Wednesday, April 22, 2015

Daily Crimes Reported as On 22/04/2015 at 07:00 Hrs

ಅಪಘಾತ ಪ್ರಕರಣ:
  • ಉಡುಪಿ ಸಂಚಾರ: ದಿನಾಂಕ 21/04/2015 ರಂದು ಬೆಳ್ಳಿಗ್ಗೆ ಸಮಯ ಸುಮಾರು 11-30 ಗಂಟೆಗೆ ಪಿರ್ಯಾದಿ ವಿಜಯಕುಮಾರ್ (29) ತಂದೆ:ಗೋಪಾಲ್ ಪೂಜಾರಿ ವಾಸ:ಮಲ್ಲಿಕಾ ನಿಲಯ ಕೋಳಗಿರಿ ಪೋಸ್ಟ್ ಚಕ್ಕೂಲಿಕಟ್ಟೆ ಉಪ್ಪೂರು ಗ್ರಾಮ ಉಡುಪಿ.ಇವರು ಕೆಎ 20-ಎ 8783 ನೇ 407 ಟೆಂಪೊವನ್ನು ಚಲಾಯಿಸಿಕೊಂಡು ಗುಂಡಿಬೈಲು ಪೆಟ್ರೋಲ್ ಬಂಕ್ ಬಳಿ ಇರುವ ಗುಂಡಿಬೈಲು ಮಾರ್ಗ ನಿಟ್ಟೂರು ಕಡೆಗೆ ತಿರುಗುವ ಯು ತಿರುವಿನಲ್ಲಿ ತಿರುಗಿಸಿ ಗೋಡಾನ್ ಗೆ ಹೋಗುವರೇ ಸೂಚನೆ ನೀಡಿ ಟೆಂಪೋವನ್ನು ನಿಲ್ಲಿಸಿದ್ದು, ಅಷ್ಟರಲ್ಲಿ ಕಲ್ಸಂಕ ಕಡೆಯಿಂದ ಗುಂಡಿಬೈಲು ಕಡೆಗೆ ಕೆಎ 20 ಡಿ 3503 ನೇ ರಿಕ್ಷಾ ಚಾಲಕ ಪ್ರಭು ಕುಮಾರ್ ರಿಕ್ಷಾ ವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಗೂಡ್ಸ್ ಟೆಂಪೋ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ದೀಪಾ ಎಂಬವರ ಬಲಬದಿಯ ದವಡೆಯ ಬಳಿ ಗುದ್ದಿದ ಜಖಂ ಆಗಿರುತ್ತದೆ. ರಿಕ್ಷಾ ಚಾಲಕ ಪ್ರಭು ಕುಮಾರ್ ರವರಿಗೂ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2015 ಕಲಂ. 279,337, ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
 ಹಲ್ಲೆ ಪ್ರಕರಣ:
  • ಬೈಂದೂರು: ದಿನಾಂಕ 08/04/2015 ರಂದು ಬೆಳಿಗ್ಗೆ 09:00 ಗಂಟೆಯ ಸಮಯಕ್ಕೆ  ಕುಂದಾಪುರ ತಾಲುಕು ಬೈಂದೂರು ಗ್ರಾಮದ ನೇರ್ಲಾಡಿಮನೆ ಸೂರ್ಕುಂದ ಎಂಬಲ್ಲಿರುವ ಪಿರ್ಯಾಧಿ ಪ್ರಭಾಕರ ಶೆಟ್ಟಿ ಪ್ರಾಯ: 42 ತಂದೆ: ಬುದ್ದಿವಂತ ಶೆಟ್ಟಿ ವಾಸ: ನೇರ್ಲಾಡಿಮನೆ  ಸೂರ್ಕುಂದ ಬೈಂದೂರು ಗ್ರಾಮ  ಇವರ ಮನೆಯ ಎದುರು ಹಾದು ಹೋಗುವ ಬೈಂದೂರಿನಿಂದ ಗಂಗನಾಡಿಗೆ ಹೋಗುವ ತಾರು  ರಸ್ತೆಯ ಡಾಂಬರೀಕರಣ ಕಾಮಗಾರಿ ನಡೆಯುತ್ತಿರುವ ಸಮಯ ಆರೋಪಿತರಾದ ಮಹಾಬಲ ಶೆಟ್ಟಿಯವರು  ಅಲ್ಲಿಗೆ ಬಂದು ರಸ್ತೆ ಡಾಂಬರೀಕರಣ ಮಾಡದಂತೆ ತಡೆದಿದ್ದು ಆಗ ಪಿರ್ಯಾಧಿದಾರರು ಊರಿನ ಗ್ರಾಮಸ್ಥರ ಸಮಕ್ಷಮದಲ್ಲಿ ಆರೋಪಿ ಮಹಾಬಲ ಶೆಟ್ಟಿಯವರಲ್ಲಿ ಯಾಕೆ ಕೆಲಸಕ್ಕೆ ಅಡ್ಡಿ ಪಡಿಸುತ್ತೀಯಾ ಎಂದು ಕೇಳಿದ್ದಕ್ಕೆ ಆರೋಪಿತರು ಪಿರ್ಯಾಧಿದಾರರಲ್ಲಿ  ಇದನ್ನು ಕೇಳಲಿಕ್ಕೆ ನೀನು ಯಾರು ನಿನಗೆ ಏನು  ಅಧಿಕಾರ ಇದೆ ಎಂದು ಹೇಳಿ ಆರೋಪಿ ಮಹಾಬಲ ಶೆಟ್ಟಿಯು ಪಿರ್ಯಾಧಿದಾರರ ಎದೆಗೆ ಕೈಹಾಕಿ ದೂಡಿ ಕಾಲಿನಿಂದ ತುಳಿದು  ಅವಾಚ್ಯವಾಗಿ ಬೈದು ಇನ್ನು ಮುಂದಕ್ಕೆ ತನ್ನ ವಿಚಾರಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ   ಆರೋಪಿ ಮಹಾಬಲ ಶೆಟ್ಟಿಯು  ಪಿರ್ಯಾಧಿದಾರರನ್ನು ದೂಡಿದ ಪರಿಣಾಮ ಪಿರ್ಯಾಧಿದಾರರು ನೆಲಕ್ಕೆ ಬಿದ್ದು ಅವರಿಗೆ ಸೊಂಟ ಹಾಗೂ ಬೆನ್ನಿಗೆ ನೋವಾಗಿರುತ್ತದೆ ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 93/2015 ಕಲಂ : 323, 504, 506 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬೈಂದೂರು: ಪಿರ್ಯಾಧಿ ಪ್ರೇಮಲತಾ ಶೆಟ್ಟಿ (41)ತಂದೆ: ಮಹಾಬಲ ಶೆಟ್ಟಿ ವಾಸ: ನೇರ್ಲಾಡಿಮನೆ  ಸೂರ್ಕುಂದ ಬೈಂದೂರು ಗ್ರಾಮ  ಇವರು ಗಂಡ ಹಾಗೂ ಚಂದ್ರಾವತಿಯವರೊಂದಿಗೆ ದಿನಾಂಕ 08/04/2015 ರಂದು ಬೆಳಿಗ್ಗೆ 10:00 ಗಂಟೆಗೆ ಕುಂದಾಪುರ ತಾಲುಕು ಬೈಂದೂರು ಗ್ರಾಮದ ತೊಂಡೆಮಕ್ಕಿ ಎಂಬಲ್ಲಿರುವ ಅವರ ಜಾಗದ ಪಕ್ಕದಲ್ಲಿ  ಹಾದು ಹೋಗುವ ಬೈಂದೂರು ಗಂಗ ನಾಡು ರಸ್ತೆಯ ಅಗಲೀಕರಣ ನಡೆಯುತ್ತಿರುವ ಸ್ಥಳಕ್ಕೆ ಹೋಗಿ ರಸ್ತೆ ಅಗಲೀಕರಣ ಮಾಡುತ್ತಿರುವ ಜಾಗವು ತಮ್ಮ ಜಾಗವೆಂದು ರಸ್ತೆ ಕೆಲಸ ಮಾಡುತ್ತಿರುವವರಲ್ಲಿ ತಿಳಿಸಿದಾಗ ಆರೋಪಿತರಾದ ಪ್ರಭಾಕರ ಶೆಟ್ಟಿ , ನರಸಿಂಹ ಶೆಟ್ಟಿ , ವೆಂಕಪ್ಪ , ಪ್ರವೀಣ್‌ ಹಾಗೂ ಇತರರು ಅಲ್ಲಿಗೆ ಬಂದು ಪಿರ್ಯಾಧಿದಾರರು ಹಾಗೂ ಅವರೊಂದಿಗಿದ್ದವರನ್ನು ಉದ್ದೇಶಿಸಿ  ಅವಾಚ್ಯ ಶಬ್ದಗಳಿಂದ ಬೈದು ಇದು ಸರ್ಕಾರಿ ಜಾಗ ರಸ್ತೆ ಅಗಲೀಕರಣ ಮಾಡಲು ಬಿಡಿಎಂದು ಹೇಳಿ ಹೊಡೆಯಲು ಬಂದಿದ್ದು ಪಿರ್ಯಾಧಿದಾರರು ಹಾಗೂ ಚಂದ್ರಾವತಿಯವರು ಅಲ್ಲಿಂದ ಓಡುವಾಗ ನೋವಾಗಿರುವುದಾಗಿದೆ ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 94/2015 ಕಲಂ : 504, 506 ಜೊತೆಗೆ 34 ಐ ಪಿ ಸಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬೈಂದೂರು: ದಿನಾಂಕ 20/04/2015 ರಂದು ಸಂಜೆ 07:30 ಗಂಟೆಯ ಸಮಯಕ್ಕೆ ಪಿರ್ಯಾಧಿ ಶಂಕರ ದೇವಾಡಿಗ (40) ತಂದೆ: ದಿ| ಮಂಜಯ್ಯ ದೇವಾಡಿಗ ವಾಸ: ಹುಟ್ಟಿನ ಮನೆ ಬಂಕೇಶ್ವರ ಯಡ್ತರೆ ಗ್ರಾಮ  ಇವರು ಕೆ ಎ 20 ಇಸಿ 7631 ನೇ ಕೈನೆಟಿಕ್‌ಹೊಂಡದಲ್ಲಿ ಮಂಜುನಾಥ ಪೂಜಾರಿಯವರನ್ನು ಕುಳ್ಳಿರಿಸಿಕೊಂಡು ಬೈಂದೂರಿನಿಂದ ತನ್ನ ಮನೆಗೆ ಗಂಗನಾಡು ರಸ್ತೆಯಲ್ಲಿ ಹೋಗುತ್ತಾ ಕುಂದಾಪುರ ತಾಲೂಕು ಯಡ್ತರೆ ಗ್ರಾಮದ ಎಮ್‌ಡಿ ಐಸ್‌ಕ್ರೀಂ ಪಾರ್ಲರ್‌ಅಂಗಡಿಯ ಎದುರು ತಲುಪುತ್ತಿದ್ದಾಗ  ಎದುರಿನಿಂದ ಶೇಷಗಿರಿ ಎಂಬುವವನು ಕೆ.20 ಡಿ 0881 ನೇ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರು ಸವಾರಿ ಮಾಡುತ್ತಿದ್ದ ಕೈನೆಟಿಕ್‌ಹೊಂಡಾಕ್ಕೆ ಅಡ್ಡ ಇಟ್ಟು ಪಿರ್ಯಾಧಿದಾರರನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅಟೋರಿಕ್ಷಾದಿಂದ ಶೇಷಗಿರಿ ದೇವಾಡಿಗ, ಮಹೇಶ, ಮಹಾಬಲ, ಮತ್ತು ರಾಜ ಪೂಜಾರಿಯವರು ಇಳಿದು ಬಂದು ಮಹಾಬಲ ದೇವಾಡಿಗನು ಪಿರ್ಯಾಧಿದಾರರರನ್ನು ಉದ್ದೇಶಿಸಿ ನೀನು ಬಾರಿ ನನ್ನ ಮೇಲೆ ಕಂಪ್ಲೇಂಟ್‌ಕೊಡುತ್ತೀಯಾ ನಿನ್ನನ್ನು ಬಿಡುವುದಿಲ್ಲ  ಎಂದು ಬೆದರಿಕೆ ಹಾಕಿ ಆತನ ಕೈಯಲ್ಲಿ ಇದ್ದ ಒಂದು ದೊಣ್ಣೆಯಿಂದ ಪಿರ್ಯಾಧಿದಾರರ ಬಲಬದಿಯ ಪಕ್ಕೆಲುಬಿಗೆ ಮತ್ತು ಬೆನ್ನಿಗೆ ಹೊಡೆದನು ಆರೋಪಿ ಶೇಷಗಿರಿ ದೇವಾಡಿಗನು ಪಿರ್ಯಾಧಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಮತ್ತು ಕೈಯಿಂದ ಪಿರ್ಯಾಧಿದಾರರ ಮುಖಕ್ಕೆ ಮತ್ತು ಕೆನ್ನೆಗೆ ಹೊಡೆದನು ಉಳಿದ ಆರೋಪಿತರು ಕೂಡಾ ಪಿರ್ಯಾಧಿದಾರರ ಬೆನ್ನಿಗೆ ಕೈಯಿಂದ ಗುದ್ದಿರುತ್ತಾರೆ.ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 95/2015 ಕಲಂ : 341, 324, 504, 506  ಜೊತೆಗೆ 34 ಐ ಪಿ ಸಿ    ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ . 
  • ಬೈಂದೂರು:ದಿನಾಂಕ 20/04/2015 ರಂದು ಸಂಜೆ 07:30 ಗಂಟೆಯ ಸಮಯಕ್ಕೆ ಪಿರ್ಯಾಧಿ ಶೇಷಗಿರಿ ದೇವಾಡಿಗ (35) ತಂದೆ: ದಿ| ವೆಂಕಟಯ್ಯ ದೇವಾಡಿಗ ವಾಸ: ಹೊಳೆಬಾಗಿಲುಮನೆ ವಿಧ್ಯಾನಗರ ಬೈಂದೂರು ಗ್ರಾಮ ಇವರು ಕುಂದಾಪುರ ತಾಲೂಕು ಯಡ್ತರೆ ಗ್ರಾಮದಲ್ಲಿರುವ ಅವರ ಅಣ್ಣನ ಎಮ್‌ಡಿ ಐಸ್‌ಕ್ರೀಂ ಪಾರ್ಲರ್‌ಅಂಗಡಿಯಿಂದ ಅಲ್ಲಯೆ ಪಕ್ಕದಲ್ಲಿರುವ ನಾಗರಾಜ ಎಂಬುವವರ ಅಂಗಡಿಗೆ ನಡೆದುಕೊಂಡು ಹೋಗುತ್ತಿರುವ ಸಮಯ ಆರೋಪಿ ಶಂಕರ ದೇವಾಡಿಗನು ಪಿರ್ಯಾಧಿದಾರರ ಹಿಂದಿನಿಂದ ಬಂದು ಪಿರ್ಯಾಧಿದಾರರ ಕಾಲರ್‌ಪಟ್ಟಿಯನ್ನು ಹಿಂದಿನಿಂದ ಹಿಡಿದು ಎಳೆದು ಪಿರ್ಯಾಧಿದಾರರನ್ನು ಉದ್ದೇಶಿಸಿ ನೀನು ನಿನ್ನ ಅಣ್ಣ ಮಹಾಬಲ ದೇವಾಡಿಗನೊಡನೆ ಸೇರಿಕೊಂಡು ಬಾರಿ ಹಾರಾಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಆತನ ಕೈಯಲ್ಲಿ ಇದ್ದ ಒಂದು ಸೋಂಟೆಯಿಂದ ಪಿರ್ಯಾಧಿದಾರರ ಬಲ ಬದಿ ಹೊಟ್ಟೆಗೆ , ಬಲಕೈ ರಟ್ಟೆಗೆ ಹೊಡೆದನು. ಆರೋಪಿ ಅಣ್ಣಪ್ಪ ದೇವಾಡಿಗನು ಆತನ ಕಾಲಿನಿಂದ ಪಿರ್ಯಾಧಿದಾರರ ಬಲ ಕಾಲಿಗೆ ತುಳಿದನು ಆರೋಪಿ ಮಂಜುನಾಥ ಪೂಜಾರಿ ಮತ್ತು ಮರ್ಲ ದೇವಾಡಿಗ ಎಂಬುವವರ ಅವರ ಕೈಯಿಂದ ಪಿರ್ಯಾಧಿದಾರರ ಮುಖಕ್ಕೆ ಬೆನ್ನಿಗೆ ಹೊಡೆದು ಎಲ್ಲಾ ಆರೋಪಿತರು ಒಟ್ಟು ಸೇರಿ ಪಿರ್ಯಾಧಿದಾರರನ್ನು ಉದ್ದೇಶಿಸಿ ನಿನ್ನನ್ನು ನಿನ್ನ ಅಣ್ಣ ಮಹಾಬಲ ದೇವಾಡಿಗನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 96/2015 ಕಲಂ : 324, 323, 504, 506  ಜೊತೆಗೆ 34 ಐ ಪಿ ಸಿ  ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ . 
  • ಬೈಂದೂರು: ದಿನಾಂಕ 20/04/2015 ರಂದು ಪಿರ್ಯಾಧಿ ಚಂದ್ರ ಮೊಗವೀರ (39) ತಂದೆ: ಜೋಗ ಮೊಗವೀರ   ವಾಸ: ದುರ್ಮಿ ಪಡುವರಿ ಗ್ರಾಮ ಕುಂದಾಪುರ ತಾಲೂಕು ಇವರು ದ್ವಿಚಕ್ರ ವಾಹನದಲ್ಲಿ ಬೈಂದೂರು ಗಂಗನಾಡು ರಸ್ತೆಯಲ್ಲಿ ಬೈಂದೂರಿನಿಂದ  ವಾಪಾಸ್ಸು ತೊಂಡೆಮಕ್ಕಿಗೆ ಹೋಗುತ್ತಿರುವಾಗ ಯಡ್ತರೆ ಗ್ರಾಮದ ಮಹಾಬಲ ದೇವಾಡಿಗ ಅಂಗಡಿಯಿಂದ ಸ್ವಲ್ಪ ಮುಂದೆ ಒಬ್ಬ ವ್ಯಕ್ತಿಯು ಪಿರ್ಯಾಧಿದಾರರಲ್ಲಿ ಅವರ ದ್ವಿಚಕ್ರ ವಾಹನವನ್ನು ನಿಲ್ಲಿಸುವಂತೆ ಸೂಚಿಸಿ ತಾನು ತೊಂಡೆಮಕ್ಕಿಗೆ ಬರುವುದಾಗಿ ಹೇಳಿ ಪಿರ್ಯಾಧಿದಾರರ ದ್ವಿಚಕ್ರ ವಾಹನದಲ್ಲಿ ಸಹಸವಾರನಾಗಿ ಕುಳಿತು ಕೊಂಡು ಸಮಯ ಸುಮಾರು ರಾತ್ರಿ 08:30 ಗಂಟೆಗೆ ಕುಂದಾಪುರ ತಾಲೂಕು ಯಡ್ತರೆ ಗ್ರಾಮದ ಮಹಾಗಣಪತಿ ದೇವಸ್ಥಾನದ ಹತ್ತಿರ ತಲುಪುತ್ತಿದ್ದಂತೆ ಇಲ್ಲಿ ಇಳಿಯುವುದಾಗಿ ತಿಳಿಸಿ ಸ್ಕೂಟಿಯಿಂದ ಇಳಿದ ಕೂಡಲೇ ಪಿರ್ಯಾಧಿದಾರರನ್ನು ಉದ್ದೇಶಿಸಿ ನೀನು ಮಹಾಬಲ ದೇವಾಡಿಗನಿಗೆ ಬಾರಿ ಬೆಂಬಲ ಕೊಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದಬೈದು ಪಿರ್ಯಾಧಿದಾರರ ಮುಖಕ್ಕೆ ಎಡಕಣ್ಣಿಗೆ ಗುದ್ದಿದನು ಅದೇ ಸಮಯಕ್ಕೆ ಅಲ್ಲಿಗೆ ಬಂದ ಉಳಿದ ಆರೋಪಿತರು ಅವರ ಕೈಯಲ್ಲಿದ್ದ ಕಲ್ಲಿನಿಂದ ಪಿರ್ಯಾಧಿದಾರರ ಎಡ ಕಾಲಿಗೆ ಗುದ್ದಿದರು ಹಾಗೂ ಅವರು ಕೈಯಿಂದ ಪಿರ್ಯಾಧಿದಾರರ ತಲೆಗೆ ಮುಖಕ್ಕೆ ಹೊಡೆದರು. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ  97/2015 ಕಲಂ :, 323, 326, 504, 506  ಜೊತೆಗೆ 34 ಐ ಪಿ ಸಿ  ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ . 
ಅಸ್ವಾಭಾವಿಕ ಮರಣ ಪ್ರಕರಣ:
  • ಬೈಂದೂರು: ಫಿರ್ಯಾದಿ ಲಿಂಟಾ ಪ್ರಾಯ: 24 ವರ್ಷ ಗಂಡ: ಅನೀಲ್‌ ವಾಸ: ತೂಮಿನ ಕೊಟ್ಟರಿತ್ತಲ ಮನೆ ಜಡ್ಕಲ್‌ ಗ್ರಾಮ ಇವರ ತಂದೆ ವರ್ಗೀಸ್‌ ಕೆ.ಪಿ ರವರು (47) ಎಂಬುವವರು ಕುಂದಾಪುರ ತಾಲುಕು ಬೈಂದೂರು ಗ್ರಾಮದ ನಾಗರಮಕ್ಕಿ ಎಂಬಲ್ಲಿ ಜೋಯಿಯವರ ರಬ್ಬರ್‌ ತೋಟದ ಬಿಡಾರದಲ್ಲಿ ಹೆಂಡತಿ ಹೆಂಡತಿ ಲಿಸ್ಸಿ ಹಾಗೂ ಮಗ ರೋಶನ್‌ರವರೊಂದಿಗೆ ವಾಸ ಮಾಡಿಕೊಂಡಿದ್ದು ವರ್ಗೀಸ್‌ ರವರು ಯಾವಾಗಲು ಮನೆಯಲ್ಲಿ ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದುದರಿಂದ ಮಗ ರೋಶನ್‌ ತಾಯಿಯನ್ನು ಕೇರಳದಲ್ಲಿರುವ ತಾಯಿಯ ತಮ್ಮನ ಮನೆಗೆ ಕರೆದುಕೊಂಡು ಹೋಗಿದ್ದರಿಂದ ವರ್ಗೀಸ್‌ ಕೆ.ಪಿ ರವರು ಮನೆಯಲ್ಲಿ ಒಬ್ಬಂಟಿಗನಾದೆ ಎಂಬ ಕೊರಗಿನಿಂದ ಮಾನಸಿಕವಾಗಿ ನೊಂದುಕೊಂಡು ದಿನಾಂಕ 21/04/2015 ರಂದು ಬೆಳಿಗ್ಗೆ 09:00 ಗಂಟೆಯ ಮೊದಲು ಅವರು ವಾಸವಿರುವ ಕುಂದಾಪುರ ತಾಲುಕು ಬೈಂದೂರು ಗ್ರಾಮದ ನಾಗರಮಕ್ಕಿ ಎಂಬಲ್ಲಿ ಜೋಯಿಯವರ ರಬ್ಬರ್‌ ತೋಟದ ಬಿಡಾರದಲ್ಲಿನ ಅಡಿಗೆ ರೋಮಿನ ಮಾಡಿನ ಮರದ ಅಡ್ಡಕ್ಕೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಬೈಂದೂರು ಠಾಣಾ ಯು.ಡಿ.ಆರ್‌ ಸಂಖ್ಯೆ12/2015 ಕಲಂ: 174   ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ . 
  • ಕುಂದಾಪುರ: ಪಿರ್ಯಾದಿ ಪ್ರಮೋದ್ (28) ತಂದೆ: ಕೃಷ್ಣ ರಾಜ ಉಪಾಧ್ಯಾಯ ವಾಸ: ಶ್ರೀಧಾಮ ಆನೆಗುಡ್ಡೆ ದೇವಸ್ಥಾನ ಹಿಂಭಾಗ, ಕುಂಬಾಶಿ ಗ್ರಾಮ, ಕುಂದಾಪುರ ರವರು  ಈ ದಿನ ದಿನಾಂಕ: 21/04/2015 ರಂದು ಕೆಲಸ ಮುಗಿಸಿ ಸಂಜೆ 5:30 ಗಂಟೆಗೆ ಮನೆಗೆ ಬರುತ್ತಾ ವಕ್ವಾಡಿ ರಸ್ತೆಯಿಂದ ಪಿರ್ಯಾದಿದಾರರ ಮನೆಗೆ ತಿರುಗುವ ರಸ್ತೆಯ ಬದಿಯಲ್ಲಿ ಪ್ರಾಯ ಸುಮಾರು 65 ರಿಂದ 70 ವರ್ಷದ ಅಪರಿಚಿತ ಗಂಡಸು ಅಂಗಾತನೆ ನೆಲದ ಮೇಲೆ ಮಲಗಿದ ಸ್ಥಿತಿಯಲ್ಲಿ ಇದ್ದುದ್ದನ್ನು ಜೊತೆಯಲ್ಲಿದ್ದ ರಮೇಶ್ ರವರೊಂದಿಗೆ ಹತ್ತಿರ ಹೋಗಿ ಗಮನಿಸಿದಾಗ ಮೃತ ಪಟ್ಟಿರುವುದು ಕಂಡು ಬಂದಿದ್ದು, ಸದ್ರಿ ವ್ಯಕ್ತಿಯು ಆನೆಗುಡ್ಡೆ ದೇವಸ್ಥಾನ ಪರಿಸರದಲ್ಲಿ ತಿರುಗಾಡಿಕೊಂಡು ಬಿಕ್ಷೆ ಬೇಡುತ್ತಿದ್ದವರಾಗಿದ್ದು, ವಯೋ ಸಹಜವಾಗಿ ಅಥವಾ ಇನ್ಯಾವುದೋ ಕಾರಣದಿಂದ ಮೃತ ಪಟ್ಟಿರಬಹುದಾಗಿದೆ ಎನ್ನುವುದಾಗಿ ಕುಂದಾಪುರಠಾಣೆಗೆ ದೂರುನೀಡಿದ್ದು ಠಾಣೆಯಲ್ಲಿ ಯು.ಡಿ.ಆರ್‌ ಸಂಖ್ಯೆ 13/2015  ಕಲಂ: 174   ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: