Thursday, April 23, 2015

Daily Crimes Reported as On 23/04/2015 at 07:00 Hrs
ಇತರೇ ಪ್ರಕರಣ
  • ಉಡುಪಿ ನಗರ :  ಶ್ರೀನಾಥ್  ವಾಸ: ಡೋರ್ ನಂ 48, ಡಿಸಿಎಮ್ ಗಾರ್ಡನ್, ಕುಂಜಿಬೆಟ್ಟು ಉಡುಪಿ ಇವರು ಉಡುಪಿ ಸರ್ವಿಸ್‌ ಬಸ್ಸ್‌ ನಿಲ್ದಾಣದ ಎ.ಬಿ.ಸಿ ಯ ಕ್ರಮದ ಪ್ರಕಾರ ಸರದಿಯಲ್ಲಿ ಸಿ ನಿಲ್ದಾಣದಲ್ಲಿ ಶ್ರೀನಾಥ್ ರ ಸರದಿಗೆ ವಿರುದ್ದವಾಗಿ ಕೆಎ 20 ಡಿ 4354 ರಿಕ್ಷಾದಲ್ಲಿ ಬಂದ ರಮೇಶ ನಾನು ಯಾರೆಂದು ತಿಳಿದಿಲ್ಲವಾ ಪಿಟ್ಟಿ ನಾಗೇಶನ ಬಲಗೈ ಬಂಟ, ನನ್ನ  ಎದುರಿಗೆ ಬಂದರೆ ಜೀವ ಸಮೇತ ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌‌ ಠಾಣಾ ಅಪರಾಧ ಕ್ರಮಾಂಕ 92/2015   ಕಲಂ 504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಉಡುಪಿ ನಗರ :  ರಮೇಶ್ ನಾಯ್ಕ (47) ತಂದೆ: ಲಚ್ಚ ನಾಯ್ಕ ವಾಸ: 8ನೇ ಅಡ್ಡರಸ್ತೆ ಇಂದಿರಾ ನಗರ ಕುಕ್ಕಿಕಟ್ಟೆ, 76 ಬಡಗುಬೆಟ್ಟು ಗ್ರಾಮ ಉಡುಪಿ ಇವರು ದಿನಾಂಕ 21/04/2015 ರಂದು ಸುಮಾರು ಸಂಜೆ 7:30 ಗಂಟೆಗೆ ತ್ರಿವೇಣಿ ಸರ್ಕಲ್‌‌ ಹತ್ತಿರ ರಿಕ್ಷಾ ನಿಲ್ಲಿಸಿ ಕೊಂಡಿದ್ದಾಗ ಇವರ ಪರಿಚಯದ ಶ್ರೀನಾಥ ಕೆಎ 20 ಸಿ 8018 ರಿಕ್ಷಾದಲ್ಲಿ ಬಂದು ರಮೇಶ್‌ ನಾಯ್ಕರನ್ನು ನೋಡಿ ರಿಕ್ಷಾ ನಿಲ್ಲಿಸಿ, ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌‌ ಠಾಣಾ ಅಪರಾಧ ಕ್ರಮಾಂಕ 93/2015   ಕಲಂ 504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಹುಡುಗ ಕಾಣೆ ಪ್ರಕರಣ
  • ಕಾಪು: ದಿನಾಂಕ 21.04.2015 ರಂದು ಮದ್ಯಾಹ್ನ ಬಿ ಎಲ್‌ ಶ್ರೀಶರಾವ್‌ (19) ಸ್ನೇಹ ಟುಟೋರಿಯಲ್‌ ಉಡುಪಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ಮನೆಗೂ ಬಾರದೇ ಸಂಬಂಧಿಕರ ಮನೆಗೆ ಹೋಗದೇ ಕಾಣೆಯಾಗಿರುತ್ತಾನೆ.  ಈ ಬಗ್ಗೆ ಕಾಪು ಪೊಲೀಸ್‌‌ ಠಾಣಾ ಅಪರಾಧ ಕ್ರಮಾಂಕ 79/2015 ಕಲಂ ಹುಡುಗ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಕ್ರಮ ಮದ್ಯ ಮಾರಾಟ ಪ್ರಕರಣ
  • ಶಂಕರನಾರಾಯಣ : ದಿನಾಂಕ 22-04-2015 ರಂದು 18:15 ಗಂಟೆಗೆ ಕುಂದಾಪುರ ತಾಲೂಕು ಹಳ್ಳಿ ಹೊಳೆ ಗ್ರಾಮದ ಚಕ್ರಮೈದಾನ ಎಂಬಲ್ಲಿರುವ ಸರಕಾರಿ ಹಾಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯವನ್ನು ಹೊಂದಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಪಿ.ಎಸ್‌.ಐ ಶ್ರೀ ದೇಜಪ್ಪರವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಮಹಜರು ಮುಖೇನ ದಸ್ತಗಿರಿ ಮಾಡಿ ಆರೋಪಿ ವಿಜಯ ಕುಮಾರ್ ಪ್ರಾಯ 44 ವರ್ಷ ತಂದೆ,  ನಂದಿ ನಾಯ್ಕ   ವಾಸ. ಚಕ್ರ ಮೈದಾನ ಹಳ್ಳಿಹೊಳೆ  ಗ್ರಾಮ ಕುಂದಾಪುರ  ತಾಲೂಕು ಇವರಿಂದ ರೂ. 4360/- ರೂಪಾಯಿ ಮೌಲ್ಯದ HAYWARDS CHEERS WHICKY 90 ML ಎಂದು ಬರೆದ ಸ್ಯಾಚೆಟ್‌ಗಳು-96 ಹಾಗೂ KINGFISHER STRONG ಎಂದು ಬರೆದ 500 ML ಟಿನ್ ಬಿಯರ್ -7, ಖಾಲಿ ಸ್ಯಾಚೆಟ್‌‌‌‌ಗಳು-3 ಹಾಗೂ KINGFISHER STRONG   ಎಂದು ಬರೆದ 500 ML ಟಿನ್  ಬಿಯರ್  ಖಾಲಿ  ಟಿನ್‌‌‌ ಹಾಗೂ ನಗದು ಹಣ 350/- ರೂಪಾಯಿಯನ್ನು ಸ್ವಾಧಿನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 72/15 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   

ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ : ಒಲ್ವಿನ್‌ ಕ್ರಾಸ್ತಾ (40)  ತಂದೆ: ಮಾಕ್ಸಿಮ್‌ ಕ್ರಾಸ್ತಾ ವಾಸ: ವಿನಾಯಕ ನಗರ, ಕುಂಭಾಶಿ ಗ್ರಾಮ, ಕುಂದಾಪುರ ಇವರ ತಂದೆ ಮಾಕ್ಸಿಮ್‌ ಕ್ರಾಸ್ತಾ ಪ್ರಾಯ 65 ವರ್ಷ ರವರು ದಿನಾಂಕ: 22/04/2015 ರಂದು ಸಂಜೆ 4:00 ಗಂಟೆಯಿಂದ 4:40 ಗಂಟೆ ನಡುವಿನ ಸಮಯದಲ್ಲಿ ಕುಂದಾಪುರ ತಾಲೂಕು ಕುಂಭಾಶಿ ಗ್ರಾಮದ ವಿನಾಯಕ ನಗರ ಎಂಬಲ್ಲಿ ತಮ್ಮ ವಾಸದ ಮನೆಯ ಬಳಿ ಇರುವ ಹಲಸಿನ ಮರಕ್ಕೆ ನೈಲಾನ್‌ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣಾ ಯುಡಿಆರ್ ಕ್ರಮಾಂಕ 14/2015 ಕಲಂ: 174 ಸಿಆರ್‌ಪಿಸಿ ಯಂತೆ ಕ್ರಮ ಕೈಗೊಳ್ಳಲಾಗಿದೆ.  
  • ಕುಂದಾಪುರ : ಶ್ರೀಮತಿ ಹೀನಾ ಎನ್ (21)  ಗಂಡ: ಸರ್ಫರಾಜ್ ವಾಸ: ದಾರು ಸ್ಸೂರೂರ್, ರಾಮ ಮಂದಿರ ರಸ್ತೆ, ಕಂಡ್ಲೂರು , ಕಾವ್ರಾಡಿ ಗ್ರಾಮ, ಕುಂದಾಪುರ ಇವರು ಸುಮಾರು 2 ವರ್ಷದ ಹಿಂದೆ ಕಂಡ್ಲೂರಿನ ಸರ್ಫರಾಜ್ ಎಂಬವರನ್ನು ಮದುವೆಯಾಗಿ ಅವರಿಗೆ 11 ತಿಂಗಳ ಶೆಹರಾಜ್ ಎಂಬ ಗಂಡು ಮಗನಿದ್ದು,  ದಿನಾಂಕ: 22/04/2015  ರಂದು ಸಂಜೆ 07:30 ಗಂಟೆಗೆ ಎಂದಿನಂತೆ ಶೆಹರಾಜ್ ನಿಗೆ ಪಿರ್ಯಾದಿದಾರರು ಊಟ ಮಾಡಿಸುವರೇ ಶ್ರೀಮತಿ ಹೀನಾರವರು ತನ್ನ ಮನೆಯ ಹಿಂಬಾಗ ಪೂರ್ವ ದಿಕ್ಕಿನಲ್ಲಿರುವ ಮನೆಯ ಬಾವಿ ಸುಮಾರು 3 ಅಡಿ ಎತ್ತರ ಆವರಣದ ಬಳಿ ಎತ್ತಿಕೊಂಡು ಊಟ ಮಾಡಿಸುತ್ತಿರುವಾಗ ಆತನು ಒಮ್ಮೇಲೆ ಕೈಯಿಂದ ಜಿಗಿದು ತಪ್ಪಿ ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ 15/2015 ಕಲಂ: 174 ಸಿಆರ್‌ಪಿಸಿ ಯಂತೆ ಕ್ರಮ ಕೈಗೊಳ್ಳಲಾಗಿದೆ. 
     

No comments: