಾದವರನ್ನು ಸಂಬಂಧಿಕರ ಜೊತೆಗೆ ಬೇರೆ ಬೇರೆ ಸ್ಥಳಗಳಲ್ಲಿ ಹುಡುಕಾಡಿದ್ದು, ಈವರೆಗೆ ಪತ್ತೆಯಾಗದೆ ಇರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 118/2015, ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: