Tuesday, April 21, 2015

Daily Crimes Reported as On 21/04/2015 at 07:00 Hrs

ಅಪಘಾತ ಪ್ರಕರಣಗಳು :
  • ಬ್ರಹ್ಮಾವರ : ದಿನಾಂಕ 18/04/2015 ರಂದು ಸಂಜೆ ಸುಮಾರು 7:30 ಗಂಟೆ ಸಮಯಕ್ಕೆ ಅರವಿಂದ ಭಟ್ (26) ತಂದೆ ಪ್ರಭಾಕರ ಭಟ್ ವಾಸ” ಪರಾರಿ ಕೊಳಲಗಿರಿ ಪೋಸ್ಟ್ ಉಪ್ಪೂರು ಗ್ರಾಮ ಇವರು ತನ್ನ ಬಾಬ್ತು ಕೆಎ-20-ಇಡಿ-0225 ಟಿ.ವಿ.ಎಸ್ ಬೈಕ್ ನಲ್ಲಿ ಕೊಳಲಗಿರಿಯಿಂದ ಕೆ.ಜಿ ರೋಡ್ ಕಡೆಗೆ ಹೋಗುತ್ತಾ ಉಪ್ಪೂರು ಪಂಚಾಯತ್ ಕಚೇರಿಯಿಂದ ಸ್ವಲ್ಪ ಮುಂದೆ ತಲುಪುವಾಗ ಕೆ.ಜಿ ರೋಡ್ ಕಡೆಯಿಂದ ಕೊಳಲಗಿರಿ ಕಡೆಗೆ ಆಪಾದಿತ ದಾಮೋದರ್ ನಾಯಕ್ ಎಂಬುವರು ತನ್ನ ಬೈಕ್  ನಂಬ್ರ ಕೆಎ-20ಇಬಿ-4951ರಲ್ಲಿ ಸಂಜಯ್ ನಾಯಕ್ ಎಂಬುವರನ್ನು ಕೂರಿಸಿಕೊಂಡು ಬೈಕ್ ನ್ನು ಅತೀ ವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿ ಅರವಿಂದ್‌ ಭಟ್‌ರವರ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಅರವಿಂದ್‌ ಭಟ್‌ರು ರಸ್ತೆಗೆ ಬಿದ್ದು ಅವರ ಎಡಕಾಲು ಮತ್ತು ಎಡಕೈಗೆ ಮೂಳೆ ಮುರಿತದ ಗಾಯ ಉಂಟಾಗಿದ್ದು ಆಪಾದಿತ ದಾಮೋದರ್ ನಾಯಕ್ ಮತ್ತು ಸಹಸವಾರರಿಗೂ ಕೂಡಾ ಜಖಂ ಉಂಟಾಗಿರುತ್ತದೆ. ಈ ಬಗ್ಗೆ ಅರವಿಂದ್‌ ಭಟ್‌ರವರು ನೀಡಿದದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪ ರಾಧ ಕ್ರಮಾಂಕ:  63/15 ಕಲಂ: 279,337,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿದೆ.
  • ಉಡುಪಿ ಸಂಚಾರ  : ದಿನಾಂಕ 20/04/2015 ರಂದು ಸಮಯ ಸುಮಾರು ಸಾಯಂಕಾಲ 6.15 ಗಂಟೆ ಸಮಯಕ್ಕೆ ಬಸಪ್ಪ (63) ತಂದೆ :ದಿ.ಶಿವಪ್ಪ ವಾಸ:ಮಾದವ ನಾಯ್ಕ, ಮಾಯಾಗುಂಡಿ ಪುತ್ತೂರು ಗ್ರಾಮ ಉಡುಪಿ ಇವರು ಗುಂಡಿಬೈಲಿನಲ್ಲಿ  ಕೆಲಸ ಮುಗಿಸಿಕೊಂಡು ನಡೆದುಕೊಂಡು ಮನೆಯಾದ ಪುತ್ತೂರು ಕಡೆಗೆ ಹೋಗುತ್ತಿದ್ದು,ಅಂಬಾಗಿಲಿನ  ಶ್ರೇಯ ಗ್ಯಾರೇಜ್‌ನ ಬಳಿ ತಲುಪುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ  ಉಡುಪಿ ಕಡೆಯಿಂದ ಸಂತೆಕಟ್ಟೆ ಕಡೆಗೆ ಹೋಗುವಾಗ ಕೆಎ 20 ಪಿ 1867 ನೇ ಕಾರು ಚಾಲಕನು ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಎಡಬದಿಗೆ ಬಂದು ನಡೆದುಕೊಂಡು ಹೋಗುತ್ತಿದ್ದ ಬಸಪ್ಪರಿಗೆ ಡಿಕ್ಕಿ ಹೊಡೆದ ಪರಿಣಾಮ  ರಸ್ತೆಗೆ ಬಿದ್ದು, ಎಡಕೆನ್ನೆಗೆ, ಗಲ್ಲಕ್ಕೆ ಹಾಗೂ ಹಣೆಗೆ ರಕ್ತಗಾಯವಾಗಿರುತ್ತದೆ. ಕೂಡಲೇ ಅಲ್ಲಿ ಸೇರಿದವರು ಉಪಚರಿಸಿ ನಂತರ ಚಿಕಿತ್ಸೆ ಬಗ್ಗೆ ಒಂದು ರಿಕ್ಷಾದಲ್ಲಿ ಹೈಟೆಕ್ ಆಸ್ಪತ್ರೆ ಕರೆದುಕೊಂಡು ಬಂದಿದ್ದು, ಪರಿಕ್ಷೀಸಿದ ವೈದ್ಯರು ಬಸಪ್ಪರನ್ನು  ಒಳರೋಗಿಯಾಗಿ ದಾಖಲಿಸಿರುತ್ತಾರೆ. ಬಸಪ್ಪರಿಗೆ ಡಿಕ್ಕಿ ಹೊಡೆದ ಕಾರು ಚಾಲಕನು ಕಾರನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಅಪಘಾತಕ್ಕೆ ಕೆಎ-20 ಪಿ-1867 ನೇ ಕಾರು ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ  ಚಾಲನೇಯೇ ಕಾರಣವಾಗಿದ್ದು, ಸದ್ರಿ ಕಾರು ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೋಳ್ಳಬೇಕಾಗಿ ಬಸಪ್ಪರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆ. ಅಪರಾಧ ಕ್ರಮಾಂಕ 33/2015 ಕಲಂ. 279,337, ಐಪಿಸಿ ಮತ್ತು 134 (ಎ)(ಬಿ) ಐಎಮ್‌ವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: