Wednesday, April 29, 2015

Daily Crimes Reported as On 29/04/2015 at 07:00 Hrs



ಜೀವ ಬೆದರಿಕೆ ಪ್ರಕರಣ:

  • ಉಡುಪಿ ನಗರ : ಫಿರ್ಯಾದಿ ಪ್ರಭಾಕರ ಕೆ ಎಸ್‌ (48) ಆಡಳಿತ ನಿರ್ಧೇಶಕರು ಜನರಲ್‌ ಇನ್ಸುರೆನ್ಸ್‌‌ ಎಂಪ್ಲಾಯಿಸ್‌‌ ಕೋ ಅಪರೇಟಿವ್‌ ಕ್ರೆಡಿಟ್‌ ಸೊಸೈಟಿ ಲಿ ಉಡುಪಿ ಕೃಷ್ಣ ಕೋರ್ಟ್‌ ಹಿಂದುಗಡೆ ರಸ್ತೆ ಅಜ್ಜರಕಾಡು ಉಡುಪಿ ನಗರ ಇವರು ಇದೇ ಸಂಸ್ಧೆಯಲ್ಲಿ ಹಿಂದೆ ಜವಾನನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಲಚಂದ್ರ ಆಚಾರ್ಯ ಎಂಬವರನ್ನು  ಸಂಸ್ದೆಯಲ್ಲಿ ಸೇವೆಯಿಂದ ಅಮಾನುತು ಗೊಳಿಸಿದ್ದು, ಇದೇ ಕಾರಣದಿಂದ ದಿನಾಂಕ: 27/04/2015 ರಂದು ಸಂಜೆ ಸುಮಾರು 18:00 ಗಂಟೆಗೆ ಫಿರ್ಯಾದಿದಾರರು ಕಛೇರಿಯಲ್ಲಿರುವಾಗ ರಾಮರಾವ್‌ರವರ ಕುಮ್ಮಕ್ಕಿನಿಂದ ಅಲ್ಲಿಗೆ ಬಂದು ಫಿರ್ಯಾದಿದಾರರನ್ನು ಉದ್ದೇಶಿಸಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 96/2015 ಕಲಂ 504, 506 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಸಂಶಯಾಸ್ಪದ ವ್ಯಕ್ತಿಯ ಬಂಧನ

  • ಬೈಂದೂರು: ಸಂತೋಷ ಏ ಕಾಯ್ಕಿಣಿ ಪೊಲೀಸ್‌ ಉಪನಿರೀಕ್ಷಕರು ಬೈಂದೂರು ಪೊಲೀಸ್‌ ಠಾಣೆ   ಇವರು ದಿನಾಂಕ 28-4-2015 ರ ರಾತ್ರಿ 4 ಗಂಟೆಗೆ ಶೀರೂರಿನಲ್ಲಿ  ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಾತ್ಮಿದಾರರೊಬ್ಬರು ದೂರವಾಣಿ ಕರೆ ಮಾಡಿ ಮೇಲ್ಪೇಟೆಯಲ್ಲಿ ಓರ್ವ ವ್ಯಕ್ತಿಯು ಕರ್ನಾಟಕ ಬ್ಯಾಂಕ್ ನ ಹತ್ತಿರ ಕತ್ತಲೆಯಲ್ಲಿ ಓರ್ವ ವ್ಯಕ್ತಿಯು ಮುಖವನ್ನು ಕರವಸ್ತ್ರದಲ್ಲಿ ಮರೆ ಮಾಚಿ ಅಡಗಿಕೊಂಡಿರುವುದಾಗಿ ಮಾಹಿತಿ ನೀಡಿದ ಮೇರೆಗೆ ರಾತ್ರಿ 04:05 ಗಂಟೆಗೆ ಶೀರೂರು ಮೇಲ್ಪೇಟೆಯಲ್ಲಿ ಇಲಾಖಾ ಜೀಪನ್ನು  ನಿಲ್ಲಿಸಿ  ನೋಡುವಾಗ ಅಲ್ಲಿಂದ ಕತ್ತಲೆಯಲ್ಲಿ ಓಡಿ ಹೋಗಲು ಪ್ರಯತ್ನಿಸಿದಾಗ ಪಿರ್ಯಾಧಿದಾರರು ಹಾಗೂ ಮೀನುಗಾರಿಕೆಗೆ ಹೋಗುತ್ತಿದ್ದ  ಸಾರ್ವಜನಿಕರ ಸಹಾಯದಿಂದ ಸದ್ರಿ ವ್ಯಕ್ತಿಯನ್ನು ಹಿಡಿಯಲು ಪ್ರಯತ್ನಿಸಿದಲ್ಲಿ ಆತನು ತೀವ್ರ ಪ್ರತಿರೋಧ ಒಡ್ಡಿದ್ದು, ನಂತರ 04-15 ಗಂಟೆಗೆ ಆತನನ್ನು ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರನ್ನು ತಪ್ಪು ತಪ್ಪಾಗಿ ಹೇಳಿದ್ದು ನಂತರ ಕೂಲಂಕುಶವಾಗಿ ವಿಚಾರಿಸಲಾಗಿ ಯು.ಅಬು ಮಹಮ್ಮದ್ ಪ್ರಾಯ-40 ವರ್ಷ, ತಂದೆ-ದಿ. ಎನ್.ಖಾದಿರ್ ಭಾಷಾ, ವಾಸ: ಮೆಹರ್ ಮಂಜಿಲ್  ಮುಸ್ಲಿಂ  ಮೊಹಲ್ಲ, ಶೀರೂರು ಗ್ರಾಮ, ಕುಂದಾಪುರ  ತಾಲೂಕು ಉಡುಪಿ ಜಿಲ್ಲೆ ಎಂಬುದಾಗಿ ತಿಳಿಸಿದ್ದು, ಈತನು  ಕೈಯಲ್ಲಿ  ಕಬ್ಬಿಣದ ರಾಡ್ 1 ನ್ನು ಹಿಡಿದುಕೊಂಡಿದ್ದು ಈತ  ಅಪರಾತ್ರಿಯಲ್ಲಿ ಆತನ ಇರುವಿಕೆಯ ಬಗ್ಗೆ ಕಾರಣ ಕೇಳಲಾಗಿ ಆತನು ಸಮರ್ಪಕವಾದ ಉತ್ತರವನ್ನು ನೀಡಿರುವುದಿಲ್ಲ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 103/2015 ಕಲಂ:96(ಎ)(ಬಿ) ಕೆ.ಪಿ ಕಾಯಿದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: